Close Menu
    What's Hot

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಆನ್‌ಲೈನ್ ಜೂಜು ವ್ಯಸನದ ದುರಂತ; ಮಹಿಳೆಯನ್ನು ಕೊಲ್ಲಲು ಬಾವಿಗೆ ತಳ್ಳಿದ ಡಿಗ್ರಿ ವಿದ್ಯಾರ್ಥಿ ಬಂಧನ
    ರಾಷ್ಟ್ರೀಯ

    ಆನ್‌ಲೈನ್ ಜೂಜು ವ್ಯಸನದ ದುರಂತ; ಮಹಿಳೆಯನ್ನು ಕೊಲ್ಲಲು ಬಾವಿಗೆ ತಳ್ಳಿದ ಡಿಗ್ರಿ ವಿದ್ಯಾರ್ಥಿ ಬಂಧನ

    adminBy adminJuly 5, 2026No Comments2 Mins Read

    ಕರೀಂನಗರ: ಆನ್‌ಲೈನ್ ಜೂಜಾಟ ಹಾಗೂ ಲಾಟರಿ ಆ್ಯಪ್‌ಗಳ ವ್ಯಸನಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಂಡು, ಸಾಲದ ಅಪ್ಲಿಕೇಶನ್‌ಗಳ ಏಜೆಂಟರ ಕಿರುಕುಳ ತಾಳಲಾರದೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕೂಲಿ ಮಹಿಳೆಯೊಬ್ಬರನ್ನು ಅಪಹರಿಸಿ, ಅವರ ಚಿನ್ನಾಭರಣ ದೋಚಿ, ಸಾಕ್ಷಿ ನಾಶಕ್ಕಾಗಿ ಕೃಷಿ ಬಾವಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ 21 ವರ್ಷದ ಕಾಲೇಜು ವಿದ್ಯಾರ್ಥಿಯನ್ನು ಕರೀಂನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಗೊಲ್ಲಪಲ್ಲಿ ಗ್ರಾಮದ ದ್ವಿತೀಯ ವರ್ಷದ ಪದವಿ (Degree) ವಿದ್ಯಾರ್ಥಿ ಧಮ್ಮ ದಿನೇಶ್ ರೆಡ್ಡಿ (21) ಬಂಧಿತ ಭೀಕರ ಅಪರಾಧಿ. ಕರೀಂನಗರ ಟವರ್ ಸರ್ಕಲ್ ಲೇಬರ್ ಅಡ್ಡಾದಲ್ಲಿ ಕೂಲಿ ಕೆಲಸಕ್ಕಾಗಿ ಕಾಯುತ್ತಿದ್ದ ಗಂಗಾಧರ ಲಕ್ಷ್ಮಿ (55) ಎಂಬ ಮಹಿಳೆ ಈ ಜೂಜುಕೋರನ ಕ್ರೌರ್ಯಕ್ಕೆ ಬಲಿಯಾದ ದುರ್ದೈವಿ.

