Close Menu
    What's Hot

    ವಂದೇ ಭಾರತ್ 2ನೇ ಪ್ರಾಯೋಗಿಕ ಸಂಚಾರ ಯಶಸ್ವಿ: ನಿಗದಿತ ಸಮಯಕ್ಕೂ ಮುನ್ನ ಸಂಚಾರ ಪೂರ್ಣ

    September 11, 2026

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ
    ಅಪರಾಧ

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    adminBy adminSeptember 11, 2026No Comments1 Min Read

    ಬೆಂಗಳೂರು: ಮೆಜೆಸ್ಟಿಕ್‌ನ ರೈಲ್ವೆ ನಿಲ್ದಾಣದಲ್ಲಿ ಖಾಲಿ ನಿಂತಿದ್ದ ಬೋಗಿಗೆ ಬೆಂಕಿ ತಗುಲಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ವ್ಯಕ್ತಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ನಶೆಯಲ್ಲಿ ಆಸಾಮಿ ಈ ಕೃತ್ಯ ಎಸಗಿದ್ದಾನೆ.

    ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಖಾಲಿ ಬೋಗಿಗೆ ಬೆಂಕಿ ಬಿದ್ದಿತ್ತು. ಇದೇ ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ಅವಘಡದ ಹಿಂದಿನ ರಹಸ್ಯ ಭೇದಿಸಿದ್ದಾರೆ. ಹಳೆಯ ರೈಲು ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

    ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯ ರವಿ ಗೋರಖ್ ತಿರ್ವ ಎಂಬ ವ್ಯಕ್ತಿ ಮಲಗಲು ಖಾಲಿ ಬೋಗಿಗೆ ಹೋಗಿದ್ದ. ಗಾಂಜಾ ನಶೆಯಲ್ಲಿದ್ದ ಆಸಾಮಿ, ಸಿಗರೇಟ್ ಸೇದಿ ರೈಲಿನ ಬೋಗಿಯಲ್ಲಿ ಬಿಸಾಡಿದ್ದಾನೆ. ಅದು ಸಣ್ಣ ಕಿಡಿಯಾಗಿ, ನಿಧಾನಕ್ಕೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ರೈಲಿನಿಂದ ಇಳಿದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

    ಬೆಂಗಳೂರಿನಲ್ಲಿ ಈ ಘಟನೆ ಸಂಬಂಧ ಆರ್‌ಪಿಎಫ್ ಹಾಗೂ ನಗರ ರೈಲ್ವೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಸಿಸಿಟಿವಿಗಳನ್ನ ಪರಿಶೀಲಿಸಿ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಪೇಂಟರ್ ವೃತ್ತಿಯಲ್ಲಿದ್ದು, ಕಲ್ಯಾಣ ಮಂಟಪ, ಸಾರ್ವಜನಿಕ ಸ್ಥಳಗಳಲ್ಲಿ ಮಲಗುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಭಾನುವಾರ ತಡರಾತ್ರಿ ಖಾಲಿ ಬೋಗಿಯಲ್ಲಿ ಆತ ಮಲಗಲು ಬಂದು ಸಿಗರೇಟ್ ಬಿಸಾಡಿ ಕಿತಾಪತಿ ಮಾಡಿದ್ದಾನೆ. ಆರೋಪಿಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಧೀಶರ ಮುಂದೆ ಹಾಜರುಪಡಿಸಲಾಗಿದೆ.

    #crime #karnataka
    Previous Articleಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು
    Next Article ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    Related Posts

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಣೇಶ ಮೂರ್ತಿ ಸಾಗಿಸುವಾಗ ದುರಂತ: ವಿದ್ಯುತ್ ತಂತಿ ತಗುಲಿ 27 ವರ್ಷದ ಯುವಕ ಸಾವು

    September 11, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವಂದೇ ಭಾರತ್ 2ನೇ ಪ್ರಾಯೋಗಿಕ ಸಂಚಾರ ಯಶಸ್ವಿ: ನಿಗದಿತ ಸಮಯಕ್ಕೂ ಮುನ್ನ ಸಂಚಾರ ಪೂರ್ಣ

    September 11, 2026

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಕೊಠಡಿಯೊಳಗೆ ಕರೆದೊಯ್ದು ಒಂದೂವರೆ ವರ್ಷದ ಮಗಳ ಹತ್ಯೆ: ತಾಯಿ ಪೊಲೀಸ್ ವಶಕ್ಕೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಟೀ ಕಪ್ ಕಸದ ಬುಟ್ಟಿಗೆ ಹಾಕುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಕಲ್ಲಿನಿಂದ ಹಲ್ಲೆ

    September 11, 2026

    ಗಾಂಜಾ ನಶೆಯಲ್ಲಿ ಸಿಗರೇಟ್ ಬಿಸಾಡಿ ರೈಲು ಬೋಗಿಗೆ ಬೆಂಕಿ: ಬೆಂಗಳೂರಿನಲ್ಲಿ ಆರೋಪಿ ಬಂಧನ

    September 11, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.