Close Menu
    What's Hot

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026

    ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

    September 16, 2026

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ
    ಕರ್ನಾಟಕ

    ಟಿ. ನರಸೀಪುರ ಗಣೇಶೋತ್ಸವ ವಿವಾದ ತೀವ್ರ: ಇನ್‌ಸ್ಪೆಕ್ಟರ್‌ಗೆ ಸೆಡ್ಡು ಹೊಡೆದು ಠಾಣೆ ಬಳಿಯೇ ಗಣಪತಿ ಪ್ರತಿಷ್ಠಾಪನೆ; ಸೆ.18ಕ್ಕೆ ಬೃಹತ್ ಶೋಭಾಯಾತ್ರೆ

    adminBy adminSeptember 15, 2026No Comments1 Min Read

    ಟಿ. ನರಸೀಪುರ (ಮೈಸೂರು) : ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್‌ ಅವರಿಗೆ ಹಿಂದೂ ಜಾಗರಣ ವೇದಿಕೆ ಬಹಿರಂಗವಾಗಿ ಸೆಡ್ಡು ಹೊಡೆದಿದೆ. ಪೊಲೀಸ್ ಠಾಣೆಯ ಕೆಲವೇ 200 ಮೀಟರ್ ಅಂತರದಲ್ಲಿ ‘ಹಿಂದೂ ಮಹಾಗಣಪತಿ’ ವಿಗ್ರಹವನ್ನು ಪ್ರತಿಷ್ಠಾಪಿಸಿ, ಸೆಪ್ಟೆಂಬರ್ 18ರಂದು ಬೃಹತ್ ಶೋಭಾಯಾತ್ರೆ ನಡೆಸಲು ಸಜ್ಜಾಗಿದೆ.

    ಮಸೀದಿ ಮುಂಭಾಗ ಗಣೇಶೋತ್ಸವ ಮೆರವಣಿಗೆ ಸಾಗುವಂತಿಲ್ಲ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ವಾರ್ನಿಂಗ್ ನೀಡಿದ್ದರು ಎನ್ನಲಾದ ಘಟನೆ ಇದೀಗ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಕ್ಕೆ ಕಾರಣವಾಗಿದೆ.
    ಸೆಪ್ಟೆಂಬರ್ 18 ರಂದು ನಗರದ ಲಿಂಕ್ ರಸ್ತೆಯಲ್ಲಿ ಬೃಹತ್ ‘ಹಿಂದೂ ಶೋಭಾಯಾತ್ರೆ’ ನಡೆಸಲು ಹಿಂದೂ ಪರ ಸಂಘಟನೆಗಳು ತೀರ್ಮಾನಿಸಿವೆ. ಈ ಕುರಿತು ಮಾಹಿತಿ ನೀಡಿರುವ ಹಿಂದೂ ಜಾಗರಣ ವೇದಿಕೆಯ ಮಹೇಶ್, “ಮೈಸೂರು ಜಿಲ್ಲೆ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಸುಮಾರು 5,000ಕ್ಕೂ ಹೆಚ್ಚು ಕಾರ್ಯಕರ್ತರು ಈ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ಈ ಶೋಭಾಯಾತ್ರೆಯನ್ನು ಕಣ್ತುಂಬಿಕೊಳ್ಳಲಿ” ಎಂದು ಸವಾಲು ಹಾಕಿದ್ದಾರೆ.

    ಗಣೇಶ ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾದ ಇನ್‌ಸ್ಪೆಕ್ಟರ್ ಧನಂಜಯ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯ ಮುಂಭಾಗ ಧರಣಿ ನಡೆಸಿದ್ದಾರೆ. ಈ ವಿಷಯವಾಗಿ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿಯ ನಾಯಕರ ನಡುವೆ ಸರಣಿ ವಾಗ್ದಾಳಿಗಳು ನಡೆದು, ಪ್ರಕರಣವು ತೀವ್ರ ರಾಜಕೀಯ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ.
    ಲಿಂಕ್ ರಸ್ತೆಯಲ್ಲಿ ಶೋಭಾಯಾತ್ರೆ ನಡೆಸಲು ಸಂಘಟನೆಗಳು ಪಟ್ಟು ಹಿಡಿದಿದ್ದು, ಸೆಪ್ಟೆಂಬರ್ 18ರಂದು ಟಿ. ನರಸೀಪುರದಲ್ಲಿ ನಡೆಯಲಿರುವ ವಿದ್ಯಮಾನಗಳು ಹಾಗೂ ಕಾನೂನು ಸುವ್ಯವಸ್ಥೆಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

    #karnataka
    Previous Articleಗೋವಾ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ನಿಂದ ಮೃಣಾಲ್ ಹೆಬ್ಬಾಳ್ಕರ್‌ಗೆ ಮಹತ್ವದ ಜವಾಬ್ದಾರಿ
    Next Article ಮಂಗಳೂರು: ಅರವಿಂದ್ ಬೋಳಾರ್ ನ ವಿವಾದ್ಮತಕ ಹೇಳಿಕೆ; ಆಕ್ರೋಶಗೊಂಡ ವ್ಯಕ್ತಿಯೊಂದಿಗಿನ ಮಾತುಕತೆಯ ಆಡಿಯೋ ವೈರಲ್

    Related Posts

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026

    ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಪ್ರಕರಣ: ಮೂತ್ರ ವಿಸರ್ಜನೆ ನೆಪದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ

    September 16, 2026

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026

    ಜೈಲಿನಲ್ಲಿ ಪ್ರದೋಷ್‌ನ ‘ಕಳ್ಳಾಟ’ ಬಯಲು: ರೇಣುಕಾಸ್ವಾಮಿ ಪ್ರಕರಣದ ಆರೋಪಿಗೆ ಮತ್ತೊಂದು ಸಂಕಷ್ಟ

    September 16, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಾರ್ವಜನಿಕವಾಗಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನ ಬಂಧನ: ಅಕ್ಕ ಪಡೆಯ ಕಾರ್ಯಾಚರಣೆ

    September 16, 2026

    ಜ್ಯೋತಿಷ್ಯ ಹೇಳಿ ವೃದ್ಧೆಯ ವಿಶ್ವಾಸ ಗಳಿಸಿದ ಖತರ್ನಾಕ್ ವಂಚಕ: 40 ಲಕ್ಷ ರೂ. ಚಿನ್ನದ ಬಳಿಕ ಎಐ ವೀಡಿಯೋ ಡ್ರಾಮಾ

    September 16, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.