ನವದೆಹಲಿ: ಬಿನ್ ಲಾಡೆನ್ ಇದ್ದಂತೆಯೇ, ದಾವೂದ್ ಇಬ್ರಾಹಿಂ ಕೂಡ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತಿಳಿಸಿದೆ.
ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರರೊಬ್ಬರ ವರದಿಯಲ್ಲಿನ ಸ್ಪಷ್ಟವಾದ ದೋಷಗಳನ್ನು ಭಾರತವು ಎತ್ತಿ ತೋರಿಸಿದೆ. ಅಲ್ಲದೆ, ವಿಶ್ವಸಂಸ್ಥೆಗೆ ಹಾನಿಯುಂಟುಮಾಡಬಲ್ಲ ಸುಳ್ಳುಗಳನ್ನು ಮಂಡಿಸಿದ್ದಕ್ಕಾಗಿ ಹೊಣೆಗಾರಿಕೆ ಹೊರುವಂತೆ ಆಗ್ರಹಿಸಿದೆ.
ವಿಶೇಷ ವರದಿಗಾರ ಬೆನ್ ಸಾಲ್ ತಮ್ಮ ಜುಲೈ ವರದಿಯಲ್ಲಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಭಾರತದಲ್ಲಿ ನೆಲೆಸಿದ್ದಾನೆ ಎಂದು ಹೇಳಿದ್ದರು.








