Close Menu
    What's Hot

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷದ ಚಿನ್ನ; ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಯತ್ನ ಬಯಲು
    ಅಪರಾಧ

    8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷದ ಚಿನ್ನ; ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆ ಯತ್ನ ಬಯಲು

    adminBy adminSeptember 3, 2026No Comments2 Mins Read

    ಕೋಝಿಕ್ಕೋಡ್ : ಕ್ಯಾಲಿಕಟ್‌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8 ತಿಂಗಳ ಮಗುವಿನ ಡೈಪರ್‌ನಲ್ಲಿ ಬಚ್ಚಿಟ್ಟು ಸುಮಾರು ₹50 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಘಟನೆ ಇದೀಗ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳನ್ನು ತೀವ್ರ ಆತಂಕಕ್ಕೀಡುಮಾಡಿದೆ. ಕೇರಳದಲ್ಲಿ ತಪಾಸಣೆಯಿಂದ ಬಚಾವ್‌ ಆಗಲು ಚಿಕ್ಕ ಮಗುವನ್ನೇ ‘ವಾಹಕ’ವಾಗಿ ಬಳಸಿಕೊಂಡ ಮೊದಲ ಪ್ರಕರಣ ಇದಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆ ಬೆನ್ನಲ್ಲೇ ತಮ್ಮ ಸ್ಕ್ರೀನಿಂಗ್ ನಿಯಮಗಳನ್ನು ಮರುಪರಿಶೀಲಿಸಲು ಕಸ್ಟಮ್ಸ್ ಇಲಾಖೆ ನಿರ್ಧರಿಸಿದ್ದು, ಇನ್ಮುಂದೆ ವಿದೇಶಗಳಿಂದ ಬರುವ ಶಿಶುಗಳು ಸೇರಿದಂತೆ ಚಿಕ್ಕ ಮಕ್ಕಳ ಮೇಲೆಯೂ ತೀವ್ರ ನಿಗಾ ವಹಿಸಲು ಮುಂದಾಗಿದೆ.

    ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಧ್ಯರಾತ್ರಿ ಪೊನ್ನಾನಿ ಮೂಲದ ವ್ಯಕ್ತಿಯೊಬ್ಬರಿಂದ ₹1 ಕೋಟಿ ಮೌಲ್ಯದ 1 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಪೈಕಿ ಅರ್ಧ ಕೆಜಿ ಚಿನ್ನವನ್ನು ವ್ಯಕ್ತಿ ತನ್ನ ದೇಹದಲ್ಲಿ ಬಚ್ಚಿಟ್ಟಿದ್ದರೆ, ಇನ್ನುಳಿದರ್ಧ ಕೆಜಿ ಚಿನ್ನವನ್ನು ತನ್ನ 8 ತಿಂಗಳ ಮಗುವಿನ ಡೈಪರ್‌ನಲ್ಲಿ ಅಡಗಿಸಿಟ್ಟಿದ್ದ.

    ವಿಚಾರಣೆ ವೇಳೆ ಈತನ ಪತ್ನಿಯನ್ನು ಕೂಡ ಕೆಲವು ದಿನಗಳ ಹಿಂದೆ ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ 1.78 ಕೆಜಿ ಚಿನ್ನ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ತನಗೆ 4 ಮಂದಿ ಪತ್ನಿಯರು ಹಾಗೂ 15 ಮಕ್ಕಳಿದ್ದಾರೆ ಎಂದು ಆರೋಪಿ ತಿಳಿಸಿದ್ದು, ಈ ಇಡೀ ಕುಟುಂಬವೇ ಸಂಘಟಿತ ಕಳ್ಳಸಾಗಣೆ ಜಾಲದ ಭಾಗವಾಗಿದೆಯೇ ಎಂಬ ಕೋನದಲ್ಲಿ ಡಿಆರ್‌ಐ ತನಿಖೆ ನಡೆಸುತ್ತಿದೆ.
    ಸಾಮಾನ್ಯವಾಗಿ ಸಾರ್ವಜನಿಕರಿಗೆ ಹಾಗೂ ಶಿಶುಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಕ್ಕಳ ತಪಾಸಣೆಯಲ್ಲಿ ಕೊಂಚ ಉದಾರ ನೀತಿ ತಳೆಯಲಾಗುತ್ತಿತ್ತು. ಅಲ್ಲದೆ, ಪೇಸ್ಟ್ ರೂಪದ ಚಿನ್ನವನ್ನು ಸಾಮಾನ್ಯ ಮೆಟಲ್ ಡಿಟೆಕ್ಟರ್‌ಗಳು  ಪತ್ತೆ ಹಚ್ಚುವುದಿಲ್ಲ. ಇಂತಹ ಮಾನವೀಯ ನಡೆಯನ್ನೇ ಕಳ್ಳಸಾಗಣೆದಾರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಬಟ್ಟೆ, ಎಲೆಕ್ಟ್ರಾನಿಕ್ ಸಾಮಗ್ರಿ ಹಾಗೂ ಮಕ್ಕಳ ಉಡುಪುಗಳಲ್ಲಿ ಚಿನ್ನ ಬಚ್ಚಿಟ್ಟು ತಂದ ಉದಾಹರಣೆಗಳಿದ್ದರೂ, ಮಗುವಿನ ದೇಹಕ್ಕೆ ಧರಿಸಿದ ಡೈಪರ್‌ನಲ್ಲೇ ಚಿನ್ನ ತಂದಿದ್ದು ಇದೇ ಮೊದಲು. ಕಳ್ಳಸಾಗಣೆಯಲ್ಲಿ ಮಗುವಿನ ಪಾತ್ರವಿಲ್ಲದ ಕಾರಣ, ಅದರ ಜೊತೆಗಿದ್ದ ಪೋಷಕರ ಮೇಲೆಯೇ ಸಂಪೂರ್ಣ ಕ್ರಿಮಿನಲ್ ಜವಾಬ್ದಾರಿ ಇರಲಿದ್ದು, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಮಕ್ಕಳನ್ನು ಕಠಿಣ ತಪಾಸಣೆಗೆ ಒಳಪಡಿಸುವುದರಿಂದ ಸಾಮಾನ್ಯ ಪ್ರಯಾಣಿಕರಿಗೆ ಕೊಂಚ ಕಿರಿಕಿರಿಯಾಗಬಹುದು. ಆದರೆ, ಈ ರೀತಿಯ ದುರ್ಬಳಕೆಯನ್ನು ತಡೆಯಲು ಬೇರೆ ದಾರಿಯಿಲ್ಲ. ಹೀಗಾಗಿ ಭವಿಷ್ಯದಲ್ಲಿ ಶಿಶುಗಳು ಹಾಗೂ ಮಕ್ಕಳನ್ನೂ ಬಿಗಿಯಾದ ಸ್ಕ್ರೀನಿಂಗ್ ಪ್ರಕ್ರಿಯೆಗೆ ಒಳಪಡಿಸಲು ಮತ್ತು ವಿಮಾನ ನಿಲ್ದಾಣದ ಹೊರಗೆಯೂ ಪೊಲೀಸರ ಕಾವಲು ಹೆಚ್ಚಿಸಲು ತೀರ್ಮಾನಿಸಲಾಗಿದೆ.

     




    #crime #national
    Previous Article‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ
    Next Article ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    Related Posts

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ

    September 3, 2026

    ‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.