Close Menu
    What's Hot

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಎನ್‌ವಿಡಿಯಾ ಚಿಪ್ ಹಗರಣಕ್ಕೆ ಹೊಸ ಟ್ವಿಸ್ಟ್; ಚೀನಾದ ಗೂಢಚಾರಿಣಿ, ಆಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್‌ವರ್ಕ್ ಸುತ್ತ ತನಿಖೆ
    ಅಂತರಾಷ್ಟ್ರೀಯ

    ಎನ್‌ವಿಡಿಯಾ ಚಿಪ್ ಹಗರಣಕ್ಕೆ ಹೊಸ ಟ್ವಿಸ್ಟ್; ಚೀನಾದ ಗೂಢಚಾರಿಣಿ, ಆಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್‌ವರ್ಕ್ ಸುತ್ತ ತನಿಖೆ

    adminBy adminNovember 11, 2026No Comments2 Mins Read

    ವಾಷಿಂಗ್ಟನ್: ಅಮೆರಿಕದ ಕಾರ್ಪೊರೇಟ್ ಲೋಕವನ್ನು ಬೆಚ್ಚಿಬೀಳಿಸಿರುವ ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್​ಗೆ ಸಂಬಂಧಿಸಿದ ಸೆಕ್ಸ್ ಮತ್ತು ಸ್ಪೈ ಹಗರಣದಲ್ಲಿ ಒಂದೊಂದೇ ಟ್ವಿಸ್ಟ್​ಗಳು ಬೆಳಕಿಗೆ ಬರುತ್ತಿವೆ. ಚೀನಾದ ಗುಪ್ತಚರ ನೆಟ್ವರ್ಕ್​ನಲ್ಲಿದ್ದಾಳೆಂದು ಹೇಳಲಾದ ಅಲೈಸ್ ಹುವಾಂಗ್ ಎನ್ನುವ ಮಹಿಳೆ ಎನ್​ವಿಡಿಯ ಸಿಇಒ ಜೊತೆಗಿನ ತನ್ನ ಆಪ್ತತೆಯನ್ನು ಬಳಸಿಕೊಂಡು ಸಾಕಷ್ಟು ಎಐ ಚಿಪ್​ಗಳನ್ನು ಚೀನಾಗೆ ಅಕ್ರಮವಾಗಿ ಸಾಗಿಸಿರುವುದು ಗೊತ್ತಾಗಿದೆ.

    ಎನ್​ವಿಡಿಯಾ ಕಂಪನಿಯ ಹೆಸರು ಕೇಳದೇ ಇರುವವರ ಗಮನಕ್ಕೆ. ಎನ್​ವಿಡಿಯಾ ಕಂಪನಿ ಕೃತಕ ಬುದ್ಧಿಮತ್ತೆಯನ್ನು ಚಲಾಯಿಸುವ ಸಿಸ್ಟಂಗಳಿಗೆ ಬೇಕಾದ ಪ್ರಬಲ ಚಿಪ್​ಗಳನ್ನು ತಯಾರಿಸುತ್ತದೆ. ವಿಶ್ವದ ಅತ್ಯಂತ ಶಕ್ತಿಶಾಲಿ ಎಐ ಮೆಷೀನ್​ಗಳಿಗೆ ಬೇಕಾಗುವ ಚಿಪ್​ಗಳನ್ನು ತಯಾರಿಸಲು ಎನ್​ವಿಡಿಯಾಗೆ ಸರಿಸಾಟಿ ಯಾವ ಕಂಪನಿಯೂ ಇಲ್ಲ. ಐಬಿಎಂ, ಕ್ವಾಲ್​ಕಾಮ್, ಇಂಟೆಲ್ ಇತ್ಯಾದಿ ದಿಗ್ಗಜ ಚಿಪ್ ಕಂಪನಿಗಳೂ ಕೂಡ ಎನ್​ವಿಡಿಯಾದಷ್ಟು ಪ್ರಬಲ ಚಿಪ್ ತಯಾರಿಸುವುದಿಲ್ಲ.

