Close Menu
    What's Hot

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್
    ಅಪರಾಧ

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    adminBy adminOctober 2, 2026No Comments1 Min Read

    ಉಡುಪಿ/ಕೋಟ  : ಬೆಳೆ ರಕ್ಷಣೆಗಾಗಿ ಪಡೆದಿದ್ದ ಬಂದೂಕಿಗೆ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೆ, ನಿಯಮ ಉಲ್ಲಂಘಿಸಿ ಹೆಚ್ಚುವರಿ ಟೆಲಿಸ್ಕೋಪ್ ಹಾಗೂ ಬೈನಾಕುಲರ್ ಅಳವಡಿಸಿ ಮಾರ್ಪಾಡು ಮಾಡಿದ ಆರೋಪದ ಮೇಲೆ ಬಂದೂಕು ಪರವಾನಿಗೆದಾರನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಒಲಿಕಲ್ ನಿವಾಸಿ ಫೆಡ್ರಿಕ್ ಡಿ’ಕ್ರೂಸ್  ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿ.

    ಆರೋಪಿ ಫೆಡ್ರಿಕ್ ಡಿ’ಕ್ರೂಸ್ ಅವರು ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಬೆಳೆ ರಕ್ಷಣೆಗಾಗಿ NPB ರೈಫಲ್ (ಸಂಖ್ಯೆ: F434139, ಲೈಸನ್ಸ್ ನಂ: UD/KND/126/3/5, ಫಾರಂ V) ಪರವಾನಿಗೆ ಹೊಂದಿದ್ದು, ಈ ಲೈಸನ್ಸ್ 16/01/2028 ರವರೆಗೆ ಊರ್ಜಿತದಲ್ಲಿದೆ. ಈ ರೈಫಲ್ ಅನ್ನು ಆರೋಪಿಯು ಕೋಟ ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇರಿಸಿದ್ದರು.

    ಆಗಸ್ಟ್ 26, 2026 ರಂದು ಉಡುಪಿ ಜಿಲ್ಲಾ ಸಶಸ್ತ್ರ ವಿಭಾಗದ ಅಧಿಕಾರಿಗಳು ಕೋಟ ಠಾಣೆಗೆ ಆಗಮಿಸಿ, ಠಾಣೆಯಲ್ಲಿ ಡೆಪಾಸಿಟ್ ಇರಿಸಲಾಗಿದ್ದ ಸಾರ್ವಜನಿಕರ ಬಂದೂಕುಗಳ ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿ ಫೆಡ್ರಿಕ್ ಅವರಿಗೆ ಸೇರಿದ NPB ರೈಫಲ್ ಅನ್ನು ಪರಿಶೀಲಿಸಿದಾಗ, ಅದಕ್ಕೆ ಹೆಚ್ಚುವರಿಯಾಗಿ ಬೈನಾಕುಲರ್ ಹಾಗೂ ಟೆಲಿಸ್ಕೋಪ್ ಅಳವಡಿಸಿರುವುದು ಪತ್ತೆಯಾಗಿದೆ.

    ಆರೋಪಿಗೆ ನೀಡಲಾದ ಆಯುಧ ಪರವಾನಿಗೆಯಲ್ಲಿ ಬಂದೂಕಿಗೆ ಯಾವುದೇ ಟೆಲಿಸ್ಕೋಪ್ ಅಥವಾ ಬೈನಾಕುಲರ್ ಅಳವಡಿಸಲು ಕಾನೂನಿನಲ್ಲಿ ಅವಕಾಶವಿರಲಿಲ್ಲ. ಆದಾಗ್ಯೂ, ಆರೋಪಿಯು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ದುರುದ್ದೇಶದಿಂದ ಬಂದೂಕನ್ನು ಮಾರ್ಪಾಡು ಮಾಡಿ ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ತನಿಖೆಯಲ್ಲಿ ಕಂಡುಬಂದಿದೆ.

    ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಪ್ರವೀಣ್ ಕುಮಾರ್ ಆರ್. ಅವರು ನೀಡಿದ ದೂರಿನ ಆಧಾರದ ಮೇಲೆ, ಕೋಟ ಪೊಲೀಸ್ ಠಾಣೆಯಲ್ಲಿ ಆರೋಪಿ ಫೆಡ್ರಿಕ್ ಡಿ’ಕ್ರೂಸ್ ವಿರುದ್ಧ ಅಪರಾಧ ಕ್ರಮಾಂಕ 150/2026 ಹಾಗೂ ಶಸ್ತ್ರಾಸ್ತ್ರ ಕಾಯ್ದೆ 1959 ರ ಕಲಂ 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.




    #crime #udupi
    Previous Article“ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ
    Next Article ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    Related Posts

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಮತ್ತೆ ಸುದ್ದಿಯಾದ ಲಂಚುಲಾಲ್; ಲಾಸ್ಟ್ ಡ್ರಾಗೆ 85,000 ಮಂದಿ ಎದ್ದೇಳುವ ಭಯವೇ? ಡಿಸೆಂಬರ್‌ವರೆಗೆ ಕಾಯೋ ಆಟವೇ?

    October 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹೆದ್ದಾರಿ ಫಲಕದಲ್ಲಿ ಹಿಂದಿ ಹೆಸರು; ವಿವಾದದ ಬೆನ್ನಲ್ಲೇ ಇಬ್ಬರು ಅಧಿಕಾರಿಗಳ ಸಸ್ಪೆನ್ಷನ್

    October 2, 2026

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಬಂದೂಕು ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆ; ಕೋಟದಲ್ಲಿ ಪರವಾನಿಗೆದಾರನ ವಿರುದ್ಧ ಕೇಸ್

    October 2, 2026

    “ಹನುಮಾನ್ ಚಾಲೀಸಾ ಪಠಿಸಿದೆ” — ಸಂಕಷ್ಟದ ಕ್ಷಣ ನೆನೆದ ಪೈಲಟ್; ಮೋದಿ ಜೊತೆ ಮಾತುಕತೆ

    October 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ರಸ್ತೆ ಬದಿಯ ದನವನ್ನು ಬಲವಂತವಾಗಿ ಕಾರಿಗೆ ತುಂಬಿಸಿ ಪರಾರಿ; ಪ್ರಮುಖ ಆರೋಪಿಯ ಬಂಧನ

    October 2, 2026

    ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ KSRTC ಬಸ್; ಮಹಿಳೆ ಸಾವು

    October 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.