ಬೆಂಗಳೂರು: ಕರ್ನಾಟಕದದಲ್ಲಿ ನಕಲಿ ಔಷಧ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಆರೋಪದ ಮೇಲೆ ಸರ್ಕಲ್-1 ಸಹಾಯಕ ಔಷಧ ನಿಯಂತ್ರಕ ಓಂಕಾರೇಶ್ವರ್ ಅವರನ್ನು ಅಮಾನತುಗೊಳಿಸಲಾಗಿದೆ.
ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಓಂಕಾರೇಶ್ವರ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಔಷಧ ಪ್ರಕರಣದಲ್ಲಿ ಸರ್ಕಾರದಿಂದ ಅಧಿಕಾರಿಯೊಬ್ಬರ ವಿರುದ್ಧ ಕೈಗೊಂಡ ಮೊದಲ ಅಮಾನತು ಕ್ರಮ ಇದಾಗಿದೆ.
ಸಹಾಯಕ ಔಷಧ ನಿಯಂತ್ರಣಾಧಿಕಾರಿ ಓಂಕಾರೇಶ್ವರ್ ಅಮಾನತಾದ ಅಧಿಕಾರಿ. ಕರ್ತವ್ಯ ಲೋಪ ಹಿನ್ನೆಲೆ ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಕೃಪಾ ಹೆಲ್ತ್ ಕೇರ್ ಏಜೆನ್ಸಿ ಲೆಸೆನ್ಸ್ ಸಸ್ಪೆಂಡ್ ಮಾಡಿರಲಿಲ್ಲ ಅನ್ನುವ ಕಾರಣಕ್ಕೆ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ನಕಲಿ ಔಷಧ ಜಾಲದ ಕಿಂಗ್ಪಿಗ್ ವೀರೇಶ್ ಜೈನ್ನಾ ಕೃಪಾ ಹೆಲ್ತ್ ಕೇರ್ ಏಜೆನ್ಸಿ ಆಗಿದೆ.