    ಎಐ ಕ್ಷೇತ್ರದಲ್ಲಿ ಅಮೆರಿಕಕ್ಕೆ ಸರಿಸಮಾನವಾಗಿ ಚೀನಾ ದಾಪುಗಾಲು ಹಾಕುತ್ತಿರುವುದು ಹಲವರಿಗೆ ಅಚ್ಚರಿ ಮೂಡಿಸಿದೆ. ಚೀನಾಗೆ ಎನ್​ವಿಡಿಯಾದ ಪ್ರಬಲ ಎಐ ಚಿಪ್​ಗಳು ರಫ್ತಾಗದಂತೆ ಅಮೆರಿಕ ನಿರ್ಬಂಧಿಸಿದೆ. ಆದರೂ ಕೂಡ ಚೀನಾ ಶಕ್ತಿಶಾಲಿ ಎಐ ಮಾಡಲ್​ಗಳನ್ನು ನಿರ್ಮಿಸುವಲ್ಲಿ ಸಫಲವಾಗಿದೆ. ಚೀನಾವೇ ಸ್ವಂತವಾಗಿ ಚಿಪ್ ತಯಾರಿಸುವ ತಂತ್ರಜ್ಞಾನ ಅಭಿವೃದ್ದಿಪಡಿಸಿದೆ ಎನ್ನುವ ವಾದ ಇದೆ. ಆದರೆ, ಬೇನಾಮಿ ಕಂಪನಿಗಳ ಮೂಲಕ ಅಕ್ರಮವಾಗಿ ಅಮೆರಿಕದಿಂದ ಚಿಪ್​ಗಳನ್ನು ಚೀನಾ ತರಿಸಿಕೊಳ್ಳುತ್ತಿದೆ ಎನ್ನುವ ಅನುಮಾನ ಇತ್ತು. ಈ ಅನುಮಾನಗಳಿಗೆ ಈಗ ಜೆನ್ಸೆನ್ ಹುವಾಂಗ್ ಪ್ರಕರಣ ಪುಷ್ಟಿ ಕೊಟ್ಟಿದೆ.

    ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ಅವರು ಅಲೈಸ್ ಹುವಾಂಗ್ ಜೊತೆ ಸಂಬಂಧ ಹೊಂದಿರುವ ಶಂಕೆ ಇದೆ. ಲೈಂಗಿಕ ಸಂಬಂಧ ಇತ್ತೋ ಇಲ್ಲವೋ, ಆದರೆ, ಇಬ್ಬರು ಪರಿಚಿತರಂತೂ ಆಗಿದ್ದು. ಇಬ್ಬರೂ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಆಗಿದ್ದರೆ ಚಿಪ್ ಸರಬರಾಜು ಸಾಧ್ಯವಾಗುತ್ತಿರಲಿಲ್ಲ. ಆದರೆ, ಅಲೈಸ್ ಅವರು ಒಂದು ಕಾರ್ಪೊರೇಟ್ ಜಾಲದ ಪ್ರಮುಖ ಕೊಂಡಿಯಾಗಿದ್ದರೆನ್ನಲಾಗಿದೆ. ಈ ಮೂಲಕ 7.5 ಬಿಲಿಯನ್ ಡಾಲರ್ ಮೌಲ್ಯದ ಎಐ ಚಿಪ್​ಗಳನ್ನು ಚೀನಾ ಕಂಪನಿಗಳಿಗೆ ರವಾನೆ ಮಾಡಲು ನೆರವಾಗಿದ್ದರು.

    ವರದಿಗಳ ಪ್ರಕಾರ, ಅಲೈಸ್ ಅವರ ಒಡೆತನದ ಸಿಂಗಾಪುರ ಮೂಲದ ‘ಮೆಗಾಸ್ಪೀಡ್’  ಮುಂತಾದ ಸಂಸ್ಥೆಗಳ ಮೂಲಕ ಲಕ್ಷಾಂತರ H100, H200 ಮತ್ತು A100 ಚಿಪ್‌ಗಳನ್ನು ಚೀನಾಗೆ ಮರೆಮಾಚಿ ಕಳುಹಿಸಲಾಗಿದೆ ಎಂದು ಶಂಕಿಸಲಾಗಿದೆ.

    ಪತಿ ಕಾಂಗ್ ವೀ ಪಾತ್ರ

    ಅಲೈಸ್ ಹುವಾಂಗ್ ಅವರ ಪತಿ ಎಂದು ಹೇಳಿಕೊಳ್ಳಲಾದ ಕಾಂಗ್ ವೀ  ಅವರ ಪಾತ್ರವೂ ಹೊರಬರುತ್ತಿದೆ. ಚಿಪ್ ಪೂರೈಕೆಯ ಜಾಲದಲ್ಲಿ ಅವರೂ ಒಂದು ಭಾಗವಾಗಿದ್ದರು. ಇವರು ಚೀನಾದ ಹಣಕಾಸು ಕ್ಷೇತ್ರದಲ್ಲಿ ಬಹಳ ಕಿರಿಯ ವಯಸ್ಸಿನಲ್ಲೇ ಹೆಸರು ಮಾಡಿದ್ದವರು. ಹಾಗೆಯೇ, ಅಕ್ರಮ ವ್ಯವಹಾರಗಳಿಂದ ಹೆಸರೂ ಕೆಡಿಸಿಕೊಂಡಿದ್ದವರು. ಇವರನ್ನು ಚೀನಾದ ಗುಪ್ತಚರ ಜಾಲವು ಬಳಸುತ್ತಿತ್ತು ಎನ್ನಲಾಗಿದೆ.

