Close Menu
    What's Hot

    ಸೈಬರ್​ ವಂಚಕರಿಂದ 139 ಕೋಟಿ ರೂ. ವಾಪಸ್ ಪಡೆದ ತೆಲಂಗಾಣ ಪೊಲೀಸರು

    September 15, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಪತ್ನಿ, ಮೂವರು ಪುತ್ರಿಯರ ಕೊಲೆ ಪ್ರಕರಣ: ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಹೊರಬರುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದ ಆರೋಪಿ
    ಅಪರಾಧ

    ಪತ್ನಿ, ಮೂವರು ಪುತ್ರಿಯರ ಕೊಲೆ ಪ್ರಕರಣ: ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಹೊರಬರುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದ ಆರೋಪಿ

    adminBy adminSeptember 14, 2026No Comments2 Mins Read

    ಜೈಪುರ: ನಗರದ ಕರ್ಧಾನಿ ಪ್ರದೇಶದ ಮನೆಯಲ್ಲಿ ಸ್ವಂತ ಪತ್ನಿ ಹಾಗೂ ಮೂವರು ಹೆಣ್ಣುಮಕ್ಕಳನ್ನು ಕ್ರೂರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ 45 ವರ್ಷದ ರಾಹುಲ್ ಝಾನನ್ನು ಪೊಲೀಸರು ಭಾನುವಾರ ಸಿಕ್ಕಾರ್ ಜಿಲ್ಲೆಯ ರೀಂಗಸ್ ಪಟ್ಟಣದ ಹೋಟೆಲ್ ಒಂದರ ಹೊರಭಾಗದಲ್ಲಿ ಬಂಧಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಈ ಭೀಕರ ಕೊಲೆ ಕೃತ್ಯಗಳು ಬೆಳಕಿಗೆ ಬಂದಿದ್ದವು. ಕೊಲೆಗಳು ಬೆಳಕಿಗೆ ಬರುವ ಕೆಲವೇ ಗಂಟೆಗಳ ಮೊದಲು ಜೈಪುರದಿಂದ ಪರಾರಿಯಾಗಿದ್ದ ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪತ್ತೆಹಚ್ಚಲಾಗಿದೆ ಎಂದು ಡಿಸಿಪಿ (ಪಶ್ಚಿಮ) ಪ್ರಶಾಂತ್ ಕಿರಣ್ ತಿಳಿಸಿದ್ದಾರೆ.

    ತನಿಖಾ ಮೂಲಗಳ ಪ್ರಕಾರ, ಜೈಪುರದಿಂದ ಪರಾರಿಯಾದ ರಾಹುಲ್ ಝಾ ಆರಂಭದಲ್ಲಿ ದೈವಿಕ ಆಶೀರ್ವಾದ ಪಡೆಯಲು ಖಾತೂ ಶ್ಯಾಮ್‌ಜಿ ಧಾಮಕ್ಕೆ ತೆರಳಿದ್ದ. ಬಳಿಕ ಹತ್ತಿರದ ಹೋಟೆಲ್‌ನಲ್ಲಿ ತಂಗಿದ್ದ ಆತನ ಬಳಿ ದಿನನಿತ್ಯದ ಖರ್ಚಿಗೆ ಹಣ ಖಾಲಿಯಾಗಿತ್ತು. ಉಳಿದುಕೊಳ್ಳಲು ಮತ್ತು ಖರ್ಚಿಗೆ ಹಣವಿಲ್ಲದೆ ಹೋಟೆಲ್ ಸಿಬ್ಬಂದಿಗೆ ತನ್ನ ಕೈಯಲ್ಲಿದ್ದ ಉಂಗುರವನ್ನು ಮಾರಾಟ ಮಾಡಲು ಯತ್ನಿಸಿದ್ದ. ಆದರೆ ಅದು ಸಾಧ್ಯವಾಗದಿದ್ದಾಗ ಅಲ್ಲಿಂದ ಕಾಲ್ಕಿತ್ತು ರೀಂಗಸ್ ಪಟ್ಟಣಕ್ಕೆ ಬಂದಿದ್ದ ಎಂದು ತಿಳಿದುಬಂದಿದೆ.

