Close Menu
    What's Hot

    ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ : 23 ವರ್ಷದ ಚಾಲಕ ಸಾವು

    October 21, 2026

    ಮಂಗಳೂರು ದಸರಾ ಮೆರವಣಿಗೆಗೆ ಮಾರ್ಗಸೂಚಿ ಬಿಡುಗಡೆ : ಸಂಜೆ 4ಕ್ಕೆ ಭವ್ಯ ಮೆರವಣಿಗೆ ಆರಂಭ

    October 21, 2026

    ಉಡುಪಿಯ ರಶ್ಮಿ ಸಾಮಂತ್‌ಗೆ ರಾಷ್ಟ್ರಮಟ್ಟದ ಹೊಣೆಗಾರಿಕೆ : ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿಗೆ ನೇಮಕ

    October 21, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮೂಕಾಂಬಿಕಾ ದೇವಸ್ಥಾನದಲ್ಲಿ ₹80 ಸಾವಿರ ಕಳ್ಳತನ; 24 ಗಂಟೆಯಲ್ಲಿ ಮೂವರು ಮಹಿಳಾ ಕಳ್ಳಿಯರ ಬಂಧನ
    ಅಪರಾಧ

    ಮೂಕಾಂಬಿಕಾ ದೇವಸ್ಥಾನದಲ್ಲಿ ₹80 ಸಾವಿರ ಕಳ್ಳತನ; 24 ಗಂಟೆಯಲ್ಲಿ ಮೂವರು ಮಹಿಳಾ ಕಳ್ಳಿಯರ ಬಂಧನ

    adminBy adminJuly 7, 2026No Comments2 Mins Read

    ಕೊಲ್ಲೂರು : ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಹೊರಾಂಗಣದಲ್ಲಿ ಭಕ್ತರೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ₹80,000 ನಗದು ಕಳವು ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕೊಲ್ಲೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದೂರು ದಾಖಲಾದ ಕೇವಲ 24 ಗಂಟೆಗಳ ಅವಧಿಯಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಭದ್ರಾವತಿ ಮೂಲದ ಮೂವರು ಮಹಿಳಾ ಕಳ್ಳಿಯರನ್ನು ಬಂಧಿಸಿ ಕಂಬಿ ಎಣಿಸುವಂತೆ ಮಾಡಿದ್ದಾರೆ.

    ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿಗಳಾದ ನೇತ್ರಾವತಿ (33), ಶಾರದಾ (50) ಹಾಗೂ ದುರ್ಗಮ್ಮ (44) ಬಂಧಿತ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜೋಶ್ ಹಾಗೂ ಅವರ ಪತ್ನಿ ನಿಮಿಶಾ ಎಂಬ ಭಕ್ತರು ಜುಲೈ 5ರಂದು ಬೆಳಿಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕಾಗಿ ಆಗಮಿಸಿದ್ದರು. ದೇವಸ್ಥಾನದ ಗರ್ಭಗುಡಿಯೊಳಗೆ ದೇವರ ದರ್ಶನ ಮುಗಿಸಿ ಹೊರಾಂಗಣಕ್ಕೆ ಬಂದು ನೋಡಿದಾಗ, ನಿಮಿಶಾ ಅವರ ವ್ಯಾನಿಟಿ ಬ್ಯಾಗ್‌ನ ಜಿಪ್ ತೆರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಪರಿಶೀಲಿಸಿದಾಗ ಬ್ಯಾಗ್‌ನಲ್ಲಿದ್ದ ಬರೋಬ್ಬರಿ ₹80,000 ನಗದು ಹೊಂದಿದ್ದ ಪರ್ಸ್ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂತ್ರಸ್ತ ದಂಪತಿ ತಕ್ಷಣವೇ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಮತ್ತು ಬೈಂದೂರು ಸಿಐ ಶಿವಕುಮಾರ್ ಅವರ ನೇರ ಮಾರ್ಗದರ್ಶನದಲ್ಲಿ ಕೊಲ್ಲೂರು ಉಪನಿರೀಕ್ಷಕರಾದ ವಿನಯ ಎಂ. ಕೊರ್ಲಹಳ್ಳಿ, ಭೀಮಶಂಕರ್ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ತಕ್ಷಣವೇ ತನಿಖೆಗೆ ಇಳಿಯಿತು. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದ ಪೊಲೀಸರು, ಘಟನಾ ಸ್ಥಳದಲ್ಲಿ ಸಾರ್ವಜನಿಕರು ಮೊಬೈಲ್‌ನಲ್ಲಿ ಕ್ಲಿಕ್ಕಿಸಿದ್ದ ವಿವಿಧ ಫೋಟೋಗಳನ್ನು ಹಾಗೂ ತಾಂತ್ರಿಕ ನೆರವನ್ನು ಆಧರಿಸಿ 24 ಗಂಟೆಯೊಳಗೆ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

