Close Menu
    What's Hot

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಪಡುಬೆಳ್ಳೆ-ಉಡುಪಿ ನಗರದಲ್ಲಿ ಡ್ರಗ್ಸ್ ದಂಧೆ ಬಯಲು; ಆರೋಪಿಗಳ ಬಂಧನ, ಗಾಂಜಾ ಜಪ್ತಿ
    ಅಪರಾಧ

    ಪಡುಬೆಳ್ಳೆ-ಉಡುಪಿ ನಗರದಲ್ಲಿ ಡ್ರಗ್ಸ್ ದಂಧೆ ಬಯಲು; ಆರೋಪಿಗಳ ಬಂಧನ, ಗಾಂಜಾ ಜಪ್ತಿ

    adminBy adminSeptember 24, 2026No Comments2 Mins Read

    ಉಡುಪಿ: ಶಿರ್ವ ಮತ್ತು ಉಡುಪಿ ನಗರ ಠಾಣೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ  ಮಾರಾಟ ಮತ್ತು ದಾಸ್ತಾನು ಜಾಲವನ್ನು ಭೇದಿಸಲಾಗಿದ್ದು, ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಲ್ನಾಜ್, ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಹಾಗೂ ಶಿವಮೊಗ್ಗದ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಎಂದು ಗುರುತಿಸಲಾಗಿದೆ.

    ಪಡುಬೆಳ್ಳೆಯಲ್ಲಿ ಮೊದಲ ದಾಳಿ: 9 ಮಂದಿ ಬಂಧನ, ಮೆಥಾಂಫೆಟಮೈನ್ ಜಪ್ತಿ:

    ಸೆಪ್ಟೆಂಬರ್ 22ರಂದು ಸಂಜೆ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಕಾರು ಮತ್ತು ಸ್ಕೂಟರ್‌ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಶಿರ್ವ ಪೊಲೀಸರು, ಅಲ್ನಾಜ್ ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದರು.

    ಬಂಧಿತರಿಂದ ₹67,714 ಮೌಲ್ಯದ 1,354.28 ಗ್ರಾಂ ಗಾಂಜಾ, ₹1,30,960 ಮೌಲ್ಯದ 32.74 ಗ್ರಾಂ ತೂಕದ ಪ್ರಾಣಾಪಾಯಕಾರಿ ಮೆಥಾಂಫೆಟಮೈನ್, ಕೃತ್ಯಕ್ಕೆ ಬಳಸಿದ 2 ಕಾರುಗಳು, 1 ಸ್ಕೂಟರ್, 9 ಮೊಬೈಲ್‌ಗಳು, 2 ತೂಕದ ಯಂತ್ರ ಹಾಗೂ ₹75,010 ನಗದನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸಿದ ಶಿರ್ವ ಪಿಎಸ್‌ಐ ಅನಿಲ್, ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರೆಂದು ಮಾಹಿತಿ ನೀಡಿದ್ದಾರೆ.

    ಉಡುಪಿ ನಗರದಲ್ಲಿ ನಸುಕಿನ ವೇಳೆ ದಾಳಿ: 1.6 ಕೆಜಿ ಗಾಂಜಾ ವಶ:

    ಮತ್ತೊಂದು ಪ್ರಕರಣದಲ್ಲಿ, ಉಡುಪಿ ನಗರ ಠಾಣೆಯ ಪಿಎಸ್‌ಐ ಭರತೇಶ್ ಕಂಕಣವಾಡಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸೆಪ್ಟೆಂಬರ್ 23ರ ನಸುಕಿನ ವೇಳೆ 12:30ರ ಸುಮಾರಿಗೆ ಉಡುಪಿ ವಾದಿರಾಜ ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಲಾಯಿತು. ಈ ವೇಳೆ ಗಾಂಜಾ ದಾಸ್ತಾನು ಇರಿಸಿದ್ದ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ₹83,000 ಮೌಲ್ಯದ 1.65 ಕೆಜಿ ಗಾಂಜಾ, ₹1,26,500 ನಗದು ಹಾಗೂ ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.

    ಹಲವು ಹಳೆಯ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು:

    ಬಂಧಿತರಲ್ಲಿ ಹೆಚ್ಚಿನವರು ರೌಡಿಶೀಟರ್‌ಗಳು ಹಾಗೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಇಮ್ತಿಯಾಜ್ ವಿರುದ್ಧ ಕೊಲೆ ಸೇರಿದಂತೆ ಒಟ್ಟು 8 ಪ್ರಕರಣಗಳು, ಅಜಯ್ ಕುಮಾರ್ ವಿರುದ್ಧ ದರೋಡೆ ಸೇರಿ 3, ಫೈಜಲ್ ವಿರುದ್ಧ 3, ಸ್ಟ್ಯಾನ್ಲಿ ಸಂದೀಪ್ ವಿರುದ್ಧ 1 ಹಾಗೂ ಸಂತೋಷ್ ದೇವಾಡಿಗ ವಿರುದ್ಧ ಗಾಂಜಾ ಸೇವನೆಯ 2 ಪ್ರಕರಣಗಳು ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
    ಉಡುಪಿ ನಗರ ಸಿಪಿಐ ಮಹೇಶ್ ಪ್ರಸಾದ್ ಪಿ. ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ, ಶಿರ್ವ ಪಿಎಸ್‌ಐ ಅನಿಲ್, ಉಡುಪಿ ಪಿಎಸ್‌ಐ ಭರತೇಶ್ ಕಂಕಣವಾಡಿ, ಕಾಪು ಪಿಎಸ್‌ಐ ಶುಭಕರ, ಸಿಇಎನ್ (CEN) ಮತ್ತು ಮಣಿಪಾಲ ಠಾಣೆಯ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

     




    #crime #dakshinakannada #karnataka
    Previous Articleಸುದರ್ಶನ್ ಜೈನ್ ಕೊಲೆ ಆರೋಪಿ ಕೋರ್ಟ್‌ನಿಂದಲೇ ಎಸ್ಕೇಪ್; ಪೊಲೀಸರಿಂದ ತೀವ್ರ ಶೋಧ
    Next Article ಉಡುಪಿ: ಬಡ್ಡಿ ಸಹಿತ ಖರೀದಿ ಮೊತ್ತದೊಂದಿಗೆ ಪರಿಹಾರ ನೀಡಲು ದ್ವಿಚಕ್ರ ವಾಹನ ಕಂಪನಿಗೆ ಗ್ರಾಹಕ ಆಯೋಗದ ಆದೇಶ

    Related Posts

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.