Close Menu
    What's Hot

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ವೀಸಾ, ಟಿಕೆಟ್ ಎಲ್ಲವೂ ಸಿದ್ಧ… ಗಲ್ಫ್‌ಗೆ ಹಾರುವ ಮುನ್ನವೇ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರ ಬಲೆಗೆ!
    ರಾಷ್ಟ್ರೀಯ

    ವೀಸಾ, ಟಿಕೆಟ್ ಎಲ್ಲವೂ ಸಿದ್ಧ… ಗಲ್ಫ್‌ಗೆ ಹಾರುವ ಮುನ್ನವೇ ಪೋಕ್ಸೋ ಪ್ರಕರಣದ ಆರೋಪಿ ಪೊಲೀಸರ ಬಲೆಗೆ!

    adminBy adminJuly 4, 2026No Comments2 Mins Read

    ಕಾಸರಗೋಡು : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿದೇಶಕ್ಕೆ ಹೊಸ ಉದ್ಯೋಗ ಅರಸಿ ದೇಶ ಬಿಟ್ಟು ಪರಾರಿಯಾಗಲು ಕೇವಲ ಎರಡು ದಿನಗಳು ಬಾಕಿ ಇರುವಾಗ ಕಾಮುಕ ಆಟೋರಿಕ್ಷಾ ಚಾಲಕನನ್ನು ವಿದ್ಯಾನಗರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಕುಂಬಳ ಮೂಲದ ಅಬು ತಾಹಿರ್ (32) ಬಂಧಿತ ಆರೋಪಿ.

    ಬಂಧಿತ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪ್ರಸ್ತುತ ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಅಬು ತಾಹಿರ್ ಹಾಗೂ ಆತನ ಕುಟುಂಬ ಈ ಹಿಂದೆ ವಿದ್ಯಾನಗರದಲ್ಲಿದ್ದ ಸಂತ್ರಸ್ತೆಯ ಮನೆಯ ಬಳಿಯೇ ಬಾಡಿಗೆಗೆ ವಾಸವಿದ್ದರು. ಈ ಅವಧಿಯಲ್ಲಿ (2022 ರಿಂದ 2023 ರ ನಡುವೆ) ಸಂತ್ರಸ್ತೆಗೆ ಕೇವಲ 16 ವರ್ಷ ವಯಸ್ಸಾಗಿದ್ದಾಗ ಆರೋಪಿ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2023 ರಲ್ಲಿ ಈತ ತನ್ನ ಕುಟುಂಬದೊಂದಿಗೆ ಕುಂಬಳಕ್ಕೆ ಶಿಫ್ಟ್ ಆಗಿದ್ದರೂ, ಬಾಲಕಿಯೊಂದಿಗೆ ಸತತವಾಗಿ ಫೋನ್ ಸಂಪರ್ಕದಲ್ಲಿದ್ದ. ಇತ್ತೀಚೆಗೆ ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಆಕೆಯ ವರ್ತನೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಮೊಬೈಲ್ ಫೋನ್ ಪರಿಶೀಲಿಸಿದಾಗ ಅಬು ತಾಹಿರ್ ಜೊತೆಗಿನ ಚಾಟ್‌ಗಳು ಮತ್ತು ಕರೆ ದಾಖಲೆಗಳು ಪತ್ತೆಯಾಗಿವೆ. ತಕ್ಷಣವೇ ಪೋಷಕರು ಯುವತಿಯನ್ನು ವೃತ್ತಿಪರ ಸಮಾಲೋಚನೆಗೆ (Professional Counseling) ಒಳಪಡಿಸಿದಾಗ ತಾನು ಎದುರಿಸಿದ್ದ ಭೀಕರ ಲೈಂಗಿಕ ದೌರ್ಜನ್ಯವನ್ನು ಆಕೆ ಕಣ್ಣೀರಿಡುತ್ತಾ ಬಿಚ್ಚಿಟ್ಟಿದ್ದಾಳೆ.

    ಬಾಲಕಿಯ ಕೌನ್ಸೆಲಿಂಗ್ ಹೇಳಿಕೆಯ ಆಧಾರದ ಮೇಲೆ ಪೋಷಕರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ವಿದ್ಯಾನಗರ ಇನ್ಸ್‌ಪೆಕ್ಟರ್ ನೇತೃತ್ವದ ವಿಶೇಷ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಕುಂಬಳದಲ್ಲಿ ಅಬು ತಾಹಿರ್‌ನನ್ನು ಹೆಡೆಮುರಿ ಕಟ್ಟಿದೆ. ತನಿಖೆಯ ವೇಳೆ ಆರೋಪಿಯು ಜುಲೈ 5 ರಂದು ಗಲ್ಫ್ ದೇಶಕ್ಕೆ ಹಾರಲು ವೀಸಾ ಮತ್ತು ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಕೇವಲ ಎರಡು ದಿನ ಮುಂಚಿತವಾಗಿ ಅಂದ್ರೆ ಜುಲೈ 3 ರಂದು ಈತನನ್ನು ಲಾಕ್ ಮಾಡದಿದ್ದರೆ ಈತ ವಿದೇಶಕ್ಕೆ ಹಾರಿ ತಲೆಮರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.




    #nation
    Previous Articleನಟನೆಗೆ ಅವಕಾಶ ಕೇಳಿ ಬಂದು ನಟನ ಮನೆಯಲ್ಲಿ ಚಿನ್ನ ಕದ್ದ ಆರೋಪಿ ಬಂಧನ
    Next Article ಉಡುಪಿ: ₹70 ಲಕ್ಷ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ; ಮಹಿಳೆಯ ಬಂಧನ – ಅಶ್ಲೀಲ ವಿಡಿಯೋಗಳಿಂದ ಬ್ಲ್ಯಾಕ್‌ಮೇಲ್ ಆರೋಪ!

    Related Posts

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ವಂದೇ ಭಾರತ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ; ಉತ್ತರ ಕನ್ನಡ ಪ್ರಯಾಣಿಕರಿಂದ ಆಕ್ಷೇಪ

    October 6, 2026

    ‘ಜೈಲೇ ನಿಮ್ಮ ನೈಜ ಸ್ಥಾನ’; ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಖಡಕ್ ಎಚ್ಚರಿಕೆ

    October 6, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.