Close Menu
    What's Hot

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಪತ್ನಿಯ ಕೊಲೆ ಪ್ರಕರಣ ಬಯಲು: ಮೃತದೇಹದ ಫೋಟೋ ಪ್ರೇಯಸಿಗೆ ಕಳುಹಿಸಿದ ಪತಿಯ ಬಂಧನ
    ಅಂತರಾಷ್ಟ್ರೀಯ

    ಪತ್ನಿಯ ಕೊಲೆ ಪ್ರಕರಣ ಬಯಲು: ಮೃತದೇಹದ ಫೋಟೋ ಪ್ರೇಯಸಿಗೆ ಕಳುಹಿಸಿದ ಪತಿಯ ಬಂಧನ

    adminBy adminJuly 9, 2026No Comments2 Mins Read

    ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರಾಜ್ಯದ ಬೆಲ್ಲೆವ್ಯೂ ನಗರದಲ್ಲಿ ಮೈ ನಡುಗಿಸುವಂತಹ ಕೊಲೆ ಬೆಳಕಿಗೆ ಬಂದಿದೆ. ಭಾರತ ಮೂಲದ 30 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅವಿನಾಶ್ ನಾರ್ನೆ, ತನ್ನ 27 ವರ್ಷದ ಪತ್ನಿ ರಾಜಿತಾ ಸಬ್ಬಿನೇನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಹೆಂಡತಿಯ ಮೃತದೇಹದ ಫೋಟೋವನ್ನು ಭಾರತದಲ್ಲಿದ್ದ ತನ್ನ ಪ್ರೇಯಸಿಗೆ ವಾಟ್ಸಾಪ್ ಮಾಡಿದ್ದಾನೆ.

    ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಕೊಲೆಯನ್ನು ಆತ ಆತ್ಮಹತ್ಯೆ ಅಥವಾ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದ. ಆದರೆ ಸುದೀರ್ಘ 9 ತಿಂಗಳ ತನಿಖೆಯ ನಂತರ ಅಮೆರಿಕ ಪೊಲೀಸರು ಆತನ ಅಸಲಿ ಮುಖವಾಡವನ್ನು ಬಯಲು ಮಾಡಿ ಜುಲೈ 5 ರಂದು ಕೊಲೆ ಆರೋಪದಡಿ ಬಂಧಿಸಿದ್ದಾರೆ.

    2025ರ ಅಕ್ಟೋಬರ್ 27 ರಂದು ಅವಿನಾಶ್ ಪೊಲೀಸರಿಗೆ ಕರೆ ಮಾಡಿ, ತನ್ನ ಪತ್ನಿ  ಬಾತ್​ರೂಮ್​ಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ, ಎಷ್ಟು ಕರೆದರೂ ಹೊರಗೆ ಬರುತ್ತಿಲ್ಲ ಎಂದು ನಾಟಕವಾಡಿದ್ದ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ರಾಜಿತಾ ಶವವಾಗಿ ಬಿದ್ದಿದ್ದರು.

    ತಾನು ಹೊರಗೆ ಹೋಗಿ 40 ನಿಮಿಷಗಳಲ್ಲಿ ವಾಪಸ್ ಬರುವಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ಅವಿನಾಶ್ ಕಥೆ ಕಟ್ಟಿದ್ದ. ಆದರೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆ ಸಮಯದಲ್ಲಿ ಆ ಮನೆಯೊಳಗೆ ಬೇರೆ ಯಾರೂ ಪ್ರವೇಶಿಸಿರಲಿಲ್ಲ ಎಂಬುದು ಸಾಬೀತಾಯಿತು. ಮರುದಿನ ವೈದ್ಯಕೀಯ ಪರೀಕ್ಷೆಯಲ್ಲಿ ರಾಜಿತಾ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ಬಂದಿತ್ತು. ಅನುಮಾನ ಪತಿ ಅವಿನಾಶ್ ಮೇಲೆ ತಿರುಗಿತ್ತು.

