Close Menu
    What's Hot

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಬಂಧನ; ಬೆರಳಚ್ಚು ಪರಿಶೀಲನೆಯಿಂದ ಅಸಲಿ ಗುರುತು ಪತ್ತೆ
    ಅಪರಾಧ

    ಮಂಗಳೂರು: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಬಂಧನ; ಬೆರಳಚ್ಚು ಪರಿಶೀಲನೆಯಿಂದ ಅಸಲಿ ಗುರುತು ಪತ್ತೆ

    adminBy adminAugust 19, 2026No Comments1 Min Read

    ಮಂಗಳೂರು: ಸುಮಾರು 15 ವರ್ಷಗಳಿಂದ ನ್ಯಾಯಾಲಯದ ಎಲ್‌ಪಿಸಿ (LPC) ವಾರೆಂಟ್‌ಗೆ ತಲೆಮರೆಸಿಕೊಂಡಿದ್ದ ಆರೋಪಿತೆಯನ್ನು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಪತ್ತೆಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ 2011ರಲ್ಲಿ ಅನೈತಿಕ ಮಾನವ ಸಾಗಣೆ ತಡೆ ಕಾಯ್ದೆ ಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಮಂಗಳೂರಿನ 3ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ SPLIT CC ನಂ. 02/2014ರಂತೆ ವಿಚಾರಣೆಯಾಗಿ, LPC ನಂ. 10/2019ರಂತೆ ದೀರ್ಘಕಾಲದಿಂದ ಬಾಕಿ ಉಳಿದಿತ್ತು.

    ಪ್ರಕರಣದ ಎಲ್‌ಪಿಸಿ ವಾರೆಂಟ್ ಆರೋಪಿತೆಯಾಗಿದ್ದ ಆಯಿಷಾ (36), ಪತಿ ಹಸನಬ್ಬ, ಬಂಗ್ಲಗುಡ್ಡೆ ಮನೆ, ಗುರುಪುರ, ಮಂಗಳೂರು ಎಂಬ ವಿಳಾಸವನ್ನು ನೀಡಿದ್ದರು. ಪ್ರಕರಣ ದಾಖಲಾಗಿ ದಸ್ತಗಿರಿಯಾದ ಸಂದರ್ಭದಲ್ಲಿ ತಮ್ಮ ನಿಜವಾದ ಹೆಸರು, ಪತಿಯ ಹೆಸರು ಹಾಗೂ ವಿಳಾಸವನ್ನು ಮರೆಮಾಚಿ ಸುಳ್ಳು ಮಾಹಿತಿ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

    ನಂತರ ಆರೋಪಿತೆಯ ನಿಜವಾದ ಹೆಸರು ಸೆಫಿಯಾ (53), ಪತಿ ದಿವಂಗತ ಅಬೂಬುಕ್ಕರ್, ಹಂಡೇಲ ಮಸೀದಿ ಬಳಿ, ಪುತ್ತಿಗೆ ಗ್ರಾಮ, ಬಡಗಮಿಜಾರು, ಮಿಜಾರು, ಮೂಡಬಿದರೆ ತಾಲೂಕು, ಮಂಗಳೂರು ಎಂಬುದು ಪತ್ತೆಯಾಗಿದೆ. ಹೆಸರು ಹಾಗೂ ವಿಳಾಸ ಬದಲಿಸಿಕೊಂಡು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 15 ವರ್ಷಗಳಿಂದ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿತೆಯ ಬೆರಳಚ್ಚನ್ನು ಮಂಗಳೂರು ಬೆರಳಚ್ಚು ಘಟಕದ ತಜ್ಞರಿಂದ ಪರಿಶೀಲಿಸಲಾಗಿದ್ದು, ಆಯಿಷಾ ಹೆಸರಿನಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 2011ರ ಪ್ರಕರಣದ ಕಡತದಲ್ಲಿನ ಬೆರಳಚ್ಚಿನೊಂದಿಗೆ ಹೋಲಿಕೆಯಾಗಿರುವುದಾಗಿ ತಜ್ಞರು ವರದಿ ನೀಡಿದ್ದಾರೆ.

    ಈ ವರದಿಯ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಆರೋಪಿತೆಯನ್ನು ಪತ್ತೆಹಚ್ಚಿ ಆಗಸ್ಟ್ 18, 2026ರಂದು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿತೆಗೆ ನ್ಯಾಯಾಂಗ ಬಂಧನ ವಿಧಿಸಿದೆ.




    #crime #dakshinakannada
    Previous Articleಮಂಗಳೂರು: ದ್ವಿಚಕ್ರ ವಾಹನ ಕಳವು ಆರೋಪ; ಉರ್ವಾ ಪೊಲೀಸರಿಂದ ಆರೋಪಿಯ ಬಂಧನ
    Next Article ‘ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ’ ಎಂದು ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಮಾನಸಿಕಅಸ್ವಸ್ಥ ಮಗ

    Related Posts

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.