Close Menu
    What's Hot

    ಮಂಗಳೂರಿನಲ್ಲಿ ಸೈಬರ್ ವಂಚಕರ ಕೈಚಳಕ; ನಕಲಿ ಟ್ರಾಫಿಕ್ ಲಿಂಕ್‌ನಿಂದ ಬ್ಯಾಂಕ್ ಖಾತೆಗೆ ಕನ್ನ

    October 25, 2026

    ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ; ಆರೋಪಿ ಅರೆಸ್ಟ್

    October 25, 2026

    ಮಂಗಳೂರಿನ ಕುಡ್ಪೀಸ್ ಫುಡ್ಸ್ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಉತ್ಪನ್ನಗಳ ಜಪ್ತಿ

    October 25, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರಿನ ಕುಡ್ಪೀಸ್ ಫುಡ್ಸ್ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಉತ್ಪನ್ನಗಳ ಜಪ್ತಿ
    ಅಪರಾಧ

    ಮಂಗಳೂರಿನ ಕುಡ್ಪೀಸ್ ಫುಡ್ಸ್ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಉತ್ಪನ್ನಗಳ ಜಪ್ತಿ

    adminBy adminOctober 25, 2026No Comments1 Min Read

    ಮಂಗಳೂರು: ನಗರದ ಕದ್ರಿ ದೇವಸ್ಥಾನದ ಬಳಿ ಕಾರ್ಯಾಚರಿಸುತ್ತಿರುವ ‘ಕುಡ್ಪೀಸ್ ಫುಡ್ಸ್’ ಆಹಾರ ತಯಾರಿಕಾ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ತಂಡ ಶನಿವಾರ ದಿಡೀರ್ ದಾಳಿ ನಡೆಸಿದೆ. ಘಟಕದಲ್ಲಿ ತೀವ್ರ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅಪಾರ ಪ್ರಮಾಣದ ಖಾದ್ಯಗಳನ್ನು ಜಪ್ತಿ ಮಾಡಲಾಗಿದೆ.

    ಆರೋಗ್ಯ ಸಚಿವ ಯು. ಟಿ. ಖಾದರ್ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಅಧಿಕಾರಿಗಳ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿದೆ.

    ಹಲ್ವಾ, ಖರ್ಜೂರ ಉತ್ಪನ್ನಗಳು ಸೀಸ್ ಹಾಗೂ ಸೀಲ್:

    ದಾಳಿಯ ವೇಳೆ ಘಟಕದೊಳಗೆ ಅತ್ಯಂತ ಅನೈರ್ಮಲ್ಯದ ವಾತಾವರಣದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಅಶುಚಿಯಾಗಿ ತಯಾರಿಸಲಾಗಿದ್ದ ಹಲ್ವಾ ಹಾಗೂ ಖರ್ಜೂರದ ಉತ್ಪನ್ನಗಳನ್ನು ಅಧಿಕಾರಿಗಳು ಸ್ಥಳದಲ್ಲೇ ವಶಪಡಿಸಿಕೊಂಡು (ಸೀಸ್), ಸೀಲ್ ಮಾಡಿದ್ದಾರೆ. ಮುಂದಿನ ತನಿಖೆಗಾಗಿ ಈ ಮಾದರಿಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    • ಹಬ್ಬದ ಸಿದ್ಧತೆಗೆ ಬ್ರೇಕ್: ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸುರಕ್ಷಿತ ಆಹಾರ ಉತ್ಪನ್ನಗಳನ್ನು ತಯಾರಿಸಬೇಕು.

