ಗದಗ : ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಯುವಕನನ್ನು ಬರಬರವಾಗಿ ಕೊಲೆ ಮಾಡಲಾಗಿದೆ ಪುಟಗಾವ್ ಬಡ್ನಿಯಲ್ಲಿ ಈರಣ್ಣ ಅಗಸಿಬಾಗಿಲು (35) ಎಂಬ ಯುವಕನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ.
ಪುಟಗಾಂವ್ ಬಡ್ನಿ ಗ್ರಾಮದ ರೇಣುಕಾ ಎಂಬುವರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈರಣ್ಣಗೆ ಕುಟುಂಬಸ್ಥರು ಹಲವು ಬಾರಿ ಬುದ್ಧಿ ಹೇಳಿದರೂ, ಪುನಃ ರೇಣುಕಾಳಿಗೆ ಮೃತ ಈರಣ್ಣ ಸನ್ನೆ ಮಾಡಿದ್ದಾನೆ. ರೇಣುಕಾಳ ಗಂಡ ಹಾಗೂ ಕುಟುಂಬದವರು ಕೊಲೆ ಮಾಡಿದ್ದಾರೆ. ಈರಣ್ಣ ನನ್ನು ಸುರೇಶ್, ಆಂಜನೇಯ ಕಳಸಾಪುರ, ಧರ್ಮಣ್ಣ ಭೋವಿ, ಹನುಮವ್ವ, ರೇಣುಕಾ ಕಳಸಾಪುರ ಕೊಲೆ ಮಾಡಿದ್ದು ಸದ್ಯ ಪೋಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.








