Close Menu
    What's Hot

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»“ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ
    ಅಪರಾಧ

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    adminBy adminSeptember 28, 2026No Comments2 Mins Read

    ಬೆಂಗಳೂರು: ಸಿವಿಲ್‌ ಸ್ವರೂಪದ ವಿವಾದಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಬಾರದು ಎಂಬ ನ್ಯಾಯಾಲಯದ ಹಿಂದಿನ ನಿರ್ದೇಶನಗಳ ಹೊರತಾಗಿಯೂ ಇಂತಹ ಪ್ರಕರಣಗಳು ಮುಂದುವರಿಯುತ್ತಿರುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ. ಮಂಗಳೂರಿನ ಉಲ್ಲಾಳ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ತನಿಖೆಯಲ್ಲಿ ಖಾಸಗಿ ಕಂಪನಿಯ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಕ್ರಮವನ್ನು ಪ್ರಶ್ನಿಸಿರುವ ಹೈಕೋರ್ಟ್‌, ತನಿಖಾಧಿಕಾರಿ ವಿರುದ್ಧ ವರದಿ ಸಲ್ಲಿಸುವಂತೆ ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿದೆ.

    ವಿದ್ಯುತ್‌ ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ಸುಮಾರು ₹60 ಲಕ್ಷ ಹಣ ಪಾವತಿಯಾಗಿಲ್ಲ ಎಂಬ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಈ ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಝೈಟ್ ಇಂಟೀರಿಯರ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಸಂಬಂಧಿಸಿದ ನಿರ್ದೇಶಕರು ಹಾಗೂ ಸಿಬ್ಬಂದಿಯ ಬ್ಯಾಂಕ್‌ ಖಾತೆಗಳನ್ನು ಪೊಲೀಸರು ಫ್ರೀಜ್‌ ಮಾಡಿದ್ದರು. ಈ ಕ್ರಮದ ವಿರುದ್ಧ ಕಂಪನಿ ಮತ್ತು ಅದರ ನಿರ್ದೇಶಕರು ಹೈಕೋರ್ಟ್‌ ಮೊರೆ ಹೋಗಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಷಾನಂದ ಅವರಿದ್ದ ಪೀಠ, ಬ್ಯಾಂಕ್‌ ಖಾತೆ ಸ್ಥಗಿತಗೊಳಿಸುವಂತಹ ಕಠಿಣ ಕ್ರಮವನ್ನು ಕೈಗೊಳ್ಳುವ ಮೊದಲು ಪ್ರಕರಣದ ಸ್ವರೂಪವನ್ನು ಪರಿಶೀಲಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿತು. ಖಾತೆಗಳನ್ನು ಸ್ಥಗಿತಗೊಳಿಸಿರುವ ಉಲ್ಲಾಳ ಠಾಣೆಯ ತನಿಖಾಧಿಕಾರಿ ವಿರೂಪಾಕ್ಷಯ್ಯ ಅವರ ಕಾರ್ಯವೈಖರಿ ಕುರಿತು ವರದಿ ಸಲ್ಲಿಸುವಂತೆ ಪೊಲೀಸ್‌ ಆಯುಕ್ತರಿಗೆ ನಿರ್ದೇಶನ ನೀಡಿ, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 14ಕ್ಕೆ ಮುಂದೂಡಿತು.

    ಗುತ್ತಿಗೆದಾರರ ದೂರಿನ ಆಧಾರ

    ಕಂಪನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಪಿ. ಹೆಗ್ಡೆ, ಎಲೆಕ್ಟ್ರಿಕಲ್‌ ಉಪಕರಣಗಳ ಖರೀದಿ ಹಾಗೂ ಸೇವಾ ಶುಲ್ಕ ಸೇರಿದಂತೆ ₹60,39,046 ಪಾವತಿಯಾಗಬೇಕಿದೆ ಎಂದು ಗುತ್ತಿಗೆದಾರ ಸುನೀಲ್‌ ಕುಮಾರ್‌ ಪೈಸ್‌ ದೂರಿನಲ್ಲಿ ತಿಳಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಆದರೆ ಒಪ್ಪಂದದ ಪ್ರಕಾರ ₹50,11,983 ಮೊತ್ತವನ್ನು ಕಂಪನಿ ಈಗಾಗಲೇ ಪಾವತಿಸಿದೆ. ಈ ಅಂಶವನ್ನು ದೂರಿನಲ್ಲಿ ಉಲ್ಲೇಖಿಸದೆ ಉಳಿದ ಹಣಕ್ಕಾಗಿ ಮಾತ್ರ ಪೊಲೀಸ್‌ ದೂರು ನೀಡಲಾಗಿದೆ ಎಂದು ವಕೀಲರು ವಾದಿಸಿದರು.

