Close Menu
    What's Hot

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಸುದರ್ಶನ್ ಜೈನ್ ಕೊಲೆ ಆರೋಪಿ ಕೋರ್ಟ್‌ನಿಂದಲೇ ಎಸ್ಕೇಪ್; ಪೊಲೀಸರಿಂದ ತೀವ್ರ ಶೋಧ
    ಅಪರಾಧ

    ಸುದರ್ಶನ್ ಜೈನ್ ಕೊಲೆ ಆರೋಪಿ ಕೋರ್ಟ್‌ನಿಂದಲೇ ಎಸ್ಕೇಪ್; ಪೊಲೀಸರಿಂದ ತೀವ್ರ ಶೋಧ

    adminBy adminSeptember 24, 2026Updated:September 24, 2026No Comments2 Mins Read

    ಮಂಗಳೂರು: ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸುದರ್ಶನ್ ಜೈನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬ ಸೆಪ್ಟೆಂಬರ್ 22ರಂದು ಮಂಗಳೂರು ನ್ಯಾಯಾಲಯದ ಆವರಣದಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ. ನ್ಯಾಯಾಲಯದ ವಿಚಾರಣೆ ಬಳಿಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದ ಆರೋಪಿಯನ್ನು ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಈ ಘಟನೆ ನಡೆದಿದೆ.

    2018ರ ಸುದರ್ಶನ್ ಜೈನ್ ಕೊಲೆ ಪ್ರಕರಣದ ವಿಚಾರಣೆಗೆ ಸಿದ್ದಕಟ್ಟೆ ನಿವಾಸಿ ಪ್ರಸಾದ್ ಸೇರಿದಂತೆ ಐವರು ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಂದೀಪ್ ಶೆಟ್ಟಿ, ಬಾಲರಾಜ್ ಮತ್ತು ಪ್ರಭಾಕರ್ ಪರ ವಕೀಲರು ಹಾಜರಾಗಿ ಜಾಮೀನು ಪ್ರಕ್ರಿಯೆ ನಡೆಸಿದ್ದರು. ಆದರೆ ಪ್ರಸಾದ್ ಪರ ಯಾವುದೇ ವಕೀಲರು ಹಾಜರಾಗದಿದ್ದು, ಹಿಂದಿನ ವಿಚಾರಣೆಗೆ ಗೈರಾಗಿದ್ದ ಕಾರಣ ಅವರ ವಿರುದ್ಧ ಈಗಾಗಲೇ ವಾರಂಟ್ ಕೂಡ ಜಾರಿಯಾಗಿತ್ತು.

    ಸೆಪ್ಟೆಂಬರ್ 22ರಂದು ವಿಚಾರಣೆಗೆ ಹಾಜರಾದ ಆರೋಪಿಗಳ ಪೈಕಿ ಪ್ರಸಾದ್ ಪರ ವಕೀಲರು ಇರದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ಬಳಿಕ ರಿಮಾಂಡ್ ವಾರೆಂಟ್‌ನೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ, ನ್ಯಾಯಾಲಯದ ಆವರಣದಲ್ಲಿರುವ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ ಪ್ರಸಾದ್ ಅಲ್ಲಿಂದ ಪೊಲೀಸರ ಗಮನ ತಪ್ಪಿಸಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಮೂಡುಬಿದ್ರೆ ಪೊಲೀಸ್ ಸಿಬ್ಬಂದಿ ಅಶೋಕ್ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಬಂದರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಸುದರ್ಶನ್ ಜೈನ್ ಕೊಲೆ ಪ್ರಕರಣದ ಹಿನ್ನೆಲೆ

    2018ರ ಆಗಸ್ಟ್ 11ರಂದು ಮೂಡುಬಿದ್ರೆಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಹೊಸಬೆಟ್ಟು ನಿವಾಸಿ ಸುದರ್ಶನ್ ಜೈನ್ ಕಾಣೆಯಾಗಿದ್ದರು. ಸುಮಾರು ಒಂದು ವಾರದ ಬಳಿಕ ಫಲ್ಗುಣಿ ನದಿ ಪ್ರದೇಶದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆ ಬಿಗಿದ ಗುರುತುಗಳಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕೊಲೆ ಪ್ರಕರಣದ ಶಂಕೆಯಲ್ಲಿ ತನಿಖೆ ಆರಂಭಿಸಿದ್ದರು. ತನಿಖೆಯ ವೇಳೆ ಸುದರ್ಶನ್ ಅವರ ಸಹೋದರ ಸುಧೀರ್ ಜೈನ್, ಸಿದ್ದಕಟ್ಟೆಯ ಸಂದೀಪ್ ಶೆಟ್ಟಿ, ಅರಂಬೋಡಿ ನಿವಾಸಿ ಬಾಲರಾಜ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ನಂತರ ಪ್ರಸಾದ್‌ಗೂ ಪ್ರಕರಣದಲ್ಲಿ ಪಾತ್ರವಿದೆ ಎಂದು ತಿಳಿದು ಆತನನ್ನೂ ಬಂಧಿಸಲಾಗಿತ್ತು.

