Close Menu
    What's Hot

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026

    ಜೈಲಿನಲ್ಲೇ ವಾರ್ಡನ್‌ಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 5 ಆರೋಪಿಗಳ ವಿರುದ್ಧ ಕೇಸ್

    September 4, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಜೈಲಿನಲ್ಲೇ ವಾರ್ಡನ್‌ಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 5 ಆರೋಪಿಗಳ ವಿರುದ್ಧ ಕೇಸ್
    ಅಪರಾಧ

    ಜೈಲಿನಲ್ಲೇ ವಾರ್ಡನ್‌ಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 5 ಆರೋಪಿಗಳ ವಿರುದ್ಧ ಕೇಸ್

    adminBy adminSeptember 4, 2026No Comments2 Mins Read

    ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವು ಇತ್ತೀಚಿನ ದಿನಗಳಲ್ಲಿ ಸದಾ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಾಗುತ್ತಿದೆ. ಇದೀಗ ಜೈಲಿನ ಭದ್ರತೆಯನ್ನು ಕಾಯುವ ವಾರ್ಡನ್ ಮೇಲೆಯೇ ವಿಚಾರಣಾದೀನ ಖೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

    ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.

    ಘಟನೆಯ ವಿವರ

    ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಹವೇಲಿ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಸೆಪ್ಟೆಂಬರ್ 02 ರಂದು ಬೆಳಿಗ್ಗೆ ಅನೆಕ್ಸ್-1ರಲ್ಲಿ ಮಂಜುನಾಥ್ ಅವರು ಕರ್ತವ್ಯದಲ್ಲಿದ್ದಾಗ ಐವರು ಆರೋಪಿಗಳು ಅವರನ್ನು ಬಲವಂತವಾಗಿ ನಾಲ್ಕನೇ ಕೊಠಡಿಗೆ ಎಳೆದೊಯ್ದು ಮನಬಂದಂತೆ ಥಳಿಸಿದ್ದಾರೆ.

    ಹಲ್ಲೆಗೆ ಕಾರಣವೇನು?

    ಆಗಸ್ಟ್ 22 ರಂದು ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಈ ಆರೋಪಿಗಳು ಜೈಲಿನೊಳಗೆ ಕೆಲವು ನಿಷೇಧಿತ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದರು. ಈ ವೇಳೆ ಜಾಗರೂಕರಾಗಿದ್ದ ವಾರ್ಡನ್ ಮಂಜುನಾಥ್ ಹವೇಲಿ ಆ ವಸ್ತುಗಳನ್ನು ತಡೆಹಿಡಿದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಅಂದೇ ಮಂಜುನಾಥ್ ಅವರಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜೈಲಿನ ನಿಯಮಗಳನ್ನು ಬಿಗಿಗೊಳಿಸಿರುವುದು ಸಹ ಈ ಖೈದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಕತ್ತು ಹಿಸುಕಿ ಕೊಲ್ಲಲು ಯತ್ನ

    ದೂರಿನ ಅನ್ವಯ, ಆರೋಪಿಗಳು ಮಂಜುನಾಥ್ ಅವರ ಮುಖ ಮತ್ತು ಮೂಗಿಗೆ ಮುಷ್ಠಿಯಿಂದ ಬಲವಾಗಿ ಗುದ್ದಿದ್ದಾರೆ. ಅಷ್ಟೇ ಅಲ್ಲದೆ, ಜೈಲಿನಲ್ಲೇ ಅವರ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಇತರ ಸಿಬ್ಬಂದಿ ಧಾವಿಸಿ ವಾರ್ಡನ್ ಅವರನ್ನು ರಕ್ಷಿಸಿದ್ದಾರೆ.

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ವಿಚಾರಣಾದೀನ ಖೈದಿಗಳಾಗಿರುವ ಮೊಹಮದ್ ಮುಶಾಮೀರ್, ಅಬ್ದುಲ್ ಶಪ್ಗನ್, ಮೊಹ್ಮದ್ ರಿಜ್ವಾನ್, ನಿಯಾಜ್, ಕಲಂದರ್ ವಿರುದ್ಧ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ತಮ್ಮ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ಕುರಿತು ಮಂಜುನಾಥ್ ಹವೇಲಿ ಅವರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಜೈಲಿನೊಳಗೆ ರಕ್ಷಣೆ ನೀಡಬೇಕಾದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆದಿರುವುದು ಕಾರಾಗೃಹದ ಭದ್ರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ.

    #crime #karnataka
    Previous Article9 ತಿಂಗಳ ಗರ್ಭಿಣಿ ಪತ್ನಿಯ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ, ₹75 ಸಾವಿರ ದಂಡ
    Next Article ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    Related Posts

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026

    9 ತಿಂಗಳ ಗರ್ಭಿಣಿ ಪತ್ನಿಯ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ, ₹75 ಸಾವಿರ ದಂಡ

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಅಮೆರಿಕದ ‘ಮೋಸ್ಟ್ ವಾಂಟೆಡ್’ ಪಟ್ಟಿಗೆ ಭಾರತೀಯ ಮೂಲದ ವಂಚಕ: ಬಂಧನಕ್ಕೆ ₹1.25 ಕೋಟಿ ಬಹುಮಾನ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026

    ಜೈಲಿನಲ್ಲೇ ವಾರ್ಡನ್‌ಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 5 ಆರೋಪಿಗಳ ವಿರುದ್ಧ ಕೇಸ್

    September 4, 2026

    9 ತಿಂಗಳ ಗರ್ಭಿಣಿ ಪತ್ನಿಯ ಹತ್ಯೆ: ಪತಿಗೆ ಜೀವಾವಧಿ ಶಿಕ್ಷೆ, ₹75 ಸಾವಿರ ದಂಡ

    September 4, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026

    ಜೈಲಿನಲ್ಲೇ ವಾರ್ಡನ್‌ಗೆ ಕತ್ತು ಹಿಸುಕಿ ಕೊಲೆ ಮಾಡಲು ಯತ್ನ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ 5 ಆರೋಪಿಗಳ ವಿರುದ್ಧ ಕೇಸ್

    September 4, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.