Close Menu
    What's Hot

    ಉಪ್ಪಿನಂಗಡಿ: ಆಟೊಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

    November 14, 2026

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ರಾಕೇಶ್ ಹತ್ಯೆ; ಮೂವರಿಗೆ ಜೀವಾವಧಿ ಶಿಕ್ಷೆ, ನಾಲ್ವನೇ ಆರೋಪಿಗೂ ಜೈಲು ಶಿಕ್ಷೆ
    ಅಪರಾಧ

    ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ರಾಕೇಶ್ ಹತ್ಯೆ; ಮೂವರಿಗೆ ಜೀವಾವಧಿ ಶಿಕ್ಷೆ, ನಾಲ್ವನೇ ಆರೋಪಿಗೂ ಜೈಲು ಶಿಕ್ಷೆ

    adminBy adminOctober 29, 2026Updated:October 30, 2026No Comments2 Mins Read

    ಮಂಗಳೂರು: ತಂಗಿಯನ್ನು ಪ್ರೀತಿಸುತ್ತಿದ್ದನೆಂಬ ಕಾರಣಕ್ಕೆ ಯುವಕನೊಬ್ಬನನ್ನು ತಲವಾರಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು, ನಾಲ್ವರು ಆರೋಪಿಗಳೂ ದೋಷಿಗಳು ಎಂದು ಸಾಬೀತುಪಡಿಸಿ ಜೀವಾವಧಿ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.
    ಘಟನೆಯು ಜನವರಿ 3, 2019 ರಂದು ಮಂಗಳೂರಿನ ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು (M.V. Shetty College) ಬಳಿ ನಡೆದಿತ್ತು.

    ಪ್ರಕರಣದ 1ನೇ ಆರೋಪಿಯಾದ ಸುನಿಲ್ ಕುಮಾರ್ @ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಎಂಬ ಯುವಕ ಪ್ರೀತಿಸುತ್ತಿದ್ದನು ಎಂಬ ಪೂರ್ವದ್ವೇಷದ ಕಾರಣದಿಂದ, ಆರೋಪಿಗಳಾದ (1) ಸುನೀಲ್ ಕುಮಾರ್ @ ಕೌಟಿ, (2) ಪ್ರವೀಣ್ ಪೂಜಾರಿ @ ಚೋಟು, (3) ಪ್ರೀತಮ್ @ ಅಭಿ, ಹಾಗೂ (4) ರೋಹಿತ್ ಕುಮಾರ್ @ ಶೂಟರ್ ಎಂಬುವವರು ಒಟ್ಟಾಗಿ ಸೇರಿ ರಾಕೇಶ್‌ನನ್ನು ತಲವಾರಿನಿಂದ ಕೊಚ್ಚಿ ಕೊಲೆ ಮಾಡಿದ್ದರು.
    ಈ ಭೀಕರ ಕೃತ್ಯಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶ್ರೀ ಕೆ.ಆರ್. ನಾಯ್ಕ್ ಅವರು ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (Charge-sheet) ಸಲ್ಲಿಸಿದ್ದರು.

    ಮಂಗಳೂರಿನ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮಾನ್ಯ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು, ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ:

    ಐಪಿಸಿ ಕಲಂ 302, 120(ಬಿ) ಜೊತೆಗೆ 34 ರಡಿ: 1 ರಿಂದ 3 ನೇ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ (ದಂಡ ಪಾವತಿಸಲು ವಿಫಲವಾದರೆ 1 ವರ್ಷ ಹೆಚ್ಚಿನ ಜೈಲು ಶಿಕ್ಷೆ).
    ಐಪಿಸಿ ಕಲಂ 201 ಜೊತೆಗೆ 34 ರಡಿ: 1 ರಿಂದ 4 ನೇ ಆರೋಪಿಗಳಿಗೆ 3 ವರ್ಷಗಳ ಕಾರಾವಾಸ ಹಾಗೂ ತಲಾ ₹5,000 ದಂಡ (ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ).
    ಐಪಿಸಿ ಕಲಂ 212 ಜೊತೆಗೆ 34 ರಡಿ (4ನೇ ಆರೋಪಿಗೆ ಮಾತ್ರ): 3 ವರ್ಷಗಳ ಕಾರಾವಾಸ ಮತ್ತು ₹5,000 ದಂಡ (ದಂಡ ಪಾವತಿಸಲು ವಿಫಲವಾದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ).

    ಒಟ್ಟು ವಿಧಿಸಲಾದ ₹70,000 ದಂಡದಲ್ಲಿ ₹20,000 ವನ್ನು ಸರ್ಕಾರಕ್ಕೆ ಹಾಗೂ ₹50,000 ವನ್ನು ಮೃತನ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮೋತೀಲಾಲ್ ಚೌದರಿ ಅವರು ಸಮರ್ಥ ವಾದ ಮಂಡನೆ ಮಾಡಿದ್ದರು.




    #crime #dakshinakannada
    Previous Articleಸೌಜನ್ಯ ಪ್ರಕರಣದಲ್ಲಿ ಹೊಸ ವಿವಾದ; ಕುಸುಮಾವತಿ–ಸೌಜನ್ಯ ಸಂಬಂಧದ ಬಗ್ಗೆ ಎಸ್‌ಐಟಿಗೆ ದೂರು
    Next Article ಕಡಬ: ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

    Related Posts

    ಉಪ್ಪಿನಂಗಡಿ: ಆಟೊಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

    November 14, 2026

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಉಪ್ಪಿನಂಗಡಿ: ಆಟೊಗೆ ಹಿಂಬದಿಯಿಂದ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

    November 14, 2026

    ಮಂಗಳೂರು: ಪಣಂಬೂರು ಬೀಚ್ ಸಮೀಪದ ರೆಸ್ಟೋರೆಂಟ್ ಮೇಲೆ ಪೊಲೀಸರ ದಾಳಿ; ಇಬ್ಬರು ಬಾಂಗ್ಲಾದೇಶ ಪ್ರಜೆಗಳು ವಶಕ್ಕೆ

    November 14, 2026

    ಉಡುಪಿ: ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಂಡರ್‌ವರ್ಲ್ಡ್ ಡಾನ್ ರವಿ ಪೂಜಾರಿಗೆ ನ್ಯಾಯಾಲಯದ ಅನುಮತಿ; ಪೊಲೀಸ್ ಭದ್ರತೆಯಲ್ಲಿ ಉಡುಪಿಗೆ ಪ್ರಯಾಣ

    November 14, 2026

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಂಗಳೂರು: ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಖಾಕಿ ಕೈವಾಡ; ಕಾರವಾರ ಪೊಲೀಸ್ ಕಾನ್‌ಸ್ಟೇಬಲ್ ಉರ್ವ ಪೊಲೀಸರ ವಶಕ್ಕೆ

    November 14, 2026

    ಮಡಿಕೇರಿ: ಹಾರಂಗಿ ಹಿನ್ನೀರಿನಲ್ಲಿ ಪ್ರವಾಸಿಗರ ಬೋಟ್ ಪಲ್ಟಿ; ಇಬ್ಬರು ಮಕ್ಕಳು ಪಾರು, ದಂಪತಿ ಸಾವು

    November 14, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.