Close Menu
    What's Hot

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಬೆನ್ನ ಮೇಲೆ ಹೊತ್ತು 6 ಕಿ.ಮೀ ನಡೆದು ವಿದ್ಯಾರ್ಥಿನಿಯ ಜೀವ ಉಳಿಸಿದ ಶಿಕ್ಷಕಿ
    ರಾಷ್ಟ್ರೀಯ

    ಬೆನ್ನ ಮೇಲೆ ಹೊತ್ತು 6 ಕಿ.ಮೀ ನಡೆದು ವಿದ್ಯಾರ್ಥಿನಿಯ ಜೀವ ಉಳಿಸಿದ ಶಿಕ್ಷಕಿ

    adminBy adminJuly 4, 2026No Comments1 Min Read

    ಆಂಧ್ರಪ್ರದೇಶ: ತೀವ್ರವಾಗಿ ಅಸ್ವಸ್ಥಗೊಂಡಿದ್ದ ಏಳನೇ ತರಗತಿಯ ಬುಡಕಟ್ಟು ಬಾಲಕಿಯೊಬ್ಬಳನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು, ಕಲ್ಲು-ಮುಳ್ಳುಗಳಿಂದ ಕೂಡಿದ ದುರ್ಗಮ ಹಾದಿಯಲ್ಲಿ ಬರೋಬ್ಬರಿ 6 ಕಿಲೋಮೀಟರ್ ನಡೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಶಿಕ್ಷಕಿಯೊಬ್ಬರು ಬಾಲಕಿಗೆ ಜೀವದಾನ ಮಾಡಿದ್ದಾರೆ. . ಆಂಧ್ರಪ್ರದೇಶದ ಪಾರ್ವತಿಪುರ ಮಣ್ಯಂ ಜಿಲ್ಲೆಯ ಗುಮ್ಮಲಕ್ಷ್ಮಿಪುರದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿಯ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

    ಇಲ್ಲಿನ ಆದಿವಾಸಿ ಬಾಲಕಿಯರ ಕಲ್ಯಾಣ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೇಮನಿ ಅವರೇ ಇಡೀ ದೇಶ ಮೆಚ್ಚುವಂತಹ ಸಾಹಸ ಮತ್ತು ಮಾನವೀಯ ಕಾರ್ಯ ಮಾಡಿದ ನಿಸ್ವಾರ್ಥ ಶಿಕ್ಷಕಿ. ಅದೇ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿರುವ ಭುವನೇಶ್ವರಿ ಎಂಬ ವಿದ್ಯಾರ್ಥಿನಿ ಹಠಾತ್ತನೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ದೂರದ ಬೆಟ್ಟದ ಮೇಲಿರುವ ಬುಡಕಟ್ಟು ಪ್ರದೇಶದ ಆ ಶಾಲೆಯಿಂದ ಆಸ್ಪತ್ರೆಗೆ ಸಾಗಿಸಲು ಯಾವುದೇ ಸೂಕ್ತ ಸಾರಿಗೆ ಅಥವಾ ಆಂಬ್ಯುಲೆನ್ಸ್ ವ್ಯವಸ್ಥೆ ಇರಲಿಲ್ಲ. ರಸ್ತೆಯೂ ಸಂಪೂರ್ಣ ಹದಗೆಟ್ಟಿತ್ತು. ಬಾಲಕಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿರುವುದನ್ನು ಕಂಡು ಶಾಲೆಯ ಸಿಬ್ಬಂದಿ ಕಂಗಾಲಾಗಿದ್ದರು. ಈ ವೇಳೆ ಸ್ವಲ್ಪವೂ ಹಿಂಜರಿಯದ ಶಿಕ್ಷಕಿ ಹೇಮನಿ, ಬಾಲಕಿಯನ್ನು ತನ್ನ ಬೆನ್ನಿಗೆ ಗಟ್ಟಿಯಾಗಿ ಕಟ್ಟಿಕೊಂಡು ಕಲ್ಲು-ಮುಳ್ಳುಗಳ ರಸ್ತೆಯಲ್ಲೇ ಬಿರುಸಿನ ಹೆಜ್ಜೆ ಹಾಕಲಾರಂಭಿಸಿದ್ದಾರೆ.

    ತನ್ನ ಆಯಾಸವನ್ನು ಲೆಕ್ಕಿಸದೆ ಬರೋಬ್ಬರಿ 6 ಕಿಲೋಮೀಟರ್ ದೂರದಲ್ಲಿದ್ದ ಜಿಲ್ಲಾ ಆಸ್ಪತ್ರೆಗೆ ಬಾಲಕಿಯನ್ನು ಹೊತ್ತೊಯ್ದು ಸಕಾಲದಲ್ಲಿ ದಾಖಲಿಸಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಸಮಯಪ್ರಜ್ಞೆ ಮೆರೆದು ಒಂದು ಅಮೂಲ್ಯ ಜೀವ ಉಳಿಸಿದ ಶಿಕ್ಷಕಿ ಹೇಮನಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಆಂಧ್ರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇಲಾಖಾ ಕಚೇರಿಗೆ ಆಹ್ವಾನಿಸಿ ಆತ್ಮೀಯವಾಗಿ ಸನ್ಮಾನಿಸಿದೆ. ಈ ಘಟನೆಯು ಒಂದು ಕಡೆ ಶಿಕ್ಷಕಿಯ ಉದಾತ್ತ ಗುಣವನ್ನು ಸಾರಿದರೆ, ಮತ್ತೊಂದೆಡೆ ಬುಡಕಟ್ಟು ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಕಾಡುತ್ತಿರುವ ಮೂಲಸೌಕರ್ಯ ಹಾಗೂ ರಸ್ತೆಗಳ ಕೊರತೆಯನ್ನು ಎತ್ತಿ ತೋರಿಸಿದೆ.




    #national
    Previous Articleವಿಟ್ಲದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ; ಪ್ರಕರಣ ದಾಖಲಿಸಿದ ಪೊಲೀಸರು
    Next Article ರೀಲ್ಸ್‌ನಲ್ಲಿ ಮಿಂಚಿದ ಕದ್ದ ವಜ್ರದ ಹಾರ; ವರ್ಷದ ಬಳಿಕ ಬಯಲಾಯ್ತು ಕಳ್ಳತನ

    Related Posts

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ವಂದೇ ಭಾರತ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ; ಉತ್ತರ ಕನ್ನಡ ಪ್ರಯಾಣಿಕರಿಂದ ಆಕ್ಷೇಪ

    October 6, 2026

    ‘ಜೈಲೇ ನಿಮ್ಮ ನೈಜ ಸ್ಥಾನ’; ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಖಡಕ್ ಎಚ್ಚರಿಕೆ

    October 6, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.