Close Menu
    What's Hot

    ಮಂಗಳೂರು–ಬೆಂಗಳೂರು ನಡುವಿನ ಪ್ರಯಾಣಕ್ಕೆ ಹೊಸ ವೇಗ; ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳ ಡೆಲಿವರಿ; ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ಹೈಡ್ರಾಮಾ
    ಅಪರಾಧ

    ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳ ಡೆಲಿವರಿ; ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ಹೈಡ್ರಾಮಾ

    adminBy adminNovember 7, 2026No Comments2 Mins Read

    ಬೆಂಗಳೂರು: ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಅವರ ಸರ್ಕಾರಿ ನಿವಾಸದ ಬಳಿ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳನ್ನ ತಲುಪಿಸುವ ವಿಚಾರವಾಗಿ ಕೆಲಕಾಲ ಹೈಡ್ರಾಮಾ ನಡೆದಿದೆ. ಡೆಲಿವರಿ ಬಾಯ್ಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ಆಗಮನದಿಂದ ನಿವಾಸದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

    ಬೆಂಗಳೂರಿನ ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್ಸ್ ಬಳಿಯಿರುವ ಛಲವಾದಿ ನಾರಾಯಣಸ್ವಾಮಿ ಅವರ ಸರ್ಕಾರಿ ನಿವಾಸಕ್ಕೆ ಚಾಕು-ಚೂರಿ ಇರುವ ಪೋಸ್ಟ್ ಕವರ್‌ಗಳನ್ನ ತಲುಪಿಸುವ ಪ್ರಯತ್ನ ನಡೆದಿದೆ. 4 ಬೈಕ್‌ಗಳಲ್ಲಿ ಬಂದ ಡೆಲಿವರಿ ಬಾಯ್ಸ್ ಪೋಸ್ಟ್ ಕವರ್‌ಗಳನ್ನ ತಂದಿದ್ದರು. ಈ ವೇಳೆ ನಿವಾಸದ ಭದ್ರತಾ ಪೊಲೀಸರು ಡೆಲಿವರಿ ಬಾಯ್ಸ್‌ಗಳನ್ನ ತಡೆದು ಪ್ರಶ್ನಿಸಿದ್ದಾರೆ.

    ಈ ಸಂದರ್ಭದಲ್ಲಿ ಡೆಲಿವರಿ ಬಾಯ್ಸ್ ಜೊತೆ ಬಂದಿದ್ದ ಇಬ್ಬರು NSUI ಕಾರ್ಯಕರ್ತರು ಕೂಡ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಪೋಸ್ಟ್ ಕವರ್‌ಗಳನ್ನ ಛಲವಾದಿ ನಾರಾಯಣಸ್ವಾಮಿ ಅವರಿಗೆ ನೀಡುವಂತೆ ಡೆಲಿವರಿ ಬಾಯ್ಸ್‌ಗಳಿಗೆ ಒತ್ತಾಯಿಸಿದ್ದಾರೆ. ಆದ್ರೆ, ಡೆಲಿವರಿ ಬಾಯ್ಸ್‌ಗಳು ಕವರ್‌ಗಳನ್ನ ನೀಡದೆ ವಾಪಸ್ ತೆರಳಲು ಮುಂದಾಗಿದ್ದಾರೆ. ಆದಾಗ್ಯೂ ಅವರನ್ನ ಹಿಂದಿರುಗಿ ಹೋಗಿ ಅವುಗಳನ್ನ ತಲುಪಿಸುವಂತೆ ಎನ್‌ಎಸ್‌ಯುಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಡೆಲಿವರಿ ಬಾಯ್ಸ್‌ಗಳನ್ನ ವಿಚಾರಣೆ ನಡೆಸಿದ ಪೊಲೀಸರು, ಅವರನ್ನುತರಾಟೆಗೆ ತೆಗೆದುಕೊಂಡು ಅಲ್ಲಿಂದ ಕಳುಹಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶದ ಬಳಿಕ ಸ್ಥಳದಲ್ಲಿ ಕೆಲಕಾಲ ಇದ್ದ ಇಬ್ಬರು NSUI ಕಾರ್ಯಕರ್ತರು ಕೂಡ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.

    ನನ್ನದು ಅಂಬೇಡ್ಕರ್‌ ರಕ್ತ
    ಇನ್ನೂ ಘಟನೆ ಕುರಿತು ಮಾತನಾಡಿರುವ ಛಲವಾದಿ ನಾರಾಯಣಸ್ವಾಮಿ ಅವರು, ಹೋಗ್ಲಿ ದುಡ್ಡು ಕೊಟ್ಟಾದ್ರೂ ಆರ್ಡರ್ ಮಾಡಿದ್ದಾರಾ..? ದುಡ್ಡು ಕೊಡದೇ ನನ್ನ ನಂಬರ್ ಕೊಟ್ಟು ಆರ್ಡರ್ ಮಾಡಿದ್ದಾರೆ. ಆನ್‌ಲೈನ್‌ ಡೆಲಿವರಿಬಾಯ್ಸ್‌ ಜೊತೆಗೆ ಎನ್‌ಎಸ್‌ಯುಐ ಹುಡುಗರು ಬಂದಿದ್ದಾರೆ. ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ತರಕಾರಿ ಕಟ್ ಮಾಡಲು ಇಟ್ಕೊಳ್ತಿದ್ದೆ. ನಿಮ್ಮ ಚಾಕು ಚೂರಿಗೆ ನಾನು ಹೆದರಲ್ಲ. ನಕಲಿ ದಲಿತ ರಕ್ತ ಅಲ್ಲ, ಅಂಬೇಡ್ಕರ್ ರಕ್ತ ನನ್ನದು ಎಂದು ಗುಡುಗಿದ್ದಾರೆ.