    • ಫುಡ್ ಪಾಯಿಸನಿಂಗ್ ತಡೆಗೆ ಕ್ರಮ: ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಫುಡ್ ಪಾಯಿಸನಿಂಗ್ (ಆಹಾರ ವಿಷಪೂರಿತ) ಆಗಲು ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
    • ಡ್ರೈನೇಜ್ ವ್ಯವಸ್ಥೆ ದುರಸ್ತಿ: ಘಟಕದ ಒಳಚರಂಡಿ (ಡ್ರೈನೇಜ್) ವ್ಯವಸ್ಥೆಯನ್ನು ತಕ್ಷಣವೇ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ.
    • ಕೀಟ, ಇಲಿಗಳ ಕಾಟಕ್ಕೆ ಮುಕ್ತಿ: ತಯಾರಿಕಾ ಘಟಕದೊಳಗೆ ಯಾವುದೇ ಕೀಟಗಳು, ಜಿರಳೆ, ಇಲಿ ಹಾಗೂ ಹೆಗ್ಗಣಗಳು ನುಸುಳದಂತೆ ಕಟ್ಟುನಿಟ್ಟಿನ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು.
    ಸದ್ಯ ಅನೈರ್ಮಲ್ಯದಿಂದ ಕೂಡಿದ್ದ ಘಟಕದ ಸಾಮಗ್ರಿಗಳನ್ನು ಸೀಜ್ ಮಾಡಲಾಗಿದ್ದು, ಇಡೀ ಆಹಾರ ತಯಾರಿಕಾ ಘಟಕವನ್ನು ಸಂಪೂರ್ಣವಾಗಿ ಶುಚಿಗೊಳಿಸಿದ ಬಳಿಕವಷ್ಟೇ ಮತ್ತೆ ಆಹಾರ ಉತ್ಪಾದನೆಯನ್ನು ಆರಂಭಿಸುವಂತೆ ಮಾಲೀಕರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.




    #crime #dakshinakannada
    Previous Articleಸ್ಟಿಂಗ್ ಆಪರೇಷನ್ ಪ್ರಕರಣದ 2011ರ ಘಟನೆ, ವೈರಲ್ ವಿಡಿಯೋ ಬಗ್ಗೆ ತನಿಖೆ ಚುರುಕು ; ಕೇರಳದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು
    Next Article ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ; ಆರೋಪಿ ಅರೆಸ್ಟ್

    Related Posts

    ಮಂಗಳೂರಿನಲ್ಲಿ ಸೈಬರ್ ವಂಚಕರ ಕೈಚಳಕ; ನಕಲಿ ಟ್ರಾಫಿಕ್ ಲಿಂಕ್‌ನಿಂದ ಬ್ಯಾಂಕ್ ಖಾತೆಗೆ ಕನ್ನ

    October 25, 2026

    ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ; ಆರೋಪಿ ಅರೆಸ್ಟ್

    October 25, 2026

    ಸ್ಟಿಂಗ್ ಆಪರೇಷನ್ ಪ್ರಕರಣದ 2011ರ ಘಟನೆ, ವೈರಲ್ ವಿಡಿಯೋ ಬಗ್ಗೆ ತನಿಖೆ ಚುರುಕು ; ಕೇರಳದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು

    October 24, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನಲ್ಲಿ ಸೈಬರ್ ವಂಚಕರ ಕೈಚಳಕ; ನಕಲಿ ಟ್ರಾಫಿಕ್ ಲಿಂಕ್‌ನಿಂದ ಬ್ಯಾಂಕ್ ಖಾತೆಗೆ ಕನ್ನ

    October 25, 2026

    ಮಂಗಳೂರು: ಕೊಲೆ ಆರೋಪದ ಬೆದರಿಕೆ ಹಾಕಿ ಹಣ, ಆಸ್ತಿ ಸುಲಿಗೆಗೆ ಸಂಚು ಆರೋಪ; ಆರೋಪಿ ಅರೆಸ್ಟ್

    October 25, 2026

    ಮಂಗಳೂರಿನ ಕುಡ್ಪೀಸ್ ಫುಡ್ಸ್ ಘಟಕದ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಉತ್ಪನ್ನಗಳ ಜಪ್ತಿ

    October 25, 2026

    ಸ್ಟಿಂಗ್ ಆಪರೇಷನ್ ಪ್ರಕರಣದ 2011ರ ಘಟನೆ, ವೈರಲ್ ವಿಡಿಯೋ ಬಗ್ಗೆ ತನಿಖೆ ಚುರುಕು ; ಕೇರಳದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸ್ಟಿಂಗ್ ಆಪರೇಷನ್ ಪ್ರಕರಣದ 2011ರ ಘಟನೆ, ವೈರಲ್ ವಿಡಿಯೋ ಬಗ್ಗೆ ತನಿಖೆ ಚುರುಕು ; ಕೇರಳದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು

    October 24, 2026

    ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.