    ಹಣದಾಸೆಯೇ ಕೊಲೆಗೆ ಕಾರಣ ಎಂಬ ಆರೋಪ

    ಸುದರ್ಶನ್ ಮತ್ತು ಸುಧೀರ್ ಅವರ ತಾಯಿ ಹೊಂದಿದ್ದ ಸುಮಾರು 2.7 ಎಕರೆ ಜಮೀನು ಮಾರಾಟವಾಗಿದ್ದು, ಅದರ ಮುಂಗಡವಾಗಿ ₹6 ಲಕ್ಷ ಬಂದಿತ್ತು. ಅದರಲ್ಲಿ ₹3 ಲಕ್ಷವನ್ನು ಸುಧೀರ್ ಪಡೆದಿದ್ದನು. ಉಳಿದ ₹3 ಲಕ್ಷವೂ ತನಗೆ ನೀಡಬೇಕು ಎಂದು ಸುಧೀರ್ ಸುದರ್ಶನ್ ಮೇಲೆ ಒತ್ತಡ ಹೇರಿದ್ದ ಎನ್ನಲಾಗಿದೆ. ಹಣ ನೀಡಲು ಸುದರ್ಶನ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ಸಂಚು ರೂಪಿಸಲಾಗಿದೆ ಎಂದು ತನಿಖೆಯಲ್ಲಿ ಆರೋಪಿಸಲಾಗಿತ್ತು. ಬಳಿಕ 2018ರ ಆಗಸ್ಟ್ 11ರಂದು ಸುಧೀರ್ ತನ್ನ ಬೈಕಿನಲ್ಲಿ ಸುದರ್ಶನ್‌ರನ್ನು ಹೊಸಬೆಟ್ಟಿಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.

    ನಂತರ ಕಾರಿನಲ್ಲಿ ಕಾದಿದ್ದ ಇತರ ಆರೋಪಿಗಳು ಸುದರ್ಶನ್‌ರನ್ನು ಬಲವಂತವಾಗಿ ಕಾರಿನೊಳಗೆ ಕರೆದೊಯ್ದು ಉಸಿರುಗಟ್ಟಿಸಿ ಕೊಲೆ ಮಾಡಿದರು ಎಂದು ಪ್ರಕರಣದ ತನಿಖೆಯಲ್ಲಿ ತಿಳಿದುಬಂದಿತ್ತು. ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಫಲ್ಗುಣಿ ನದಿಗೆ ಎಸೆದಿರುವ ಆರೋಪ ಕೇಳಿಬಂದಿತ್ತು. ಈ ಕೃತ್ಯದಲ್ಲಿ ಪ್ರಸಾದ್ ಕಾರು ಚಾಲನೆ ಮಾಡುವ ಮೂಲಕ ಸಹಕರಿಸಿದ್ದಾನೆ ಎಂಬ ಆರೋಪವೂ ಪ್ರಕರಣದಲ್ಲಿದೆ.




    #crime #dakshinakannada
    Previous Articleಬಾರ್‌ನಲ್ಲಿ ರೌಡಿ ಶೀಟರ್‌ಗಳ ಜೊತೆ ಎಣ್ಣೆ ಪಾರ್ಟಿ; ಎಎಸ್‌ಐ ವೀರೇಂದ್ರ ಸಸ್ಪೆಂಡ್
    Next Article ಪಡುಬೆಳ್ಳೆ-ಉಡುಪಿ ನಗರದಲ್ಲಿ ಡ್ರಗ್ಸ್ ದಂಧೆ ಬಯಲು; ಆರೋಪಿಗಳ ಬಂಧನ, ಗಾಂಜಾ ಜಪ್ತಿ

    Related Posts

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.