Close Menu
    What's Hot

    ಜೋಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ; ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮ

    October 24, 2026

    ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

    October 24, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ
    ಕರ್ನಾಟಕ

    ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

    adminBy adminOctober 24, 2026No Comments1 Min Read

    ಚಿಕ್ಕಬಳ್ಳಾಪುರ : ಸಿಮೆಂಟ್ ತುಂಬಿದ ಲಾರಿಯೊಂದು ಹಿಂಬದಿಗೆ ಚಲಾಯಿಸುವ ವೇಳೆ ದ್ವಿಚಕ್ರ ವಾಹನದ ಮೇಲೆಯೇ ಹರಿದ ಪರಿಣಾಮ, ಇಬ್ಬರು ಅಪ್ರಾಪ್ತ ಬಾಲಕರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನರಾಯನಪಲ್ಲಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರನ್ನು ವಿಷ್ಣು ಹಾಗೂ ವಿಜಯ ರಾಜಕುಮಾರ್ ಎಂದು ಗುರುತಿಸಲಾಗಿದೆ.

    ಶುಕ್ರವಾರ ಸಂಜೆ ಸುಮಾರು 7:00 ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ. ಮೃತ ಬಾಲಕರು ದ್ವಿಚಕ್ರ ವಾಹನದಲ್ಲಿ ಹಾಲು ತರಲು ತೆರಳಿದ್ದ ವೇಳೆ, ಅದೇ ರಸ್ತೆಯಲ್ಲಿ ನಿಂತಿದ್ದ ಸಿಮೆಂಟ್ ಲಾರಿಯ ಚಾಲಕ ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ಒಮ್ಮೆಲೆ ಲಾರಿಯನ್ನು ಹಿಂಬದಿಗೆ (ರಿವರ್ಸ್) ಚಲಾಯಿಸಿದ್ದಾನೆ.

    ಈ ವೇಳೆ ಲಾರಿಯ ಹಿಂಬದಿಯ ಚಕ್ರದ ಅಡಿಗೆ ಬಾಲಕರ ದ್ವಿಚಕ್ರ ವಾಹನ ಸಿಲುಕಿಕೊಂಡಿದೆ. ಲಾರಿ ಹರಿದ ರಭಸಕ್ಕೆ ಇಬ್ಬರೂ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಮನೆಯಲ್ಲಿದ್ದ ಕಂದಮ್ಮಗಳು ಕಣ್ಣೆದುರೇ ಸಾವನ್ನಪ್ಪಿದ್ದರಿಂದ ಪೋಷಕರ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ಶೋಕಮೂಡಿದೆ. ಅಪ್ರಾಪ್ತ ಮಕ್ಕಳಿಗೆ ಯಾವುದೇ ಕಾರಣಕ್ಕೂ ದ್ವಿಚಕ್ರ ವಾಹನಗಳನ್ನು ಚಲಾಯಿಸಲು ಪೋಷಕರು ನೀಡಬಾರದು ಹಾಗೂ ಮಕ್ಕಳ ಸುರಕ್ಷತೆಗೆ ಸದಾ ಪ್ರಥಮ ಆದ್ಯತೆ ನೀಡಬೇಕು ಎಂಬ ಗಂಭೀರ ಸಂದೇಶವನ್ನು ಈ ದುರ್ಘಟನೆ ಸಾರ್ವಜನಿಕರಲ್ಲಿ ಮೂಡಿಸಿದೆ.




    #karnataka
    Previous Articleಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ
    Next Article ಜೋಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ; ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮ

    Related Posts

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026

    ಸಿದ್ದರಾಮಯ್ಯ ಬ್ಲ್ಯಾಕ್‌ಮೇಲ್ ಸ್ಟಿಂಗ್ ಪ್ರಕರಣಕ್ಕೆ ಹೊಸ ತಿರುವು; ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾಗೆ ಶೋಕಾಸ್ ನೋಟಿಸ್

    October 24, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಜೋಕಟ್ಟೆಯಲ್ಲಿ ಭೀಕರ ಅಗ್ನಿ ಅವಘಡ; ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮ

    October 24, 2026

    ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

    October 24, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಟ್ವಿಸ್ಟ್; ದೆಹಲಿಯಲ್ಲಿ ಮೊದಲ ಆರೋಪಿಯ ಬಂಧನ

    October 24, 2026

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಾಲು ತರಲು ಹೋಗಿದ್ದ ಇಬ್ಬರು ಬಾಲಕರ ಮೇಲೆ ಹರಿದ ಲಾರಿ; ಸ್ಥಳದಲ್ಲೇ ದುರ್ಮರಣ

    October 24, 2026

    ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದ ಪರ್ವೀಜ್ ಅಹಮದ್ ಪತ್ತೆ; ಪೊಲೀಸರಿಂದ ತೀವ್ರ ವಿಚಾರಣೆ

    October 24, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.