    ಅವರಿಬ್ಬರ ಮದುವೆಗೂ ಬಂದಿದ್ದ ಪ್ರೇಯಸಿ

    ತನಿಖೆ ಮುಂದುವರೆದಂತೆ ಅವಿನಾಶ್‌ನ ಕರಾಳ ರಹಸ್ಯಗಳು ಹೊರಬಂದವು. ಅವಿನಾಶ್ ಭಾರತದಲ್ಲಿ ಒಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಜೂನ್ 5, 2025 ರಂದು ರಾಜಿತಾ ಅವರನ್ನು ವಿವಾಹವಾಗಿದ್ದ. ಆಘಾತಕಾರಿ ವಿಷಯವೆಂದರೆ, ಈ ಮದುವೆಗೆ ಅವಿನಾಶ್‌ನ ಆ ರಹಸ್ಯ ಗೆಳತಿಯೂ ಬಂದಿದ್ದಳು.

    ಮದುವೆಯಾಗಿ ಅಮೆರಿಕಕ್ಕೆ ಬಂದ ಮೇಲೂ ಅವಿನಾಶ್ ತನ್ನ ಪ್ರೇಯಸಿಯೊಂದಿಗೆ ಸಂಪರ್ಕದಲ್ಲಿದ್ದ. ಕೊಲೆ ನಡೆದ ದಿನದಂದು ಪೊಲೀಸರಿಗೆ ಕರೆ ಮಾಡುವ ಮುನ್ನ ಅವಿನಾಶ್ ತನ್ನ ಪ್ರೇಯಸಿಗೆ ನಾಲ್ಕು ಬಾರಿ ಕರೆ ಮಾಡಿದ್ದ ಹಾಗೂ ಬಾತ್‌ರೂಮ್‌ನಲ್ಲಿ ಬಿದ್ದಿದ್ದ ಹೆಂಡತಿಯ ಹೆಣದ ಫೋಟೋವನ್ನು ಕಳುಹಿಸಿದ್ದ ಎಂದು ಡಿಜಿಟಲ್ ಸಾಕ್ಷ್ಯಗಳು ಹೇಳಿವೆ.

    ನೀನು ಕೊಟ್ಟ ಜ್ಯೂಸ್ ಕಹಿಯಾಗಿದೆ, ರಾಜಿತಾ ಕಳುಹಿಸಿದ್ದ ಕೊನೆ ಸಂದೇಶ

    ರಾಜಿತಾ ಅವರ ಮೊಬೈಲ್ ಫೋನ್ ಪರಿಶೀಲಿಸಿದಾಗ ಮತ್ತೊಂದು ಆಘಾತಕಾರಿ ಸಾಕ್ಷ್ಯ ಲಭ್ಯವಾಗಿದೆ. ಅವಿನಾಶ್ ತನಗೆ ಕೊಟ್ಟ ಜ್ಯೂಸ್ ತುಂಬಾ ಕಹಿಯಾಗಿರುತ್ತಿದ್ದವು ಎಂದು ರಾಜಿತಾ ಪತಿಗೆ ಮೆಸೇಜ್ ಮಾಡಿದ್ದರು.

    ತಾನು ಸಾವನ್ನಪ್ಪುವ ಕೆಲವೇ ಗಂಟೆಗಳ ಮುನ್ನವೂ ರಾಜಿತಾ ಪತಿಗೆ ವಾಟ್ಸಾಪ್ ಮಾಡಿ, ನೀನು ಮಾಡಿಕೊಟ್ಟ ಸ್ಮೂಥಿ ತೀರಾ ಕಹಿಯಾಗಿದ್ದು, ಕೆಮ್ಮಿನ ಸಿರಪ್​ನಂತಿತ್ತು ಎಂದು ಬರೆದಿದ್ದರು. ಇದರಿಂದಾಗಿ ಅವಿನಾಶ್ ಮೊದಲು ಆಕೆಗೆ ಪಾನೀಯದಲ್ಲಿ ವಿಷ ಅಥವಾ ಅಮಲು ಪದಾರ್ಥ ನೀಡಿ, ಆಕೆ ಪ್ರಜ್ಞೆ ತಪ್ಪಿದ ನಂತರ ಕತ್ತು ಹಿಸುಕಿ ಕೊಂದಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

