Close Menu
    What's Hot

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ದಕ್ಷಿಣ ಕನ್ನಡದ 7 ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ
    ಕರಾವಳಿ ಸುದ್ದಿ

    ದಕ್ಷಿಣ ಕನ್ನಡದ 7 ಗ್ರಾಮ ಪಂಚಾಯಿತಿಗಳಿಗೆ ಲೋಕಾಯುಕ್ತ ದಾಳಿ: ದಾಖಲೆಗಳ ಪರಿಶೀಲನೆ

    adminBy adminSeptember 8, 2026No Comments1 Min Read

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭ್ರಷ್ಟಾಚಾರ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು, ವಿವಿಧ ತಾಲೂಕುಗಳ ಒಟ್ಟು ೭ ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಏಕಕಾಲಕ್ಕೆ ಸಮಗ್ರ ದಾಳಿ ನಡೆಸಿ ವ್ಯಾಪಕ ಪರಿಶೀಲನೆ ಕೈಗೊಂಡಿದ್ದಾರೆ. ಸಾರ್ವಜನಿಕರಿಂದ ಸರಣಿ ಭ್ರಷ್ಟಾಚಾರ, ಖಾತಾ ಬದಲಾವಣೆ, ಸರ್ಕಾರದ ಯೋಜನೆಗಳ ಅನುಷ್ಠಾನ ಹಾಗೂ ಸಾರ್ವಜನಿಕ ಕೆಲಸಗಳಲ್ಲಿ ಅಕ್ರಮ ಮತ್ತು ಲಂಚದ ಬೇಡಿಕೆ ಕುರಿತು ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಮಹತ್ವದ ಕಾರ್ಯಾಚರಣೆ ನಡೆದಿದೆ. ಮಂಗಳೂರು ತಾಲೂಕಿನ ಪೆರ್ಮುದೆ ಗ್ರಾಮ ಪಂಚಾಯತಿ, ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತಿ, ಮಾಣಿ ಗ್ರಾಮ ಪಂಚಾಯತಿ, ಗೊಳ್ತಮಜಲು ಗ್ರಾಮ ಪಂಚಾಯತಿ, ಪಾಣೆಮಂಗಳೂರು / ಅಡ್ಯಾರ್ ಗ್ರಾಮ ಪಂಚಾಯತಿ, ಕುವೆಟ್ಟು ಗ್ರಾಮ ಪಂಚಾಯತಿ, ಮಡಂತ್ಯಾರ್ ಗ್ರಾಮ ಪಂಚಾಯತಿ, ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ಏಕಕಾಲಕ್ಕೆ ಈ ೭ ಪಂಚಾಯತ್ ಕಚೇರಿಗಳಿಗೆ ದಾಳಿ ನಡೆಸಲಾಗಿದೆ. ಕಚೇರಿಯಲ್ಲಿದ್ದ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್‌, ತೆರಿಗೆ ವಸೂಲಾತಿ, ನಿರ್ಮಾಣ ಪರವಾನಗಿ ಹಾಗೂ ೧೫ನೇ ಹಣಕಾಸು ಯೋಜನೆಗಳ ಅನುದಾನ ಬಳಕೆಯ ಕಡತಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆಯಲಾಗುತ್ತಿದೆ. ಲೋಕಾಯುಕ್ತರ ಈ ದಿಢೀರ್ ಪ್ರಹಾರದಿಂದ ಗ್ರಾಮೀಣ ಭಾಗದ ಭ್ರಷ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ




    #dakshinakannada
    Previous Articleಮಲ್ಪೆ: ರಸ್ತೆ ಬದಿ ಓಣಿಯಲ್ಲಿ ಪತ್ತೆಯಾದ ನವಜಾತ ಗಂಡು ಶಿಶು ಸಾವು
    Next Article ಜೈಲಿಗೆ ಮೊಬೈಲ್ ಹೇಗೆ ಬಂತು? ಪ್ರಜ್ವಲ್ ರೇವಣ್ಣ, ಪ್ರತಾಪ್‌ಗೆ 2 ದಿನ ಪೊಲೀಸ್ ಕಸ್ಟಡಿ

    Related Posts

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026

    ಮಂಗಳೂರಿನಲ್ಲಿ ಕಳ್ಳರ ಅಟ್ಟಹಾಸ; ಕುಲಶೇಖರದಲ್ಲಿ ಗುತ್ತಿನ ಮನೆಯಿಂದ ಚಿನ್ನ, ಬೆಳ್ಳಿ ಆಭರಣ ಕಳವು

    October 24, 2026

    ಸೌಜನ್ಯಾ ಪ್ರಕರಣದ ಸತ್ಯಾಂಶ ಪತ್ತೆಗೆ ಮರುತನಿಖೆ ತೀವ್ರ : ತಾಯಿ ಕುಸುಮಾವತಿಯ ರಕ್ತದ ಮಾದರಿ ಪಡೆದ ಎಸ್‌ಐಟಿ

    October 23, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026

    ದರ್ಶನ್ ಪತ್ನಿ ವಿಜಯಲಕ್ಷ್ಮಿ ಮ್ಯಾನೇಜರ್‌ಗೆ ಧನ್ವೀರ್‌ರಿಂದ ಬೆದರಿಕೆ ಆರೋಪ; ಆಡಿಯೋ ಸಂಭಾಷಣೆ ಸಾಕ್ಷ್ಯವಾಗಿ ಸಲ್ಲಿಕೆ

    October 24, 2026

    ‘ನನ್ನ ವಿರುದ್ಧದ ಸ್ಟಿಂಗ್‌ ಆಪರೇಷನ್‌ ಸಂಪೂರ್ಣ ಸುಳ್ಳು; ನಾನೇ ದೂರು ನೀಡಿದ್ದೇನೆ’ – ಸಿದ್ದರಾಮಯ್ಯ

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026

    ರೌಡಿಶೀಟ್ ಕೇಸ್ ವಿಚಾರದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು; ಹಳೆಯ ಮಾಹಿತಿಗೆ ಮಣೆ ಹಾಕುವಂತಿಲ್ಲ

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.