    ಒಪ್ಪಂದದಲ್ಲಿಯೇ ಹಣಕಾಸು ಸಂಬಂಧಿತ ಭಿನ್ನಾಭಿಪ್ರಾಯಗಳನ್ನು ಸಿವಿಲ್‌ ನ್ಯಾಯಾಲಯ ಅಥವಾ ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಹೀಗಿರುವಾಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಂಪನಿಯ ನಿರ್ದೇಶಕರು ಮತ್ತು ಉದ್ಯೋಗಿಗಳ ಖಾತೆಗಳನ್ನು ಸ್ಥಗಿತಗೊಳಿಸಿರುವುದು ಅತಿಯಾದ ಕ್ರಮ ಎಂದು ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದರು. ಬ್ಯಾಂಕ್‌ ಖಾತೆಗಳು ಕಾರ್ಯನಿರ್ವಹಿಸದ ಕಾರಣ ಕಂಪನಿಗೆ ತನ್ನ ಸಿಬ್ಬಂದಿಗೆ ವೇತನ ಪಾವತಿಸುವುದಕ್ಕೂ ಸಮಸ್ಯೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

    ಪೊಲೀಸರ ಕ್ರಮಕ್ಕೆ ಕೋರ್ಟ್‌ ಪ್ರಶ್ನೆ

    ವಿಚಾರಣೆಯ ವೇಳೆ ತನಿಖಾಧಿಕಾರಿ ವಿರೂಪಾಕ್ಷಯ್ಯ ನೇರವಾಗಿ ಹಾಜರಿದ್ದರು. ಮಂಗಳೂರು ನಗರ ಪೊಲೀಸ್‌ ಆಯುಕ್ತರು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ನ್ಯಾಯಪೀಠವು ಪ್ರಕರಣದ ಸ್ವರೂಪ ಸಿವಿಲ್‌ ಆಗಿದ್ದರೆ, ಅದರಲ್ಲಿ ಪೊಲೀಸ್‌ ತನಿಖೆ ನಡೆಸುವ ಅಗತ್ಯ ಏನು ಎಂದು ಪ್ರಶ್ನಿಸಿತು.

    ಕೇವಲ ಹಣಪಾವತಿ ಅಥವಾ ಒಪ್ಪಂದದ ವಿಚಾರದಲ್ಲಿ ಉಂಟಾದ ವ್ಯಾಜ್ಯವನ್ನು ಕ್ರಿಮಿನಲ್‌ ಪ್ರಕರಣದ ರೂಪಕ್ಕೆ ತರುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿತು. ಸಿವಿಲ್‌ ವಿವಾದವಿದ್ದರೆ ಸಂಬಂಧಪಟ್ಟವರು ಸಿವಿಲ್‌ ಕೋರ್ಟ್‌ಗೆ ತೆರಳುವಂತೆ ಮಾರ್ಗದರ್ಶನ ನೀಡಬೇಕೇ ಹೊರತು, ಪೊಲೀಸ್‌ ಅಧಿಕಾರ ಬಳಸಿ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು.

    ಅಮಾನತು ಕ್ರಮದ ಎಚ್ಚರಿಕೆ

    ತನಿಖಾಧಿಕಾರಿ ಸುಮಾರು 28 ವರ್ಷಗಳ ಸೇವಾ ಅನುಭವ ಹೊಂದಿದ್ದರೂ ಇಂತಹ ಕ್ರಮ ಕೈಗೊಂಡಿರುವುದಕ್ಕೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪ್ರಕರಣದಲ್ಲಿ ಪೊಲೀಸ್‌ ಅಧಿಕಾರದ ಮಿತಿಯನ್ನು ಮೀರುವ ಯಾವುದೇ ಕ್ರಮ ಮುಂದುವರಿದರೆ ಅಮಾನತು ಮಾಡಿ, ನಿಮ್ಮ ತಲೆ ಹಾಗೂ ಭುಜಕೀರ್ತಿಯನ್ನು (ಪೊಲೀಸ್‌ ಕ್ಯಾಪ್‌, ಯೂನಿಫಾರಂ ಮೇಲಿನ ಸ್ಟಾರ್‌) ಇಳಿಸಲೇ ಎಂದು  ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ನ್ಯಾಯಪೀಠ ಸೂಚಿಸಿತು.

    ವಿಚಾರಣೆ ವೇಳೆ ತನಿಖಾಧಿಕಾರಿಯ ವಿರುದ್ಧ ಅಮಾನತು ಆದೇಶ ಹೊರಡಿಸುವ ಹಂತಕ್ಕೂ ನ್ಯಾಯಾಲಯ ತೆರಳಿತ್ತು. ಆದರೆ ರಾಜ್ಯ ಸರ್ಕಾರದ ಪರ ವಕೀಲರು ಹಾಗೂ ಮಂಗಳೂರು ನಗರ ಪೊಲೀಸ್‌ ಆಯುಕ್ತರು ನೀಡಿದ ಭರವಸೆಯನ್ನು ಪರಿಗಣಿಸಿ ತಕ್ಷಣದ ಅಮಾನತು ಕ್ರಮವನ್ನು ಕೈಗೊಳ್ಳದೆ, ಪ್ರಕರಣದ ಕುರಿತು ವಾಸ್ತವಾಂಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತು.

    ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್‌ 14ರಂದು ನಡೆಯಲಿದ್ದು, ಪೊಲೀಸ್‌ ತನಿಖೆಯ ಕ್ರಮ, ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿದ ಕಾರಣ ಹಾಗೂ ಸಿವಿಲ್‌ ವಿವಾದದಲ್ಲಿ ಕೈಗೊಂಡ ಕ್ರಮಗಳ ಕುರಿತು ಮುಂದಿನ ಬೆಳವಣಿಗೆಗಳು ಗಮನ ಸೆಳೆಯುವ ಸಾಧ್ಯತೆಯಿದೆ.




    #crime #dakshinakannada #karnataka
    Previous Articleಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ
    Next Article 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    Related Posts

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.