Close Menu
    What's Hot

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ದೆಹಲಿಯಲ್ಲಿ ಬಾಂಬ್ ಬೆದರಿಕೆಗಳ ಸರಣಿ; ಕೆಂಪುಕೋಟೆ, ವಿಮಾನ ನಿಲ್ದಾಣ ಸೇರಿ ಹಲವೆಡೆ ಹೈಅಲರ್ಟ್
    ಅಪರಾಧ

    ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ದೆಹಲಿಯಲ್ಲಿ ಬಾಂಬ್ ಬೆದರಿಕೆಗಳ ಸರಣಿ; ಕೆಂಪುಕೋಟೆ, ವಿಮಾನ ನಿಲ್ದಾಣ ಸೇರಿ ಹಲವೆಡೆ ಹೈಅಲರ್ಟ್

    adminBy adminAugust 14, 2026No Comments2 Mins Read

    ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ  ಕೇವಲ ಒಂದು ದಿನ ಬಾಕಿ ಇರುವಾಗ, ಶುಕ್ರವಾರ ಸಾಲು ಸಾಲು ಬಾಂಬ್ ಬೆದರಿಕೆ ಕರೆಗಳಿಂದ ರಾಷ್ಟ್ರ ರಾಜಧಾನಿ ದೆಹಲಿ ಆತಂಕಕ್ಕೊಳಗಾಗಿದೆ. ದೆಹಲಿ ಕೆಂಪುಕೋಟೆ ಹಾಗೂ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3 ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಪ್ರಾಥಮಿಕ ತಪಾಸಣೆಯಲ್ಲಿ ಯಾವುದೇ ಸ್ಥಳದಲ್ಲೂ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.

    ಇಮೇಲ್‌ನಲ್ಲಿ ದೆಹಲಿ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು, ಕೆಂಪುಕೋಟೆ ಹಾಗೂ ದೆಹಲಿಯ ರೈಲುಗಳನ್ನು ಗುರಿಯಾಗಿಸುವುದಾಗಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ದೆಹಲಿಯನ್ನು ‘ಖಾಲಿಸ್ತಾನ್’ನ ಭಾಗವಾಗಿ ಮಾಡುವುದಾಗಿಯೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. “ಮಧ್ಯಾಹ್ನ 2:11ಕ್ಕೆ ದೆಹಲಿ ಹೈಕೋರ್ಟ್‌ನಲ್ಲಿ ಬಾಂಬ್ ಸ್ಫೋಟ” ಎಂದು ಇ-ಮೇಲ್​ನಲ್ಲಿ ಬರೆಯಲಾಗಿದ್ದು, 1984ರ ಸಿಖ್ ವಿರೋಧಿ ದಂಗೆ ಸೇರಿದಂತೆ ಸಿಖ್ಖರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ದೆಹಲಿ ಹೈಕೋರ್ಟ್ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಇದನ್ನೇ ದಾಳಿಯ ಬೆದರಿಕೆಗೆ ಕಾರಣವೆಂದು ಬಿಂಬಿಸಲು ಯತ್ನಿಸಲಾಗಿದೆ.

    ಬಾಂಬ್ ಬೆದರಿಕೆ ಬಂದ ಇತರ ಸ್ಥಳಗಳು:

    ಇಮೇಲ್‌ನಲ್ಲಿ ಉಲ್ಲೇಖಿಸಲಾದ ಸ್ಥಳಗಳ ಜೊತೆಗೆ, ಜಾಮ್ ನಗರ ಹೌಸ್, ಜಂಡೇವಾಲನ್‌ನಲ್ಲಿರುವ FLATED ಕಟ್ಟಡ, ಎಂ.ಬಿ ಸಾಕೆಟ್‌ನಲ್ಲಿರುವ ಡಿಎಂ ಕಚೇರಿ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ಮತ್ತು ದೆಹಲಿ ಕಾಂಟೋನ್ಮೆಂಟ್‌ನಲ್ಲಿರುವ ಎಸ್‌ಡಿಎಂ ಕಚೇರಿ ಸೇರಿದಂತೆ ಇತರೆ ಹಲವು ಸಂಸ್ಥೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ.

    ಬೆದರಿಕೆ ಬೆನ್ನಲ್ಲೇ ಅಗ್ನಿಶಾಮಕ ದಳ ಮತ್ತು ತುರ್ತು ಸೇವಾ ಸಿಬ್ಬಂದಿಯನ್ನು ಎಲ್ಲಾ ಸ್ಥಳಗಳಲ್ಲೂ ನಿಯೋಜಿಸಲಾಗಿದೆ. ಆದರೆ, ತನಿಖೆಯ ವೇಳೆ ಇದುವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲನ್ನು ತೀವ್ರಗೊಳಿಸಿವೆ.

