Close Menu
    What's Hot

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮಕ್ಕಳ ಆಟಿಕೆ ನೋಟುಗಳನ್ನೇ 5 ಕೋಟಿ ರೂ. ಎಂದು ಬಿಂಬಿಸಿ ವಂಚನೆಗೆ ಸ್ಕೆಚ್; ಸಿಸಿಬಿ ಬಲೆಗೆ ಬಿದ್ದ ನಾಲ್ವರು
    ಅಪರಾಧ

    ಮಕ್ಕಳ ಆಟಿಕೆ ನೋಟುಗಳನ್ನೇ 5 ಕೋಟಿ ರೂ. ಎಂದು ಬಿಂಬಿಸಿ ವಂಚನೆಗೆ ಸ್ಕೆಚ್; ಸಿಸಿಬಿ ಬಲೆಗೆ ಬಿದ್ದ ನಾಲ್ವರು

    adminBy adminNovember 11, 2026No Comments2 Mins Read

    ಬೆಳಗಾವಿ: ಐದು ಕೋಟಿ ರೂಪಾಯಿ ಬ್ಲ್ಯಾಕ್ ಮನಿ ನೀಡಿದರೆ ಮೂರು ಕೋಟಿ ರೂಪಾಯಿ ವೈಟ್ ಮನಿ ನೀಡುವುದಾಗಿ ಆಮಿಷವೊಡ್ಡಿ ಕೋಟಿ ಕೋಟಿ ರೂಪಾಯಿಗಳ ವ್ಯವಹಾರದ ಹೆಸರಿನಲ್ಲಿ ಪರಸ್ಪರ ವಂಚನೆಗೆ ಮುಂದಾಗಿದ್ದ ಖದೀಮರ ಜಾಲವನ್ನು ಬೆಳಗಾವಿ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಅಸಲಿ ಹಣದ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನು ನೀಡಿ ವಂಚಿಸಲು ಒಂದು ತಂಡ ಸ್ಕೆಚ್ ಹಾಕಿದ್ದರೆ, ಮತ್ತೊಂದು ಕಡೆ ಐದು ಕೋಟಿ ರೂಪಾಯಿ ಆರ್‌ಟಿಜಿಎಸ್ ಮಾಡಿದ್ದೇವೆಂದು ನಕಲಿ ಬ್ಯಾಂಕ್ ಮೆಸೇಜ್ ಕಳುಹಿಸಿ ಮೋಸ ಮಾಡಲು ಸಂಚು ರೂಪಿಸಲಾಗಿತ್ತು.

    ಬೆಳಗಾವಿ  ನಗರದ ಟಿಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ನಗರದಲ್ಲಿ ಈ ಘಟನೆ ನಡೆದಿದ್ದು, ಸಿಸಿಬಿ ಸಬ್ ಇನ್‌ಸ್ಪೆಕ್ಟರ್‌ ಮಂಜುನಾಥ ಭಜಂತ್ರಿ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಎರಡೂ ಕಡೆಯ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    5 ಕೋಟಿ ಬ್ಲ್ಯಾಕ್ ಮನಿಗೆ 3 ಕೋಟಿ ವೈಟ್ ಮನಿ ಆಮಿಷ
    ಆರೋಪಿಗಳು ಐದು ಕೋಟಿ ರೂಪಾಯಿ ಬ್ಲ್ಯಾಕ್ ಮನಿ ನೀಡಿದರೆ ಪ್ರತಿಯಾಗಿ ಮೂರು ಕೋಟಿ ರೂಪಾಯಿ ವೈಟ್ ಮನಿ ನೀಡುವುದಾಗಿ ಪರಸ್ಪರ ಮಾತುಕತೆ ನಡೆಸಿದ್ದರು ಎನ್ನಲಾಗಿದೆ. ಆನ್‌ಲೈನ್ ಮೂಲಕ ಐದು ಕೋಟಿ ರೂಪಾಯಿ ವರ್ಗಾವಣೆ ಮಾಡುವುದಾಗಿ ಹೇಳಿ, ಅದಕ್ಕೆ ಪ್ರತಿಯಾಗಿ ಮೂರು ಕೋಟಿ ರೂಪಾಯಿ ಬಿಳಿ ಹಣ ನೀಡುವ ಒಪ್ಪಂದದ ರೀತಿಯಲ್ಲಿ ವ್ಯವಹಾರ ಕುದುರಿಸಲು ಮುಂದಾಗಿದ್ದರು.

    ಆದರೆ, ಈ ಕೋಟಿ ಕೋಟಿ ವ್ಯವಹಾರದ ಹಿಂದೆ ಎರಡೂ ಕಡೆಯವರಿಂದಲೂ ವಂಚನೆಯ ಸಂಚು ನಡೆದಿತ್ತು. ಒಂದು ಕಡೆ ಅಸಲಿ ಹಣ ನೀಡುವ ಬದಲಿಗೆ ಮಕ್ಕಳ ಆಟಿಕೆ ನೋಟುಗಳನ್ನು ಬಳಸಿ ಮೋಸ ಮಾಡಲು ಯೋಜನೆ ರೂಪಿಸಲಾಗಿತ್ತು.