    ಬಂಧಿತ ಕಳ್ಳಿಯರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳ ಹಿನ್ನೆಲೆ ಪರಿಶೀಲಿಸಿದಾಗ ಇವರು ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಬಂಧಿತ ದುರ್ಗಮ್ಮ ವಿರುದ್ಧ ಈಗಾಗಲೇ 2 ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಮತ್ತೊಬ್ಬ ಆರೋಪಿ ಶಾರದಾ ವಿರುದ್ಧ ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ 2 ಹಾಗೂ ಮೈಸೂರಿನ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ 1 ಸೇರಿದಂತೆ ಒಟ್ಟು 3 ಪ್ರಕರಣಗಳು ದಾಖಲಾಗಿವೆ ಎಂದು ಉಡುಪಿ ಜಿಲ್ಲಾ ಪೊಲೀಸರು ಮಾಹಿತಿ ನೀಡಿದ್ದಾರೆ




    #karnataka
    Previous Articleಬಿರುಗಾಳಿಯ ಅಬ್ಬರಕ್ಕೆ ಶಾಲಾ ಕಟ್ಟಡದ ಹೆಂಚು ಬಿದ್ದು ವಿದ್ಯಾರ್ಥಿನಿಗೆ ಗಾಯ
    Next Article ‘ಜೀವನ ಸಾಕಾಗಿದೆ’ ಎಂದು ಮೆಸೇಜ್‌; ಸ್ಯಾಂಕಿ ಕೆರೆಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

    Related Posts

    ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ : 23 ವರ್ಷದ ಚಾಲಕ ಸಾವು

    October 21, 2026

    ಉಡುಪಿಯ ರಶ್ಮಿ ಸಾಮಂತ್‌ಗೆ ರಾಷ್ಟ್ರಮಟ್ಟದ ಹೊಣೆಗಾರಿಕೆ : ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿಗೆ ನೇಮಕ

    October 21, 2026

    ಸೌಜನ್ಯ ಪ್ರಕರಣ ಮರುತನಿಖೆ ಚುರುಕು : ಅಪರಾಧ ಸ್ಥಳಕ್ಕೆ ಭೇಟಿ ನೀಡಲಿರುವ ಎಸ್‌ಐಟಿ ತಂಡ

    October 21, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ : 23 ವರ್ಷದ ಚಾಲಕ ಸಾವು

    October 21, 2026

    ಮಂಗಳೂರು ದಸರಾ ಮೆರವಣಿಗೆಗೆ ಮಾರ್ಗಸೂಚಿ ಬಿಡುಗಡೆ : ಸಂಜೆ 4ಕ್ಕೆ ಭವ್ಯ ಮೆರವಣಿಗೆ ಆರಂಭ

    October 21, 2026

    ಉಡುಪಿಯ ರಶ್ಮಿ ಸಾಮಂತ್‌ಗೆ ರಾಷ್ಟ್ರಮಟ್ಟದ ಹೊಣೆಗಾರಿಕೆ : ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿಗೆ ನೇಮಕ

    October 21, 2026

    ಸೌಜನ್ಯ ಪ್ರಕರಣ ಮರುತನಿಖೆ ಚುರುಕು : ಅಪರಾಧ ಸ್ಥಳಕ್ಕೆ ಭೇಟಿ ನೀಡಲಿರುವ ಎಸ್‌ಐಟಿ ತಂಡ

    October 21, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ವಿಮಾನ ನಿಲ್ದಾಣದಿಂದ ವಾಪಸ್ ಬರುತ್ತಿದ್ದ ಕಾರಿಗೆ ಬಸ್ ಡಿಕ್ಕಿ : 23 ವರ್ಷದ ಚಾಲಕ ಸಾವು

    October 21, 2026

    “ಅವರೇ ಪಾಕಿಸ್ತಾನದ ಜೊತೆ ನಂಟು ಬೆಳೆಸುತ್ತಿದ್ದಾರೆ” : ಆರ್‌ಎಸ್‌ಎಸ್‌ ವಿರುದ್ಧ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    October 21, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.