    19 ಜನ ವಾಂಟೆಡ್ ಭಯೋತ್ಪಾದಕರ ಪಟ್ಟಿ ಬಿಡುಗಡೆ:

    ಈ ವಾರದ ಆರಂಭದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು, ಖಾಲಿಸ್ತಾನಿ ಬೆಂಬಲಿತ ಗ್ರೂಪ್‌ಗಳು ಮತ್ತು ದಿಢೀರ್ ಪ್ರತಿಭಟನೆಗಳ ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದರು. ಹೆಚ್ಚುವರಿ ಭದ್ರತಾ ಯೋಜನೆಯ ಭಾಗವಾಗಿ, ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಮತ್ತು ಖಾಲಿಸ್ತಾನಿ ಗುಂಪುಗಳಿಗೆ ಸೇರಿದ 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಫೋಟೋಗಳನ್ನು ನಗರದ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗಿತ್ತು.

    ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು ಹಾಗೂ ಖಾಲಿಸ್ತಾನಿ ಶಕ್ತಿಗಳಿಂದ ಬೆದರಿಕೆ ಇರುವ ಬಗ್ಗೆ ಗುಪ್ತಚರ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಈ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಚರಣೆಗೆ ಧಕ್ಕೆ ತರಬಹುದಾದ ತಡರಾತ್ರಿ ಅಥವಾ ದಿಢೀರ್ ಪ್ರತಿಭಟನೆಗಳ ಮೇಲೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.




    #national
    Previous Articleರಾಷ್ಟ್ರೀಯ ಹೆದ್ದಾರಿಯಲ್ಲಿ ಆ್ಯಂಬುಲೆನ್ಸ್‌ಗೆ ಹೊಸ ರೂಲ್ಸ್; ತಡವಾದ್ರೆ ಭಾರೀ ದಂಡ, NHAI ಜಾರಿಗೆ ತಂದ ನಿಯಮಗಳೇನು?
    Next Article ಜೈಲಿನೊಳಗೆ ಮೊಬೈಲ್ ಪೂರೈಕೆಯ ವ್ಯವಸ್ಥಿತ ಜಾಲ; ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆಂಧ್ರ ಲಿಂಕ್ ಬಯಲು

    Related Posts

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕುಂಪಲ ಬೈಪಾಸ್‌ನಲ್ಲಿ ಭೀಕರ ಅಪಘಾತ; ಎರಡು ಕಾರುಗಳ ನಡುವೆ ಸಿಲುಕಿ 68 ವರ್ಷದ ವ್ಯಕ್ತಿ ಸಾವು

    September 30, 2026

    ವಿಮಾನದಲ್ಲೇ ಪೈಲಟ್‌ಗಳ ನಡುವೆ ಗಲಾಟೆ; ತುರ್ತು ಸಂಕೇತದ ಬಳಿಕ ದುಬೈ-ಇಸ್ರೇಲ್ ವಿಮಾನ ಸೌದಿಯಲ್ಲಿ ಲ್ಯಾಂಡ್

    September 30, 2026

    ಜೋಕಟ್ಟೆ ಎಂಆರ್‌ಪಿಎಲ್‌ ಘಟಕದಲ್ಲಿ ಸ್ಫೋಟ; ಗುತ್ತಿಗೆ ಕಾರ್ಮಿಕ ಸಾವು, ತನಿಖೆಗೆ ಆದೇಶ

    September 30, 2026

    ಮಂಗಳೂರು ಎಂಆರ್‌ಪಿಎಲ್‌ನಲ್ಲಿ ಭಾರೀ ಸ್ಫೋಟ; ಎಂಟು ಮಂದಿಗೆ ಗಾಯ, ಬೆಂಕಿ ನಂದಿಸುವಲ್ಲಿ ಯಶಸ್ಸು

    September 30, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    25ಕ್ಕೂ ಹೆಚ್ಚು ದೂರುಗಳ ಬೆನ್ನಲ್ಲೇ ನಕಲಿ ಲೇಡಿ PSI ಅರೆಸ್ಟ್; ಚಿನ್ನ, ಕಾರು, ಹಣ ವಂಚನೆ ಆರೋಪ

    September 30, 2026

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.