ಕಲಬುರ್ಗಿ : ಎಂತೆಂಥಾ ಕ್ರೂರ ಮನಸ್ಥಿತಿಯ ಜನರಿದ್ದಾರೆ ನೋಡಿ. ಸ್ವಂತ ಮಗನನ್ನೇ ಈ ಪಾಪಿ ತಂದೆ ಜಲಾಶಯಕ್ಕೆ ಎಸೆದು ಕೊಂದಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. 4 ವರ್ಷದ ಮಗನ ಜೊತೆ ಆಟವಾಡ್ತಿದ್ದ ತಂದೆ ಬಳಿಕ ಯಾರಿಗೂ ತಿಳಿಯದಂತೆ ಮಗನನ್ನ ಕರೆದೊಯ್ದು ನಾಲೆಗೆ ಎಸೆದು ಬಂದಿದ್ದಾನೆ ಎಂದು ಮಗುವಿನ ತಾಯಿ ಆರೋಪ ಮಾಡ್ತಿದ್ದಾರೆ.
ಅಸಲಿಗೆ ಆಗಿದ್ದೇನು?
ಕೊಂದು ಜಲಾಶಯಕ್ಕೆ ಬಿಸಾಡಿದ
ನಾಲ್ಕು ವರ್ಷದ ಮಗನನ್ನ ಪಾಪಿ ತಂದೆ ಜಲಾಶಯಕ್ಕೆ ಬಿಸಾಡಿದ್ದು, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಸ್ವಂತ ಮಗುವನ್ನೇ ಕೊಲೆ ಮಾಡಿ ಜಲಾಶಯಕ್ಕೆ ಬಿಸಾಡಿರೋ ಶಂಕೆ ವ್ಯಕ್ತವಾಗಿದೆ.
ಮಗುವನ್ನ ಜಲಾಶಯಕ್ಕೆ ಎಸೆದ ಪಾಪಿ
ಗುಂಡೇಶ್ ಮೃತ ಬಾಲಕನಾಗಿದ್ದು, ಸೋಮರಾವ್ ಹೂಗಾರ್ ಎಂಬಾತನೇ ಮಗನನ್ನು ಕೊಂದು ಜಲಾಶಯಕ್ಕೆ ಬಿಸಾಡಿದ್ದಾನೆ ಎನ್ನಲಾಗ್ತಿದೆ. ಚಿಂಚೋಳಿ ತಾಲೂಕಿನ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.
ಆಟವಾಡ್ತಾ ಮಗುವನ್ನೇ ಕೊಂದ
ಮಗನ ಜೊತೆ ಕೆಲ ಕಾಲ ಆಟವಾಡಿದ ತಂದೆ ಬಳಿಕ ಹೇಳದೆ ಕೇಳದೆ ಕರೆದುಕೊಂಡು ಹೋಗಿದ್ದ ಪಾಪಿ ತಂದೆ ಆತನನ್ನ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ. ಈ ಕುರಿತು ಮಗುವಿನ ತಾಯಿ ಕಲ್ಪನಾ ಚಿಂಚೋಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬಾಲಕನ ಶವ ಪತ್ತೆ, ತಂದೆ ಬಂಧನ
ಪೋಲಿಸರು, ಅಗ್ನಿಶಾಮಕ ದಳದಿಂದ ಶೋಧ ನಡೆಸಿದ್ದು, ಈ ವೇಳೆ ಜಲಾಶಯದಲ್ಲಿ ಬಾಲಕನ ಶವ ಪತ್ತೆಯಾಗಿದೆ. ಆರೋಪಿ ಸೋಮರಾವ್ ಅವರನ್ನ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂಬಂಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