    ಎನ್​ವಿಡಿಯಾದ ಕ್ಲೌಡ್ ಪಾರ್ಟ್ನರ್ ಆಗಿದ್ದ ಮೆಗಾಸ್ಪೀಡ್

    2023ರಲ್ಲಿ ಸ್ಥಾಪಿತವಾದ ಮೆಗಾಸ್ಪೀಡ್ ಸಂಸ್ಥೆಯು ಬಹಳ ಬೇಗನೇ ಎನ್​ವಿಡಿಯಾದ ಆದ್ಯತೆಯ ಕ್ಲೌಡ್ ಪಾರ್ಟ್ನರ್ ಆಗಿತ್ತು. ಅದರ ಸಿಂಗಾಪುರ, ಇಂಡೋನೇಷ್ಯಾ ಇತ್ಯಾದಿ ವಿಭಾಗಗಳು ಹಾಗೂ ಇನ್ನೂ ಹಲವಾರು ಕಂಪನಿಗಳನ್ನು ಬಳಸಿಕೊಂಡು ಎನ್​ವಿಡಿಯಾದ ಪ್ರಬಲ ಎಐ ಚಿಪ್​ಗಳನ್ನು ಅಕ್ರಮವಾಗಿ ಪಡೆದಿತ್ತು. ಇದೆಲ್ಲವೂ ಸಾಧ್ಯವಾಗಿದ್ದು ಅಲೈಸ್ ಅವರು ಜೆನ್ಸೆನ್ ಜೊತೆ ಹೊಂದಿದ್ದ ವೈಯಕ್ತಿಕ ಆಪ್ತತೆಯಿಂದ ಎಂಬುದು ಅಮೆರಿಕದ ಗುಪ್ತಚರರ ಅನಿಸಿಕೆ.

    ಅಮೆರಿಕದ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ಹಾಗೂ ತನಿಖೆ

    ಅಮೆರಿಕದ ಗುಪ್ತಚರ ವಲಯವು ಈ ಸಂಬಂಧದ ಕುರಿತು ಮೊದಲೇ ಎಚ್ಚರಿಕೆ ನೀಡಿದ್ದು, ಚೀನಾದ ಗುಪ್ತಚರ ಇಲಾಖೆಯು ಎನ್‌ವಿಡಿಯಾ ಮುಖ್ಯಸ್ಥರ ಸಮೀಪ ತೆರಳಲು ಈ ಸಂಪರ್ಕವನ್ನು ಬಳಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

    ಈ ಬೆಳವಣಿಗೆಯಿಂದಾಗಿ ಎನ್‌ವಿಡಿಯಾ ಕಂಪನಿಯ ಮಂಡಳಿಯು ಸ್ವತಂತ್ರ ತನಿಖೆಗೆ ಆದೇಶಿಸಿದ್ದು, ಜಾಗತಿಕ ತಂತ್ರಜ್ಞಾನ ಮತ್ತು ಭದ್ರತಾ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

     




    #crime International
    Previous Articleಬೆಳ್ತಂಗಡಿ: ಎರಡು ದ್ವಿಚಕ್ರ ವಾಹನಗಳಿಗೆ ಗೂಡ್ಸ್ ಟೆಂಪೋ ಸರಣಿ ಡಿಕ್ಕಿ; ಇಬ್ಬರು ಸವಾರರು ಸಾವು
    Next Article ಬ್ರಹ್ಮಾವರದಲ್ಲಿ ಹಣಕಾಸಿನ ವಿವಾದಕ್ಕೆ ಬೀದಿರಂಪಾಟ; ಸಾರ್ವಜನಿಕ ಸ್ಥಳದಲ್ಲೇ ಹೊಡೆದಾಡಿಕೊಂಡ ಮೂವರು ಪೊಲೀಸರ ವಶಕ್ಕೆ

    Related Posts

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026

    ದೆಹಲಿ ಮಾಜಿ ಸಿಎಂ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ; ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ₹7 ಕೋಟಿ ಬೇಡಿಕೆ

    November 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ಮಣಿಪಾಲ ಎಂಐಟಿ ಹಾಸ್ಟೆಲ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿ ಶವವಾಗಿ ಪತ್ತೆ; ಪ್ರಕರಣ ದಾಖಲು

    November 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.