    ಜೀವಾವಧಿ ಶಿಕ್ಷೆ

    ಅಮೆರಿಕದ ಕಿಂಗ್ ಕೌಂಟಿ ನ್ಯಾಯಾಲಯವು ಆರೋಪಿ ಅವಿನಾಶ್ ನಾರ್ನೆಗೆ ಸದ್ಯಕ್ಕೆ ಯಾವುದೇ ಕಾರಣಕ್ಕೂ ದೇಶ ಬಿಟ್ಟು ಓಡಿಹೋಗದಂತೆ ಬರೋಬ್ಬರಿ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂಪಾಯಿ) ಭಾರಿ ಮೊತ್ತದ ಜಾಮೀನು ರಹಿತ ಬಾಂಡ್ ವಿಧಿಸಿ ಜೈಲಿಗಟ್ಟಿದೆ.

    ಅಪರಾಧ ಸಾಬೀತಾದರೆ ಆರೋಪಿಗೆ ಯಾವುದೇ ಪೆರೋಲ್ ಇಲ್ಲದೆ ಕಡ್ಡಾಯ ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸುವ ಅವಕಾಶವಿದೆ. ಭಾರತದಲ್ಲಿರುವ ಆತನ ಪ್ರೇಯಸಿಯನ್ನೂ ಈ ಕೊಲೆಯ ಸಂಚಿನ ಭಾಗವಾಗಿ ಪರಿಗಣಿಸಿ ಅಮೆರಿಕ ತನಿಖಾ ಸಂಸ್ಥೆಗಳು ಆಕೆಯನ್ನು ಪ್ರಶ್ನಿಸಲು ಭಾರತೀಯ ರಾಯಭಾರ ಕಚೇರಿಯ ಸಹಾಯ ಕೋರುವ ಸಾಧ್ಯತೆಯಿದೆ.

     




    #crime International
    Previous Articleಚಲಿಸುವ ರೈಲಿನಲ್ಲಿ ಹೆರಿಗೆ: ಹಾಸನದ ಮೂವರು ಯುವ ವೈದ್ಯರಿಂದ ತಾಯಿ-ಮಗುವಿನ ಪ್ರಾಣ ರಕ್ಷಣೆ
    Next Article ಚಾರ್ಮಾಡಿ-ಉಜಿರೆ ಹೆದ್ದಾರಿಯಲ್ಲಿ ಎರಡು ಕಾರುಗಳ ಭೀಕರ ಡಿಕ್ಕಿ; 6 ಮಂದಿ ಗಾಯ

    Related Posts

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026

    KPSC ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್ ಶಿವಶಂಕರಪ್ಪಗೆ ಹೈಕೋರ್ಟ್‌ ಛೀಮಾರಿ

    September 3, 2026

    ಉಡುಪಿ: ಪಡಿತರ ಅಕ್ಕಿ ವಿಚಾರದಲ್ಲಿ ಅವಾಚ್ಯ ನಿಂದನೆ, ಕೊಲೆ ಬೆದರಿಕೆ; ಮೂವರು ಆರೋಪಿಗಳ ಬಂಧನ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಿಂಡಲಗಾ ಜೈಲಿನ ಕೈದಿಯೊಂದಿಗೆ ವಿಡಿಯೋ ಕಾಲ್; ವಿವಾದದ ಬೆನ್ನಲ್ಲೇ ಪಿಎಸ್ಐ ಜಯಶ್ರೀ ಸಸ್ಪೆಂಡ್

    September 3, 2026

    IPS ಅಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ಜನರಿಂದ ಹಣ ವಸೂಲಿ ಮಾಡುತ್ತಿದ್ದ 17ರ ಬಾಲಕನ ಬಂಧನ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.