Close Menu
    What's Hot

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ
    ಕರಾವಳಿ ಸುದ್ದಿ

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    adminBy adminSeptember 28, 2026No Comments2 Mins Read

    ಮೂಡಬಿದಿರೆ: ಮಕ್ಕಳಿಂದ ಹಿಡಿದು ಹದಿಹರೆಯದವರವರೆಗೂ ಪರೀಕ್ಷೆಯ ಸಮಯದಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಾರೆ. ಆದರೆ ಈ ಸಮಯದಲ್ಲಿ ಶಿಕ್ಷಕರು ಅಥವಾ ತಜ್ಞರು ಪರೀಕ್ಷಾ ಒತ್ತಡ ಮತ್ತು ಸಮಯ ನಿರ್ವಹಣೆ ಕುರಿತು ಉಪನ್ಯಾಸ ನೀಡುವುದು ಸಾಮಾನ್ಯ. ಆದರೆ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂದು ಸಾಬೀತುಪಡಿಸುತ್ತಾ ತನ್ನದೇ ವಯಸ್ಸಿನ ಸಹಪಾಠಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಲು 15 ವರ್ಷದ ಹುಡುಗಿಯೊಬ್ಬಳು ಅಭಿಯಾನಕ್ಕಿಳಿದು ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

    ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ, 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾರಿದೀಪವಾಗುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ನಲ್ಲಿ ಸ್ಥಾನ ಪಡೆದಿದ್ದಾರೆ.

    ವಿಷ್ಣುಪ್ರಿಯಾಗೆ 6ನೇ ತರಗತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಹಾಗೂ ಸೈಕಾಲಜಿ ವಿಷಯಗಳಲ್ಲಿ ತೀವ್ರ ಆಸಕ್ತಿ ಮೂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಪೂರೈಸಿ ಜ್ಞಾನ ಹೆಚ್ಚಿಸಿಕೊಂಡಿದ್ದಾಳೆ. ತಾನು ಕಲಿತ ಸೈಕಾಲಜಿ ವಿಚಾರಗಳನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ, ತನ್ನಂತೆಯೇ ಪರೀಕ್ಷೆಯ ಆತಂಕ ಎದುರಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ತಲುಪಿಸಲು ನಿರ್ಧರಿಸಿದಳು.

    ಆಗಸ್ಟ್ 24 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಸಿದ ಈ ಮಹತ್ತ್ವದ ಜಾಗೃತಿ ಅಭಿಯಾನದಲ್ಲಿ ವಿಷ್ಣುಪ್ರಿಯಾ ಕರ್ನಾಟಕದ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿದ್ದಾಳೆ. ಪ್ರತಿದಿನ 1 ಗಂಟೆಯ ಕಾರ್ಯಾಗಾರ ನಡೆಸಿ, ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು ಹೇಗೆ?, ಸಮಯ ನಿರ್ವಹಣೆ, ಸುಲಭ ಅಧ್ಯಯನ ತಂತ್ರಗಳು ಹಾಗೂ ಪರೀಕ್ಷೆಗೆ ಸಿದ್ಧರಾಗುವ ವೈಜ್ಞಾನಿಕ ವಿಧಾನಗಳನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳಿಗೆ ವಿವರಿಸುತ್ತಾಳೆ.

    ವಿಷ್ಣುಪ್ರಿಯಾ ಅವರ ಈ ಸಮಾಜಮುಖಿ ಹಾಗೂ ಶೈಕ್ಷಣಿಕ ಸಾಹಸವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಹತ್ತಿರದಿಂದ ವೀಕ್ಷಿಸಿ ವಿಶ್ವ ದಾಖಲೆಯಾಗಿ ಗುರುತಿಸಿದೆ. ಅಕ್ಟೋಬರ್ 1 ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ಈ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಪ್ರದಾನ ಮಾಡಲಾಗುವುದು. ವಿದ್ಯಾರ್ಥಿ ಹಂತದಲ್ಲೇ ಸಹ-ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆಗೆ ನೆರವಾದ ವಿಷ್ಣುಪ್ರಿಯಾ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    #dakshinakannada #karnataka
    Previous Article“ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ
    Next Article ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವದ ಸಿದ್ಧತೆಗೆ ಸಮಿತಿ ರಚನಾ ಸಭೆ

    Related Posts

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಲಾಟರಿ ಅದೃಷ್ಟ ಕೈಕೊಟ್ಟಿದ್ದಕ್ಕೆ ಆಕ್ರೋಶ; ಮಹಿಳಾ ಮಾರಾಟಗಾರ್ತಿಗೆ ಚಾಕು ಇರಿತ

    September 28, 2026

    ಸೌಜನ್ಯಾ ಪ್ರಕರಣದ SIT ತನಿಖೆಗೆ ಕಲ್ಲಡ್ಕ ಪ್ರಭಾಕರ ಭಟ್‌ ಪ್ರಶ್ನೆ; ಅಧಿಕಾರಿಗಳ ಆಯ್ಕೆ ಬಗ್ಗೆ ಅನುಮಾನ

    September 28, 2026

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    ರಹಿಮಾನ್ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು; ಎಸ್‌ಪಿಯನ್ನೇ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದ ಕಲ್ಲಡ್ಕ ಪ್ರಭಾಕರ ಭಟ್

    September 28, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೆಪಿಎಸ್‌ಸಿ ನೇಮಕಾತಿ ಅಕ್ರಮ; ಇಡಿ ದಾಳಿಯಲ್ಲಿ ಸಿಕ್ಕ ಡೈರಿಯಲ್ಲಿ ಲಕ್ಷಾಂತರ ಹಣದ ಲೆಕ್ಕ ಪತ್ತೆ

    September 28, 2026

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.