Close Menu
    What's Hot

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»‘ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ’ ಎಂದು ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಮಾನಸಿಕಅಸ್ವಸ್ಥ ಮಗ
    ಅಪರಾಧ

    ‘ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ’ ಎಂದು ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದ ಮಾನಸಿಕಅಸ್ವಸ್ಥ ಮಗ

    adminBy adminAugust 19, 2026No Comments1 Min Read

    ತ್ರಿಶೂರ್ : ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆಂಬ ಅನುಮಾನದಿಂದ 46 ವರ್ಷದ ವ್ಯಕ್ತಿಯೊಬ್ಬ ತನ್ನ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೇರಳದ ತ್ರಿಶೂರ್ ಜಿಲ್ಲೆಯ ಪವರಟ್ಟಿಯಲ್ಲಿ ಸೋಮವಾರ ನಡೆದಿದೆ. ಕೊಲೆಯಾದ ದುರ್ದೈವಿಯನ್ನು ಡಾಲಿ (69) ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆಕೆಯ ಮಗ ಬೆನ್ಹಾರ್ (46) ಎಂಬಾತನನ್ನು ಪವರಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಸೋಮವಾರ ಬೆಳಿಗ್ಗೆ 10.30 ರ ಸುಮಾರಿಗೆ ಡಾಲಿ ಅವರು ತಮ್ಮ ಮನೆಯ ವರಾಂಡಾದಲ್ಲಿ ಗುತ್ತಿಗೆ ಕೆಲಸಗಾರ ಡೇವಿಸ್ (57) ಅವರೊಂದಿಗೆ ಮನೆ ನವೀಕರಣದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಮನೆಯಿಂದ ಹೊರಬಂದ ಬೆನ್ಹಾರ್, ಇದ್ದಕ್ಕಿದ್ದಂತೆ ತಾಯಿಯ ಕುತ್ತಿಗೆ ಹಿಡಿದು ಚಾಕುವಿನಿಂದ ಇರಿದಿದ್ದಾನೆ.

    ಪ್ರಾಣಭಯದಿಂದ ಓಡಲು ಯತ್ನಿಸಿದ ಡಾಲಿ ನೆಲಕ್ಕೆ ಬಿದ್ದಾಗ, ಆರೋಪಿ ಮತ್ತೊಮ್ಮೆ ಇರಿದಿದ್ದಾನೆ. ಬಳಿಕ ಮನೆಯೊಳಗೆ ಹೋಗಿ ಮತ್ತೊಂದು ಆಯುಧವನ್ನು ತಂದು ಪದೇ ಪದೇ ತಾಯಿಗೆ ಇರಿದು ಗಾಯಗೊಳಿಸಿದ್ದಾನೆ. ತಡೆಯಲು ಬಂದ ಕೆಲಸಗಾರ ಡೇವಿಸ್ ಅವರ ಕೈಗೂ ಚಾಕು ಇರಿದು ಗಾಯಗೊಳಿಸಲಾಗಿದೆ. ಸ್ಥಳೀಯರು ತಕ್ಷಣವೇ ರಕ್ತದ ಮಡುವಿನಲ್ಲಿದ್ದ ಡಾಲಿ ಅವರನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿದರಾದರೂ, ಬೆಳಿಗ್ಗೆ 11.30 ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

    ಖಿನ್ನತೆ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬೆನ್ಹಾರ್, ಘಟನೆಯ ಬಳಿಕ ಮನೆಯೊಳಗೆ ಶಾಂತವಾಗಿ ಕುಳಿತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. “ಆರಂಭದಲ್ಲಿ ತಾಯಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆಂದು ಅನುಮಾನಪಟ್ಟು ಹಲ್ಲೆ ಮಾಡಿದ್ದಾಗಿ ಹೇಳಿದ್ದ. ಆದರೆ ಬಳಿಕ ‘ನನ್ನ ತಾಯಿ ಚೆನ್ನಾಗಿದ್ದಾರಾ?’ ಎಂದು ಪೊಲೀಸರನ್ನೇ ಪ್ರಶ್ನಿಸುತ್ತಿದ್ದು, ನಿರಂತರವಾಗಿ ಹೇಳಿಕೆ ಬದಲಾಯಿಸುತ್ತಿದ್ದಾನೆ” ಎಂದು ಗುರುವಾಯೂರ್ ಎಸಿಪಿ ಸುರೇಂದ್ರನ್ ಮಂಘಾಟ್ ತಿಳಿಸಿದ್ದಾರೆ.

    ಪವರಟ್ಟಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103 (ಕೊಲೆ) ಹಾಗೂ 118(1) ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.




    #crime #national
    Previous Articleಮಂಗಳೂರು: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಿಳೆ ಬಂಧನ; ಬೆರಳಚ್ಚು ಪರಿಶೀಲನೆಯಿಂದ ಅಸಲಿ ಗುರುತು ಪತ್ತೆ
    Next Article ಅರೇಬಿಯನ್ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿ; 9 ಮೀನುಗಾರರ ಸಾಹಸಿಕ ರಕ್ಷಣೆ

    Related Posts

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕದಂಬ ನೌಕಾನೆಲೆಯಿಂದ ನೌಕಾಪಡೆ ಸಿಬ್ಬಂದಿ ನಾಪತ್ತೆ; ಘಟನೆ ಸುತ್ತ ಅನುಮಾನ

    September 3, 2026

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.