Close Menu
    What's Hot

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಐಡಿ ಕೇಳಿದ್ದಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ; ಐಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್
    ಅಪರಾಧ

    ಐಡಿ ಕೇಳಿದ್ದಕ್ಕೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕಪಾಳಮೋಕ್ಷ; ಐಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್

    adminBy adminOctober 13, 2026No Comments1 Min Read

    ಬೆಂಗಳೂರು: ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಮಧ್ಯರಾತ್ರಿ ಪಬ್‌ನಲ್ಲಿ ಕುಡಿದು ಹಂಗಾಮಾ ಸೃಷ್ಟಿಸಿ, ಪೊಲೀಸ್ ಅಧಿಕಾರಿಯ ಮೇಲೆಯೇ ಹಲ್ಲೆ ನಡೆಸಿದ ಗಂಭೀರ ಘಟನೆ ನಡೆದಿದೆ. ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಸ್ನೇಹಿತರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

    ಕಾವೂರ್’ ಪಬ್‌ಗೆ ಬಂದಿದ್ದ ಅಧಿಕಾರಿ

    ಆಂಧ್ರಪ್ರದೇಶದ ಕುಪ್ಪಂನಲ್ಲಿ ವಿಶೇಷ ಅಧಿಕಾರಿಯಾಗಿ (ಕಡ ಪ್ರಾಜೆಕ್ಟ್ ಡೈರೆಕ್ಟರ್) ಸೇವೆಯಲ್ಲಿರುವ ವಿಕಾಸ್ ಮರ್ಮಠ್, ತಮ್ಮ ಗೆಳೆಯರಾದ ನಿತೇಶ್, ಅಭಯ್ ಉದಯ್ ಸಿಂಗ್ ಮತ್ತು ರೋಷನ್ ಅವರೊಂದಿಗೆ ಬೆಂಗಳೂರಿನ ಕಬ್ಬನ್ ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿರುವ ‘ಕಾವೂರ್’ ಪಬ್‌ಗೆ ಬಂದಿದ್ದರು. ರಾತ್ರಿ ಸುಮಾರು 1:30ರ ವೇಳೆಯಲ್ಲಿ ಸಿಸಿಬಿ (ಸಿಟಿ ಕ್ರೈಮ್ ಬ್ರಾಂಚ್) ಅಧಿಕಾರಿಗಳು ಸಮವಸ್ತ್ರದಲ್ಲೇ ಪಬ್ ಪರಿಶೀಲನೆಗಾಗಿ ತೆರಳಿದ್ದರು.

    ಐಡಿ ಕೇಳಿದಕ್ಕೆ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ

    ಈ ವೇಳೆ ಸಿಸಿಬಿ ಅಧಿಕಾರಿಗಳು ನಿಯಮಿತ ಪರಿಶೀಲನೆಯ ಭಾಗವಾಗಿ ಐಡಿ ಕಾರ್ಡ್ ಕೇಳಿದ್ದಾರೆ. ಇದರಿಂದ ತೀವ್ರ ಕೋಪಗೊಂಡ ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್, ಅಧಿಕಾರಿಗಳ ವಿರುದ್ಧ ಅಸಭ್ಯ ಪದ ಬಳಸಿ ಬೈಯಲು ಪ್ರಾರಂಭಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ಪೊಲೀಸ್ ಇನ್‌ಸ್ಪೆಕ್ಟರ್ ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, “ನಾನು ಐಎಎಸ್ ಅಧಿಕಾರಿ, ನಿಮ್ಮಿಂದ ಏನು ಮಾಡಲು ಸಾಧ್ಯವೋ ನೋಡಿಕೊಳ್ಳಿ” ಎಂದು ಬೆದರಿಕೆ ಹಾಗೂ ಆವಾಜ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    ಘಟನೆಯ ನಂತರ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಭದ್ರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸರು ಐಎಎಸ್ ಅಧಿಕಾರಿ ವಿಕಾಸ್ ಮರ್ಮಠ್ ಹಾಗೂ ಅವರ ಮೂವರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ.

     

     




    #crime #karnataka
    Previous Articleನಿಷೇಧದ ನಡುವೆಯೂ ಜಂತರ್ ಮಂತರ್‌ಗೆ ನುಗ್ಗಿ ಪ್ರತಿಭಟನೆ; ಸಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ
    Next Article ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ ಅರೆಸ್ಟ್

    Related Posts

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026

    ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚಕ್ಕೆ ಕಡಿವಾಣ; ಏಕರೂಪದ ದರ ನಿಗದಿಗೆ ಆರೋಗ್ಯ ಇಲಾಖೆ ಸಿದ್ಧತೆ

    October 17, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ಎಂಆರ್‌ಪಿಎಲ್‌ ಸ್ಫೋಟದಲ್ಲಿ ಗಾಯಗೊಂಡಿದ್ದ ಕಾರ್ಮಿಕ ಸಾವು : ₹1.2 ಕೋಟಿ ಪರಿಹಾರ ಘೋಷಣೆ

    October 17, 2026

    ಮಂಗಳೂರಿನ ಎಂಆರ್‌ಪಿಎಲ್‌ ಘಟಕದಲ್ಲಿ ಬೆಂಕಿ ಅವಘಡ : ನಷ್ಟ ಮೊತ್ತದ ವರದಿ ಬಹಿರಂಗ

    October 17, 2026

    ಅಜಯ್ ದೇವಗನ್ ಬಂಗಲೆಯಲ್ಲಿ ಅಕ್ರಮ ನಿರ್ಮಾಣ ಆರೋಪ : ಬಿಎಂಸಿ ಬುಲ್ಡೋಜರ್ ಕಾರ್ಯಾಚರಣೆ‌ಗೆ ಸಿದ್ಧತೆ

    October 17, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

    October 17, 2026

    ರಾಜ್ಯಾದ್ಯಂತ ಸ್ವೀಟ್ ಅಂಗಡಿಗಳ ತಪಾಸಣೆ ಚುರುಕು: 145 ಮಾದರಿ ಸಂಗ್ರಹ, 15 ಘಟಕಗಳಿಗೆ ನೋಟಿಸ್

    October 17, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.