    ನಿಮ್ ಯೋಗ್ಯತೆಗೆ ದುಡ್ಡು ಕೊಟ್ಟಾದ್ರೂ ಕಳ್ಸಿದ್ರೆ ಕಾಂಗ್ರೆಸ್ ಕೊಡುಗೆ ಎಂದು ಫ್ರೇಮ್ ಹಾಕ್ಸಿ ಇಡ್ತಿದೆ. ದುಡ್ಡುಗೂ ನಿಮ್ ಹತ್ರ ಗತಿ ಇಲ್ವಾ..? ವಿನಯ್ ಕುಮಾರ್ ಎನ್‌ ಅನ್ನೋ ಹೆಸರಲ್ಲಿ ಆರ್ಡರ್ ಬುಕ್ ಆಗಿದೆ. ಮೊದಲು ನನ್ನ ಆಪ್ತ ಸಹಾಯಕ ಮಲ್ಲಪ್ಪ ಅವರಿಗೆ ಬುಕ್ ಮಾಡಿ ಕಳ್ಸಿದ್ದಾರೆ. ಬಹಳಷ್ಟು ಕ್ಯಾಶ್ ಆಂಡ್ ಡೆಲಿವರಿ ಅಂತಾ ಬುಕ್ ಮಾಡಿ ಕಳ್ಸಿದ್ದಾರೆ, ಕಾಂಗ್ರೆಸ್ ಕಮಂಗಿಗಳೇ ನಿಮ್ಗೆ ಹೇಳ್ತೀನಿ.. ಚಾಕು ಚೂರಿ ರಾಜಕಾರಣ ಮಾಡಬಾರದು. ನಿಮಗೆ ಜನರೇ ಬುದ್ಧಿ ಕಲಿಸ್ತಾರೆ ಎಂದಿದ್ದಾರೆ.

    ಸುಮಾರು 20 ಫೋನ್ ನಂಬರ್ ನಿಂದ ಮೆಸೇಜ್ ಗಳು, ಕಾಲ್ ಗಳು ಬಂದಿವೆ. ಇನ್ನೂ ಕಾಲ್ ಗಳು ಬರ್ತಿವೆ, ವಿನಯ್ ಹೆಸರು ಗೊತ್ತಾಗಿದೆ, ಇನ್ನೊಬ್ಬ ಚಂದ್ರ ಅಂತಾ ಹೆಸರು ಇದೆ. ಚಂದ್ರ ಹೆಸರಿನಿಂದ ಹಾಯ್ ಛಲವಾದಿ ಅಂತಾ ಹಾಕಿದ್ದಾರೆ, ಮತ್ತೊಂದು ಮೊಬೈಲ್ ನಿಂದ ಮೆಸೇಜ್ ಬಂದಿದೆ. ಇದಕ್ಕೆ ಸರ್ಕಾರವೇ ಹೊಣೆ, ಮುಖ್ಯಮಂತ್ರಿಗಳೇ ಹೊಣೆ, ಗೃಹ ಸಚಿವರು, ಕೆಪಿಸಿಸಿ ಅಧ್ಯಕ್ಷರೇ ಕಳುಹಿಸಿದ್ದಾರೆ. ಚಾಕು ಚೂರಿ ಅಂತಾ ತಂದಿದ್ದಾರೆ, ಅದಕ್ಕಾಗಿ ನಾನು ದೂರನ್ನು ಕೊಡ್ತೀನಿ ಅಂತಾ ಹೇಳಿದ್ದಾರೆ.




    #crime #karnataka
    Previous Articleಟ್ರಂಪ್‌ಗೆ ಜೀವ ಬೆದರಿಕೆ ಹಾಕಿದ ಆರೋಪ; ಮೂರು ಬಂದೂಕುಗಳೊಂದಿಗೆ ವೆನೆಜುವೆಲಾ ಪ್ರಜೆ ವಶಕ್ಕೆ
    Next Article ಕಾಂಕ್ರೀಟ್ ಹಾಕುವ ವೇಳೆ ಕುಸಿದ ಮನೆಯ ಸ್ಲ್ಯಾಬ್; ಐವರ ರಕ್ಷಣೆ, ಓರ್ವ ಸಾವು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ

    Related Posts

    ಮಂಗಳೂರು–ಬೆಂಗಳೂರು ನಡುವಿನ ಪ್ರಯಾಣಕ್ಕೆ ಹೊಸ ವೇಗ; ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರು–ಬೆಂಗಳೂರು ನಡುವಿನ ಪ್ರಯಾಣಕ್ಕೆ ಹೊಸ ವೇಗ; ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026

    ಬಂಟ್ವಾಳದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದು ಚಿನ್ನಾಭರಣ ಕಳವು ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಶರಣು

    November 13, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮಂಗಳೂರು–ಬೆಂಗಳೂರು ನಡುವಿನ ಪ್ರಯಾಣಕ್ಕೆ ಹೊಸ ವೇಗ; ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.