Close Menu
    What's Hot

    ಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ

    October 22, 2026

    ಮಂಗಳೂರು: ಜನದಟ್ಟಣೆಯ ಲಾಭ ಪಡೆದು ಬಾಲಕಿಯ ಚಿನ್ನದ ಸರ ಎಗರಿಸಿದ ಮಹಿಳೆ ಅರೆಸ್ಟ್

    October 22, 2026

    ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ಪ್ರವೇಶ ನಿರಾಕರಣೆ : ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಎಂನಿಂದ ಕ್ರಮದ ಎಚ್ಚರಿಕೆ

    October 22, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ವಿದ್ಯಾರ್ಥಿಗಳ ಪರ ಕಾಂಗ್ರೆಸ್ ಧರಣಿ; ಉಡುಪಿಯಲ್ಲಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು
    ಕರಾವಳಿ ಸುದ್ದಿ

    ವಿದ್ಯಾರ್ಥಿಗಳ ಪರ ಕಾಂಗ್ರೆಸ್ ಧರಣಿ; ಉಡುಪಿಯಲ್ಲಿ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

    adminBy adminJuly 22, 2026Updated:July 22, 2026No Comments1 Min Read

    ಉಡುಪಿ: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಗೆ ಸಂಬಂಧಿಸಿದಂತೆ ಉಡುಪಿಯ ಬ್ರಹ್ಮಗಿರಿಯಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

    ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರದಲ್ಲಿ ಅಲ್ಪ ವ್ಯತ್ಯಯ ಉಂಟಾಯಿತು.

    ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕರೆದೊಯ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರನ್ನು ಬಂಧಿಸಿರುವುದು ಖಂಡನೀಯ. ದೇಶದಾದ್ಯಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸಿರುವುದು ಸರಿಯಲ್ಲ ಎಂದು ಟೀಕಿಸಿದರು.

    ಕೇಂದ್ರ ಸರ್ಕಾರವು ಪ್ರತಿಭಟನೆಗಳನ್ನು ಹತ್ತಿಕ್ಕಲು ಗೂಂಡಾಗಳನ್ನು ಬಳಸುತ್ತಿದೆ ಎಂಬ ಆರೋಪ ಮಾಡಿರುವ ಅವರು, ಈ ಬೆಳವಣಿಗೆಗಳ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು ಹಾಗೂ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

    ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಪ್ರಸಾದ್ ರಾಜ್ ಕಾಂಚನ್, ಎಂಎ ಗಫೂರ್ ಮತ್ತು ವೆರೋನಿಕಾ ಕಾರ್ನೆಲಿಯೊ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.




    #dakshinakannada
    Previous Articleಕಾಂಗ್ರೆಸ್ ಕಚೇರಿ ಮುಂದೆ ಉದ್ವಿಗ್ನತೆ; ಬಿಜೆಪಿ ಶಾಸಕನ ಮೇಲೆ ಮೊಟ್ಟೆ ಎಸೆತ
    Next Article ಅಸ್ಸಾಂನಲ್ಲಿ ಪ್ರವಾಹದ ರೌದ್ರನರ್ತನ; ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತ

    Related Posts

    ಮಂಗಳೂರು: ಜನದಟ್ಟಣೆಯ ಲಾಭ ಪಡೆದು ಬಾಲಕಿಯ ಚಿನ್ನದ ಸರ ಎಗರಿಸಿದ ಮಹಿಳೆ ಅರೆಸ್ಟ್

    October 22, 2026

    ಮೂಡುಬಿದಿರೆ: ಮಗನನ್ನು ಉಳಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ದುರಂತ ಅಂತ್ಯ

    October 22, 2026

    ಮಂಗಳೂರು–ಬೆಂಗಳೂರು ಹೆದ್ದಾರಿಯಲ್ಲಿ ದುರಂತ : ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸ್ಥಳದಲ್ಲೇ ಸಾವು

    October 22, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ

    October 22, 2026

    ಮಂಗಳೂರು: ಜನದಟ್ಟಣೆಯ ಲಾಭ ಪಡೆದು ಬಾಲಕಿಯ ಚಿನ್ನದ ಸರ ಎಗರಿಸಿದ ಮಹಿಳೆ ಅರೆಸ್ಟ್

    October 22, 2026

    ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ಪ್ರವೇಶ ನಿರಾಕರಣೆ : ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಎಂನಿಂದ ಕ್ರಮದ ಎಚ್ಚರಿಕೆ

    October 22, 2026

    ಮೂಡುಬಿದಿರೆ: ಮಗನನ್ನು ಉಳಿಸಲು ಧಾವಿಸಿದ ತಾಯಿಗೂ ವಿದ್ಯುತ್ ಪ್ರವಹಿಸಿ ದುರಂತ ಅಂತ್ಯ

    October 22, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಮೈಸೂರು: ಲಾಠಿಚಾರ್ಜ್‌ನಿಂದ 4 ವರ್ಷದ ಬಾಲಕನಿಗೆ ಗಾಯ; ಪೊಲೀಸರ ವಿರುದ್ಧ ಪೋಷಕರ ಆಕ್ರೋಶ

    October 22, 2026

    ನಂದಿಧ್ವಜ ಪೂಜೆ ವೇಳೆ ಸಚಿವರಿಗೆ ಪ್ರವೇಶ ನಿರಾಕರಣೆ : ಪೊಲೀಸ್ ಅಧಿಕಾರಿಗಳ ವಿರುದ್ಧ ಸಿಎಂನಿಂದ ಕ್ರಮದ ಎಚ್ಚರಿಕೆ

    October 22, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.