ತಿರುವನಂತಪುರಂ : ಮಲಯಾಳಂನ ಜನಪ್ರಿಯ ಯೂಟ್ಯೂಬರ್ ಹಾಗೂ ನಟ ಅಖಿಲ್ ಎನ್ ಆರ್ ಡಿ ಮತ್ತು ಅವರ ಪತ್ನಿ ಮೇಘಾ ನಡುವಿನ ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹಾಗೂ ವದಂತಿಗಳು ಹರಿದಾಡುತ್ತಿವೆ. ಮೇಘಾ ಮನೆಯಿಂದ ಹೊರನಡೆದಿದ್ದಾರೆ ಎಂಬ ಸುದ್ದಿಯ ಜೊತೆಗೆ, ವಿವಿಧ ಆರೋಪಗಳು ನೆಟಿಜನ್ಗಳ ನಡುವೆ ವೈರಲ್ ಆಗುತ್ತಿವೆ.
ಕೆಲವು ಇಂಟರ್ನೆಟ್ ಪೋಸ್ಟ್ಗಳು ಮೇಘಾ ಬಸ್ ಉದ್ಯೋಗಿಯೊಂದಿಗೆ ಓಡಿಹೋಗಿದ್ದಾರೆ ಎಂದು ಆರೋಪಿಸುತ್ತಿವೆ. ಆದರೆ, ಈ ಆರೋಪಗಳಿಗೆ ಯಾವುದೇ ಅಧಿಕೃತ ಸಾಕ್ಷ್ಯಗಳಾಗಲಿ ಅಥವಾ ಸ್ವತಂತ್ರ ದೃಢೀಕರಣವಾಗಲಿ ಸಿಕ್ಕಿಲ್ಲ. ಅಖಿಲ್ ಅಥವಾ ಮೇಘಾ ಇಬ್ಬರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಈ ಕುರಿತಂತೆ ಅಖಿಲ್ ಸ್ನೇಹಿತ ವಿಡಿಯೋ ಒಂದನ್ನು ಮಾಡಿ ಹೇಳಿಕೆ ನೀಡಿದ್ದು, “ಅಖಿಲ್ ಪರಿಸ್ಥಿತಿಯನ್ನು ಒಪ್ಪಿಕೊಂಡು ಜೀವನದಲ್ಲಿ ಮುಂದುವರಿಯಲು ಯತ್ನಿಸುತ್ತಿದ್ದಾರೆ. ಯಾರೂ ಮೇಘಾ ಅವರನ್ನು ದೂಷಿಸಬೇಡಿ ಅಥವಾ ಕಿರುಕುಳ ನೀಡಬೇಡಿ.” ಎಂದಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಮೇಘಾ ಅವರ ಪ್ರೊಫೈಲ್ನಲ್ಲಾದ ಬದಲಾವಣೆಗಳನ್ನು ಇಟ್ಟುಕೊಂಡು ಜನರು ಹಲವು ರೀತಿ ವಿಶ್ಲೇಷಿಸುತ್ತಿದ್ದಾರೆ. ಆದರೆ, ಅಖಿಲ್ ಅವರ ಆಪ್ತ ಸ್ನೇಹಿತ ಸಾಯಿ ಕೃಷ್ಣ ಸೋಷಿಯಲ್ ಮೀಡಿಯಾ ಬಳಕೆದಾರರಲ್ಲಿ ಮನವಿ ಮಾಡಿದ್ದು, “ಅಖಿಲ್ ತಮ್ಮ ಪತ್ನಿಯ ವಿರುದ್ದ ಟ್ರೋಲ್ ಮಾಡುವುದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ಅವರು ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದೆ ಸಾಗಲು ಯತ್ನಿಸುತ್ತಿದ್ದಾರೆ. ದಯವಿಟ್ಟು ಯಾರೂ ಮೇಘಾ ಅವರನ್ನ ದೂಷಿಸಬೇಡಿ” ಎಂದು ಹೇಳಿದ್ದಾರೆ.
ಯೂಟ್ಯೂಬ್ನಲ್ಲಿ ಸುಮಾರು 4.9 ಮಿಲಿಯನ್ (49 ಲಕ್ಷ) ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್ನಲ್ಲಿ 1.8 ಮಿಲಿಯನ್ಗೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಖಿಲ್, ಮಲಯಾಳಂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಜನಪ್ರಿಯತೆ ಗಳಿಸಿದ್ದಾರೆ. ಇತ್ತೀಚೆಗೆ ಜುಲೈ 2026 ರಲ್ಲಿ ಬಿಡುಗಡೆಯಾದ ‘ಮಹಾರಾಜ ಹಾಸ್ಟೆಲ್’ ಚಿತ್ರದ ಮೂಲಕ ಬೆಳ್ಳಿಪರದೆಗೂ ನಟನಾಗಿ ಪಾದಾರ್ಪಣೆ ಮಾಡಿದ್ದರು. ಪ್ರಸ್ತುತ ಈ ವಿಷಯದ ಬಗ್ಗೆ ದಂಪತಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.