    ಜುಲೈ 1, 2026 ರಂದು ಬೆಳಿಗ್ಗೆ 10 ಗಂಟೆಗೆ ಕರೀಂನಗರ ಟವರ್ ಸರ್ಕಲ್‌ನಿಂದ ಗಂಗಾಧರ ಲಕ್ಷ್ಮಿ ನಾಪತ್ತೆಯಾಗಿದ್ದರು. ಈ ಬಗ್ಗೆ ಕರೀಂನಗರ-3 ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ವೇಳೆ ಮಹಿಳೆಯನ್ನು ಅಪಹರಿಸಿ, ದರೋಡೆ ಮಾಡಿ ಕೊಲೆಗೆ ಯತ್ನಿಸಿರುವುದು ಪತ್ತೆಯಾದ ತಕ್ಷಣ ಪ್ರಕರಣವನ್ನು ಕರೀಂನಗರ-1 ಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ತಾಂತ್ರಿಕ ಪುರಾವೆ, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಲೊಕೇಶನ್ ವಿಶ್ಲೇಷಣೆ ನಡೆಸಿದ ಇನ್ಸ್‌ಪೆಕ್ಟರ್ ರಾಜೇಶ್ವರ್ ನೇತೃತ್ವದ ತಂಡ ಮಾರುಕಟ್ಟೆ ಬಳಿಯ ಹುತಾತ್ಮರ ಸ್ಮಾರಕದ ಬಳಿ ಆರೋಪಿ ದಿನೇಶ್ ರೆಡ್ಡಿಯನ್ನು ಹೆಡೆಮುರಿ ಕಟ್ಟಿದೆ.
    ಆರೋಪಿ ದಿನೇಶ್ ರೆಡ್ಡಿ ಆನ್‌ಲೈನ್ ಜೂಜಾಟ, ಡಿಯುವಿನ್ ಮತ್ತು ಜಿಯೋ ಲಾಟರಿಯಂತಹ ಅಕ್ರಮ ಕಲರ್ ಟ್ರೇಡಿಂಗ್ ಆಟಗಳಿಗೆ ದಾಸನಾಗಿ ₹4 ಲಕ್ಷ ಕಳೆದುಕೊಂಡಿದ್ದ. ವಿವಿಧ ಲೋನ್ ಆ್ಯಪ್‌ಗಳ ಮೂಲಕ ಸಾಲ ಪಡೆದು ವಸೂಲಾತಿ ತೀವ್ರ ಒತ್ತಡ ಎದುರಿಸುತ್ತಿದ್ದರಿಂದ ಅಪರಾಧ ಮಾಡಲು ಸ್ಕೆಚ್ ಹಾಕಿದ್ದ. ಜುಲೈ 1 ರಂದು ಒಂಟಿಯಾಗಿದ್ದ ಗಂಗಾಧರ ಲಕ್ಷ್ಮಿ ಅವರ ಬಳಿ ಬಂದು ಕೆಲಸ ಕೊಡುವುದಾಗಿ ನಂಬಿಸಿ ರ್ಯಾಪಿಡೊ ಬೈಕ್ ಬುಕ್ ಮಾಡಿ ತಿಮ್ಮಾಪುರ ಮಾರ್ಗವಾಗಿ ನುಸ್ತುಲಾಪುರ ಗ್ರಾಮದ ಹೊರವಲಯದ ನಿರ್ಜನ ಹೊಲಗಳಿಗೆ ಕರೆದೊಯ್ದಿದ್ದ. ಅಲ್ಲಿ ಮಹಿಳೆಯ ಮೇಲೆ ಭೀಕರ ದಾಳಿ ನಡೆಸಿ ಐದು ಗ್ರಾಂ ಚಿನ್ನಾಭರಣ ಹಾಗೂ 20 ಗ್ರಾಂ ಬೆಳ್ಳಿಯ ಗಟ್ಟಿಯನ್ನು ದೋಚಿದ್ದ.

    ತನ್ನ ಪಾಪಕೃತ್ಯ ಮತ್ತು ಗುರುತು ಹೊರಬರಬಾರದು ಎಂಬ ಕ್ರೂರ ಉದ್ದೇಶದಿಂದ ದಿನೇಶ್ ರೆಡ್ಡಿ ಆಕೆಯನ್ನು ಕೃಷಿ ಬಾವಿಗೆ ತಳ್ಳಿದ್ದ. ಈ ವೇಳೆ ಮಹಿಳೆ ಬಾವಿಯಲ್ಲಿದ್ದ ಹಗ್ಗ ಹಿಡಿದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದಾಗ, ಕಟುಕ ದಿನೇಶ್ ರೆಡ್ಡಿ ಆಕೆ ಬದುಕುಳಿಯಬಾರದು ಎಂದು ಆ ಹಗ್ಗವನ್ನೇ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ. ಆದರೆ ಗಂಗಾಧರ ಲಕ್ಷ್ಮಿ ಅವರಿಗೆ ಈಜು ಬರುತ್ತಿದ್ದರಿಂದ, ಅವರು ತಕ್ಷಣವೇ ಬಾವಿಯ ಮೋಟಾರ್ ಪೈಪ್‌ಗೆ ಕಟ್ಟಿದ್ದ ಮತ್ತೊಂದು ಹಗ್ಗವನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾವು-ಬದುಕಿನ ನಡುವೆ ಇಡೀ ರಾತ್ರಿ ಇಂಚಿಂಚೂ ನರಕಯಾತನೆ ಅನುಭವಿಸಿದ್ದಾರೆ. ಮರುದಿನ ಬೆಳಿಗ್ಗೆ ಹೊಲಕ್ಕೆ ಬಂದ ರೈತರು ಆಕೆಯ ಕಿರುಚಾಟ ಕೇಳಿ ಹಾಸಿಗೆ ಹಾಗೂ ಹಗ್ಗದ ಸಹಾಯದಿಂದ ಆಕೆಯನ್ನು ರಕ್ಷಿಸಿ ಕರೀಂನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯಿಂದ ಬೈಕ್, ಮೊಬೈಲ್ ಫೋನ್, ₹5,000 ನಗದು ವಶಪಡಿಸಿಕೊಳ್ಳಲಾಗಿದೆ. ಕದ್ದ ಚಿನ್ನವನ್ನು ₹30,000 ಹಣಕ್ಕೆ ಖರೀದಿಸಿದ್ದ ಟವರ್ ಸರ್ಕಲ್‌ನ ಜ್ಯುವೆಲ್ಲರಿ ವ್ಯಾಪಾರಿ ವೇಣು ಮನೋಹರ ಚಾರಿ ಎಂಬಾತನನ್ನು ಬಂಧಿಸಿ ಆತನಿಂದಲೂ ಒಡವೆಗಳನ್ನು ಜಪ್ತಿ ಮಾಡಲಾಗಿದೆ.