    ಮಕ್ಕಳ ಆಟಿಕೆ ನೋಟುಗಳ ಮೇಲೆ 500 ರೂಪಾಯಿ ನೋಟುಗಳ ವೀಡಿಯೊ
    ಐದು ಕೋಟಿ ರೂಪಾಯಿ ನಗದು ಇದೆ ಎಂಬಂತೆ ತೋರಿಸಲು ಮಕ್ಕಳ ಆಟಿಕೆ ನೋಟುಗಳನ್ನು ಸಂಗ್ರಹಿಸಿ, ಅವುಗಳ ಮೇಲ್ಭಾಗದಲ್ಲಿ ಅಸಲಿ 500 ರೂಪಾಯಿ ನೋಟುಗಳನ್ನು ಇಟ್ಟು ವೀಡಿಯೊ ಮಾಡಲಾಗಿತ್ತು. ಈ ಮೂಲಕ ದೊಡ್ಡ ಮೊತ್ತದ ಅಸಲಿ ಹಣವಿದೆ ಎಂಬ ನಂಬಿಕೆ ಮೂಡಿಸಿ ಎದುರಿನವರನ್ನು ವಂಚಿಸಲು ಸಿದ್ಧತೆ ನಡೆಸಲಾಗಿತ್ತು ಎನ್ನಲಾಗಿದೆ.

    ಇನ್ನೊಂದೆಡೆ, ಶಿವಾನಂದ ಮುನವಳ್ಳಿ ಎಂಬಾತ ಐದು ಕೋಟಿ ರೂಪಾಯಿ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬಂತೆ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಹಾಗೂ ಸುಳ್ಳು ಮೆಸೇಜ್ ಕಳುಹಿಸಿ ಎದುರಿನವರನ್ನು ನಂಬಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಹೀಗೆ ಒಂದು ಕಡೆಯವರು ಆಟಿಕೆ ನೋಟುಗಳನ್ನು ಬಳಸಿ ಮೋಸ ಮಾಡಲು ಮುಂದಾಗಿದ್ದರೆ, ಮತ್ತೊಂದು ಕಡೆಯವರು ನಕಲಿ ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಸೃಷ್ಟಿಸಿ ವಂಚಿಸಲು ಯತ್ನಿಸಿದ್ದರು.

    ವಂಚನೆಗೆ ಸ್ಕೆಚ್ ಹಾಕುವಾಗಲೇ ಸಿಸಿಬಿ ದಾಳಿ
    ಅಶೋಕ ನಗರದಲ್ಲಿ ನಕಲಿ ಆಟಿಕೆ ಹಣವನ್ನು ಸಂಗ್ರಹಿಸಿಟ್ಟುಕೊಂಡು ವ್ಯವಹಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಎರಡೂ ಕಡೆಯವರ ವಂಚನೆಯ ಪ್ರಯತ್ನ ಬೆಳಕಿಗೆ ಬಂದಿದ್ದು, ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಬಂಧಿತರನ್ನು ಶಿವಲಿಂಗಯ್ಯ ಗಣಾಚಾರಿ (28), ಸಾಗರ ಕಿಳ್ಳಿಕೇತ್ (32), ಅಂಕಲಿಯ ವಿನಾಯಕ ನೋಕರೆ (27) ಹಾಗೂ ಶಿವಾನಂದ ಮುನವಳ್ಳಿ ಎಂದು ಗುರುತಿಸಲಾಗಿದೆ.

    ಆರೋಪಿಗಳಿಂದ ಮಕ್ಕಳ ಆಟಿಕೆ ನೋಟುಗಳು, ಏರ್‌ಗನ್ ಸೇರಿದಂತೆ ಅಂದಾಜು 35 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕೋಟಿ ಕೋಟಿ ರೂಪಾಯಿಗಳ ವ್ಯವಹಾರದ ಹೆಸರಿನಲ್ಲಿ ಪರಸ್ಪರರನ್ನೇ ವಂಚಿಸಲು ಮುಂದಾಗಿದ್ದ ನಾಲ್ವರು ಆರೋಪಿಗಳು ಕೊನೆಗೆ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕಾರ್ಯಾಚರಣೆ ಸಿಸಿಬಿ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ ಭಜಂತ್ರಿ ನೇತೃತ್ವದಲ್ಲಿ ನಡೆದಿದ್ದು, ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

     




    Previous Articleಶೌಚಾಲಯದ ಕನ್ನಡಿಯಲ್ಲಿ ಕೈಬರಹದ ಹೈಜಾಕ್ ಬೆದರಿಕೆ; ಏರ್ ಇಂಡಿಯಾ ವಿಮಾನದಲ್ಲಿ ಭದ್ರತಾ ತಪಾಸಣೆ
    Next Article ಮಾಜಿ ಒಲಿಂಪಿಯನ್ ಮನೆಗೆ ನುಗ್ಗಿದ ಕಳ್ಳರು; ಖಾಲಿ ಮನೆಗೆ ಕನ್ನ ಹಾಕಿ ಪದಕ, ಚಿನ್ನಾಭರಣ ದೋಚಿದ ಇಬ್ಬರ ಬಂಧನ

    Related Posts

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026

    ದೆಹಲಿ ಮಾಜಿ ಸಿಎಂ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ; ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ₹7 ಕೋಟಿ ಬೇಡಿಕೆ

    November 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ಮಣಿಪಾಲ ಎಂಐಟಿ ಹಾಸ್ಟೆಲ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿ ಶವವಾಗಿ ಪತ್ತೆ; ಪ್ರಕರಣ ದಾಖಲು

    November 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.