Close Menu
    What's Hot

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಉಜ್ಜಯಿನಿಯಲ್ಲಿ ಭೀಕರ ಅಗ್ನಿ ಅವಘಡ; ಕಟ್ಟಡದೊಳಗೆ ಮಹಿಳೆಯರು ಸೇರಿ 15 ಮಂದಿ ಸಿಲುಕಿರುವ ಶಂಕೆ
    ರಾಷ್ಟ್ರೀಯ

    ಉಜ್ಜಯಿನಿಯಲ್ಲಿ ಭೀಕರ ಅಗ್ನಿ ಅವಘಡ; ಕಟ್ಟಡದೊಳಗೆ ಮಹಿಳೆಯರು ಸೇರಿ 15 ಮಂದಿ ಸಿಲುಕಿರುವ ಶಂಕೆ

    adminBy adminNovember 12, 2026No Comments1 Min Read

    ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬುಧವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಮಹಿಳೆಯರು ಸೇರಿದಂತೆ ಕನಿಷ್ಠ 10 ರಿಂದ 15 ಮಂದಿ ಒಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ಈಗಾಗಲೇ ಕೆಲವರನ್ನು ರಕ್ಷಣೆ ಮಾಡಲಾಗಿದ್ದು, ಉಳಿದವರ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

    “ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ‘ಗರುಡ ಪುರಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಹಲವರು ಸೇರಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಒದಗಿಸಿದ ಏಣಿಯ ಸಹಾಯದಿಂದ ಕೆಲವರು ಕಟ್ಟಡದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಕೆಲವು ಮಹಿಳೆಯರು ಇನ್ನೂ ಕಟ್ಟಡದೊಳಗೆ ಸಿಲುಕಿಕೊಂಡಿದ್ದು, ಕೆಳಗೆ ಇಳಿಯಲು ಸಾಧ್ಯವಾಗುತ್ತಿಲ್ಲ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

    “ಬೆಂಕಿ ಅವಘಡದ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಸ್ಥಳೀಯ ಆಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿಯನ್ನು ನಿಯಂತ್ರಿಸುವುದು ಮತ್ತು ಕಟ್ಟಡದಲ್ಲಿರುವವರನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಟ್ಟಡವು ಕಿರಿದಾದ ಗಲ್ಲಿಯಲ್ಲಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ” ಎಂದು ಉಜ್ಜಯಿನಿ ಜಿಲ್ಲಾಧಿಕಾರಿ ರೋಷನ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.




    Previous Articleಮಂಗಳೂರು: ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಸ್ನೇಹಿತನನ್ನು ನಂಬಿಸಿ ಸೈಬರ್ ವಂಚನೆ; ಪ್ರಕರಣ ದಾಖಲು
    Next Article ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ; ₹14.35 ಲಕ್ಷ ಮೌಲ್ಯದ ಮದ್ಯ ಸಹಿತ ನಾಲ್ವರು ಅರೆಸ್ಟ್

    Related Posts

    ದೆಹಲಿ ಮಾಜಿ ಸಿಎಂ ಕೇಜ್ರಿವಾಲ್‌ಗೆ ಕೊಲೆ ಬೆದರಿಕೆ; ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ₹7 ಕೋಟಿ ಬೇಡಿಕೆ

    November 12, 2026

    ಚಂಡೀಗಢಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಫ್ಲೈಓವರ್‌ಗೆ ಡಿಕ್ಕಿ; ಮೂವರು ಪ್ರಯಾಣಿಕರು ದುರ್ಮರಣ

    November 11, 2026

    ಶೌಚಾಲಯದ ಕನ್ನಡಿಯಲ್ಲಿ ಕೈಬರಹದ ಹೈಜಾಕ್ ಬೆದರಿಕೆ; ಏರ್ ಇಂಡಿಯಾ ವಿಮಾನದಲ್ಲಿ ಭದ್ರತಾ ತಪಾಸಣೆ

    November 11, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬಳಸಿದ ಅಡುಗೆ ಎಣ್ಣೆ ಮರುಬಳಕೆಗೆ ಬ್ರೇಕ್; ಮಂಗಳೂರು ಸೇರಿ ನಾಲ್ಕು ನಗರಗಳಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪನೆ

    November 12, 2026

    ಬೆಳ್ತಂಗಡಿಯಲ್ಲಿ ಭೀಕರ ಅಪಘಾತ; 15 ಅಡಿ ಆಳದ ಹೊಂಡಕ್ಕೆ ಉರುಳಿದ ಕಾರು,ಐವರಿಗೆ ಗಾಯ

    November 12, 2026

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ಮಣಿಪಾಲ ಎಂಐಟಿ ಹಾಸ್ಟೆಲ್‌ನಲ್ಲಿ ಬಿಟೆಕ್ ವಿದ್ಯಾರ್ಥಿನಿ ಶವವಾಗಿ ಪತ್ತೆ; ಪ್ರಕರಣ ದಾಖಲು

    November 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಎಒ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನಾಲ್ವರು ಹೆಡ್‌ಕಾನ್ಸ್‌ಟೆಬಲ್‌ಗಳು ಅಮಾನತು, ಅಧಿಕಾರಿಗಳಿಗೆ ನೋಟಿಸ್

    November 12, 2026

    ನಿರಪರಾಧಿಗೆ ಜೈಲು ಶಿಕ್ಷೆ; ಎರಡೂವರೆ ವರ್ಷಗಳ ಬಳಿಕ ಜೀವಂತವಾಗಿ ಪ್ರತ್ಯಕ್ಷವಾದ ಕೊಲೆಯಾದ ಮಹಿಳೆ

    November 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.