    ಭಾನುವಾರ ರೀಂಗಸ್‌ನ ಹೋಟೆಲ್‌ ಒಂದರಲ್ಲಿ ಆರೋಪಿ ಓಡಾಡುತ್ತಿರುವ ಬಗ್ಗೆ ಲಭಿಸಿದ ನಿಖರ ಮಾಹಿತಿ ಆಧರಿಸಿ, ಆತನ ಬಂಧನಕ್ಕಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿತು.
    ಆರೋಪಿ ಝಾ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಹೋಟೆಲ್‌ನಿಂದ ಹೊರಬರುತ್ತಿದ್ದಂತೆಯೇ, ಸಾಧಾರಣ ಉಡುಪಿನಲ್ಲಿದ್ದ (Civil Clothes) ಪೊಲೀಸರು ಏಕಾಏಕಿ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದು ಜೈಪುರಕ್ಕೆ ಕರೆತಂದಿದ್ದಾರೆ.

    ಆರೋಪಿ ರಾಹುಲ್ ಝಾ ತನ್ನ ಪತ್ನಿ ಗೀತಾ (40), ಹಾಗೂ ಮಕ್ಕಳಾದ ನಂದನಿ (23), ರಾಧಿಕಾ (17) ಮತ್ತು ಗೌರಿ (14) ಅವರನ್ನು ಅಮಾನುಷವಾಗಿ ಕೊಲೆ ಮಾಡಿದ್ದ. ವಿಚಾರಣೆ ವೇಳೆ ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಕುಟುಂಬದಲ್ಲಿದ್ದ ನಿರಂತರ ಭಿನ್ನಾಭಿಪ್ರಾಯ, ತೀವ್ರ ಕೌಟುಂಬಿಕ ಕಲಹ ಹಾಗೂ ವಿಶೇಷವಾಗಿ ಪತ್ನಿ ಮತ್ತು ಹಿರಿಯ ಮಗಳೊಂದಿಗಿನ ವೈಷಮ್ಯವೇ ಈ ಕೊಲೆಗಳಿಗೆ ಕಾರಣ ಎಂದು ಆತ ಪೊಲೀಸರೆದುರು ಬಾಯ್ಬಿಟ್ಟಿದ್ದಾನೆ. ಕುಟುಂಬ ವಾಸವಿದ್ದ ಗೋವಿಂದ್ ವಾಟಿಕಾ ಮನೆಯಿಂದ ಆರೋಪಿಯ ರಕ್ತಸಿಕ್ತ ಬಟ್ಟೆಗಳು ಹಾಗೂ ಆತ ಸ್ವಿಚ್ ಆಫ್ ಮಾಡಿದ್ದ ಮೊಬೈಲ್ ಫೋನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದು, ಮುಂದಿನ ತನಿಖೆ ಕಾಯ್ದುಕೊಂಡಿದ್ದಾರೆ.

     




    #crime #nation
    Previous Articleಬೈಕ್ EMI ಕಟ್ಟಲು ಹಣ ಕೊಡದಿದ್ದಕ್ಕೆ ಗೃಹಿಣಿಯ ಕೊಲೆ: ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು
    Next Article ತಂಗಿಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಊಟ ಮಾಡುತ್ತಿದ್ದ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ

    Related Posts

    ಸೈಬರ್​ ವಂಚಕರಿಂದ 139 ಕೋಟಿ ರೂ. ವಾಪಸ್ ಪಡೆದ ತೆಲಂಗಾಣ ಪೊಲೀಸರು

    September 15, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸೈಬರ್​ ವಂಚಕರಿಂದ 139 ಕೋಟಿ ರೂ. ವಾಪಸ್ ಪಡೆದ ತೆಲಂಗಾಣ ಪೊಲೀಸರು

    September 15, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ: 12 ವರ್ಷದ ಬಾಲಕನ ದಾರುಣ ಸಾವು

    September 15, 2026

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ‘ಮಾತೆರೆಗ್‌ಲ ಸೊಲ್ಮೆಲು’ ಎಂದ ಡಿಕೆಶಿ: ಸೆ.18ಕ್ಕೆ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ

    September 15, 2026

    ಮನೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ವೃದ್ಧ ದಂಪತಿ ಪತ್ತೆ: ಪತಿ-ಪತ್ನಿ ಇಬ್ಬರೂ ಗುಂಡೇಟಿಗೆ ಬಲಿ

    September 15, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.