Close Menu
    What's Hot

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಒಂದು ಸ್ವೀಟ್ ಬಾಕ್ಸ್ ಕೇಳಿದ್ದೇ ತಪ್ಪಾಯ್ತಾ? ಮನೆಗೆ ಟಿವಿ, ಫ್ರಿಜ್ ಸೇರಿ ನೂರಾರು ಆರ್ಡರ್‌ಗಳ ಸುರಿಮಳೆ-ವೀಡಿಯೋ ಮಾಡಿ ಕಣ್ಣೀರಿಟ್ಟ ಇನ್‌ಫ್ಲುಯೆನ್ಸರ್
    ರಾಷ್ಟ್ರೀಯ

    ಒಂದು ಸ್ವೀಟ್ ಬಾಕ್ಸ್ ಕೇಳಿದ್ದೇ ತಪ್ಪಾಯ್ತಾ? ಮನೆಗೆ ಟಿವಿ, ಫ್ರಿಜ್ ಸೇರಿ ನೂರಾರು ಆರ್ಡರ್‌ಗಳ ಸುರಿಮಳೆ-ವೀಡಿಯೋ ಮಾಡಿ ಕಣ್ಣೀರಿಟ್ಟ ಇನ್‌ಫ್ಲುಯೆನ್ಸರ್

    adminBy adminOctober 10, 2026No Comments2 Mins Read

    ಚೆನ್ನೈ: ಸ್ನೇಹಿತರೇ, ಇನ್ನು ತಡೆಯಲು ಆಗುತ್ತಿಲ್ಲ, ದಯವಿಟ್ಟು ನಿಲ್ಲಿಸಿ!” — ಇದು ತಮಿಳುನಾಡಿನ ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯರಾಗಿರುವ ವೀರಮಣಿ ಅವರ ಅಳಲು. ಉಚಿತವಾಗಿ ಒಂದು ಸ್ವೀಟ್ ಬಾಕ್ಸ್ ಕೇಳಿದ್ದಕ್ಕೆ, ಇದೀಗ ಅವರ ಮನೆಗೆ ನೂರಾರು ವಸ್ತುಗಳ ಆರ್ಡರ್‌ಗಳು ಹರಿದುಬಂದಿದ್ದು, ಇಂಟರ್‌ನೆಟ್‌ನಲ್ಲಿ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

    ಇನ್‌ಸ್ಟಾಗ್ರಾಮ್‌ನಲ್ಲಿ ದಿನನಿತ್ಯದ ಘಟನೆಗಳ ಬಗ್ಗೆ ಮಾತನಾಡುತ್ತಾ, ತಮ್ಮದೇ ಶೈಲಿಯಲ್ಲಿ ಇತರರನ್ನು ಟೀಕಿಸುವ ಮೂಲಕ ವೀರಮಣಿ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಕೇರಳ ಪ್ರವಾಸಕ್ಕೆ ತೆರಳಲು ತನ್ನ ಫಾಲೋವರ್ಸ್ ಗಳಿಂದ ಹಣದ ಸಹಾಯ ಕೋರಿದ್ದರು. ಇದಕ್ಕಾಗಿ ಕ್ಯೂಆರ್ ಕೋಡ್ ಹಂಚಿಕೊಂಡಿದ್ದ ಅವರು, ಸುಮಾರು ₹6,000 ಹಣ ಸಂಗ್ರಹವಾಗಿರುವುದಾಗಿ ವಿಡಿಯೋದಲ್ಲಿ ತಿಳಿಸಿದ್ದರು. ಕೆಲವರು ಕೇವಲ ₹1 ಕಳುಹಿಸಿದ್ದನ್ನೂ ಅವರು ಉಲ್ಲೇಖಿಸಿದ್ದರು.ಬಳಿಕ ಪ್ರವಾಸಕ್ಕೆ ತೆರಳಿದ ವಿಡಿಯೋವನ್ನೂ ಹಂಚಿಕೊಂಡಿದ್ದರು.

    ಇದಾದ ಬಳಿಕ ವೀರಮಣಿ, “ಸ್ನೇಹಿತರೇ, ಸ್ವೀಟ್ ಆರ್ಡರ್ ಮಾಡಿ” ಎಂದು ಹೇಳಿ ತಮ್ಮ ಮನೆಯ ವಿಳಾಸವನ್ನು ಹಂಚಿಕೊಂಡಿದ್ದರು. ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕೆಲವು ನೆಟ್ಟಿಗರು, ಅವರ ಮನೆಗೆ ವಿವಿಧ ವಸ್ತುಗಳನ್ನು ಕ್ಯಾಶ್ ಆನ್ ಡೆಲಿವರಿ (COD) ಮೂಲಕ ಆರ್ಡರ್ ಮಾಡಲು ಆರಂಭಿಸಿದ್ದಾರೆ. ಮೊದಲಿಗೆ ಹಾಲಿನ ಪ್ಯಾಕೆಟ್‌ಗಳ ಆರ್ಡರ್ ಬಂದಿತ್ತು. ಆದರೆ ತಾವು ಆರ್ಡರ್ ಮಾಡಿಲ್ಲ ಎಂದು ಮನೆಯವರು ತಿಳಿಸಿದಾಗ, ಡೆಲಿವರಿ ಸಿಬ್ಬಂದಿ ವಸ್ತುಗಳನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.