    #national
    Previous Articleಟೈಮಿಂಗ್ಸ್ ವಿಚಾರಕ್ಕೆ ಬಸ್ ಸಿಬ್ಬಂದಿ ರಂಪಾಟ; ಎರಡು ಬಾರಿ ಡಿಕ್ಕಿ ಹೊಡೆದು ₹1.5 ಲಕ್ಷ ನಷ್ಟ
    Next Article ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆ ಅವಾಂತರ; ಮರ ಬಿದ್ದು ಕಾರು ನಜ್ಜುಗುಜ್ಜು, ಟ್ರಾಫಿಕ್ ಜಾಮ್

    Related Posts

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ವಂದೇ ಭಾರತ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸುವ ಬೇಡಿಕೆ; ಉತ್ತರ ಕನ್ನಡ ಪ್ರಯಾಣಿಕರಿಂದ ಆಕ್ಷೇಪ

    October 6, 2026

    ‘ಜೈಲೇ ನಿಮ್ಮ ನೈಜ ಸ್ಥಾನ’; ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್‌ ಖಡಕ್ ಎಚ್ಚರಿಕೆ

    October 6, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೊಬೈಲ್‌ನಲ್ಲೇ ತುಳು ಲಿಪಿಯಲ್ಲಿ ಟೈಪ್‌ ಮಾಡಿ; ‘ಕುರಲ್ ತುಳು ಟಚ್’ ಕೀಬೋರ್ಡ್‌ ಲೋಕಾರ್ಪಣೆ

    October 6, 2026

    ಚಿನ್ನ ಕಳವು ಪ್ರಕರಣದ ದೂರುದಾರರೇ ಈಗ ಆರೋಪದ ಸುಳಿಯಲ್ಲಿ; ಯೂಟ್ಯೂಬರ್ ಮಧುಮಿತಾ ವಿರುದ್ಧ ಕೇಸ್

    October 6, 2026

    ಸುಳ್ಯ ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಅಪಘಾತ; ಕೂದಲೆಳೆ ಅಂತರದಲ್ಲಿ ಶಾಸಕಿ, ಚಾಲಕ ಪಾರು

    October 6, 2026

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಒಂದು ವರ್ಷದಿಂದ ಒಂದೇ ಅಂಗಡಿಯಲ್ಲಿ ಪದೇಪದೇ ತಾಮ್ರ ಕದಿಯುತ್ತಿದ್ದ ಯುವಕ ಅರೆಸ್ಟ್

    October 6, 2026

    ನಕಲಿ ಕೋರ್ಟ್ ಆದೇಶ ಬಳಸಿ ಜೀವಾವಧಿ ಕೈದಿ ಬಿಡುಗಡೆ; ಜೈಲು DIG ಸೋಮಶೇಖರ್ ಅರೆಸ್ಟ್

    October 6, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.