    ನಂತರ ಅಮೆಜಾನ್, ಫ್ಲಿಪ್‌ಕಾರ್ಟ್ ಸೇರಿದಂತೆ ವಿವಿಧ ಆನ್‌ಲೈನ್ ಶಾಪಿಂಗ್ ವೇದಿಕೆಗಳ ಮೂಲಕ ಟಿವಿ, ಫ್ರಿಜ್ ಸೇರಿದಂತೆ ದುಬಾರಿ ವಸ್ತುಗಳ ಆರ್ಡರ್‌ಗಳೂ ಮನೆಗೆ ಬಂದಿವೆ ಎಂದು ವರದಿಯಾಗಿದೆ.
    ಒಂದು ಹಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತ ದೊಡ್ಡ ವಾಹನವೇ ಮನೆ ಮುಂದೆ ಬಂದಿರುವುದನ್ನು ಕಂಡು ವೀರಮಣಿ ಆತಂಕಗೊಂಡಿದ್ದಾರೆ. ಈ ಘಟನೆಯನ್ನು ವಿಡಿಯೋ ಮಾಡಿ ಹಂಚಿಕೊಂಡ ಅವರು, “ತಿಳಿಯದೆ ಒಂದು ಸ್ವೀಟ್ ಬಾಕ್ಸ್ ಕೇಳಿದ್ದೆ, ದಯವಿಟ್ಟು ಇದನ್ನು ನಿಲ್ಲಿಸಿ” ಎಂದು ಮನವಿ ಮಾಡಿದ್ದಾರೆ.

    ಇನ್ನೂ ಕೆಲವರು ವೀರಮಣಿ ಮನೆಗೆ ಯುದ್ದ ಟ್ಯಾಂಕರ್ ಆರ್ಡರ್ ಮಾಡಿದ್ದಾರೆ ಎಂಬಂತೆ ಎಡಿಟ್ ಮಾಡಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ 500ಕ್ಕೂ ಹೆಚ್ಚು ಆರ್ಡರ್‌ಗಳು ಬಂದಿರುವುದಾಗಿ ವರದಿಯಾಗಿದ್ದು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿಯದೆ ವೀರಮಣಿ ಪರದಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯಾಗಿ ಆರಂಭವಾದ ಈ ಘಟನೆ, ಮತ್ತೊಬ್ಬರ ಹೆಸರಿನಲ್ಲಿ ಸುಳ್ಳು ಆರ್ಡರ್‌ಗಳನ್ನು ನೀಡುವುದರಿಂದ ಉಂಟಾಗುವ ತೊಂದರೆಗಳ ಬಗ್ಗೆಯೂ ಚರ್ಚೆ ಹುಟ್ಟುಹಾಕಿದೆ.




    #national
    Previous Articleದಾಖಲೆಗಳಿಲ್ಲದೆ ಜಾನುವಾರು ಮಾರಾಟಕ್ಕೆ ಯತ್ನ ಆರೋಪ; ಪುತ್ತೂರಿನಲ್ಲಿ ಮೂವರು ಅರೆಸ್ಟ್
    Next Article 2009ರ ಪ್ರಕರಣದಲ್ಲಿ 17 ವರ್ಷಗಳಿಂದ ನಾಪತ್ತೆ; ವಾರೆಂಟ್ ಜಾರಿಯಾಗಿದ್ದ ಆರೋಪಿ ಸೆರೆ

    Related Posts

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    October 17, 2026

    ‘ಲೆಹ್ರಾ ದೋ ತಿರಂಗಾ’ ರ‍್ಯಾಲಿಗೂ ಮುನ್ನ ಪೊಲೀಸ್ ಕ್ರಮ; ಸಿಜೆಪಿ ಸಂಸ್ಥಾಪಕನ ಬಂಧನ, ನೇಹಾ ಬೋರಾ ಬಿಡುಗಡೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವೆಲೆನ್ಸಿಯಾ ಚರ್ಚ್ ಪಾದ್ರಿಯ ವಿರುದ್ಧ ಪೋಕ್ಸೊ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    October 18, 2026

    ಕೋಲ್ಕತ್ತಾ ದುರ್ಗಾ ಪೂಜಾ ಸಂಭ್ರಮದಲ್ಲಿ ಕಾಲ್ತುಳಿತ: 19 ಸಾವು, ಘಟನೆಗೆ ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

    October 18, 2026

    ಕೊಳತ್ತಮಜಲು ರಹ್ಮಾನ್ ಕೊಲೆ ಪ್ರಕರಣ : ಜಾಮೀನು ಪ್ರಶ್ನಿಸಿ ಸರ್ಕಾರದ ಅರ್ಜಿ, ಹೈಕೋರ್ಟ್‌ನಿಂದ ತಡೆ

    October 18, 2026

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.