ಮಂಗಳೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಒಳಪಡುವ ಪಶ್ಚಿಮ ಘಟ್ಟದ ಸಿರಿಬಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿ ಹಾಗೂ ಹಳಿ ನಿರ್ವಹಣೆ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ ನವೆಂಬರ್ 4 ರವರೆಗೆ ಹಲವು ಪ್ರಮುಖ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.
ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ಸಂಖ್ಯೆ 16575) ರೈಲು ಅ.04, 06, 08, 11, 13, 15, 22, 25, 27, 29, ನ.01, ಮತ್ತು ನ. 03 ರಂದು ಸಂಚರಿಸುವುದಿಲ್ಲ. ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 16576 ) ರೈಲು ಅ.05, 07, 09, 12, 14, 16, 23, 26, 28, 30, ನ.02, ಮತ್ತು ನ.04 ರಂದು ಸಂಚರಿಸುವುದಿಲ್ಲ.
ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ – ಕಾರವಾರ ಎಕ್ಸ್‌ಪ್ರೆಸ್ ( ಸಂಖ್ಯೆ 16515) ರೈಲಿನ ಸಂಚಾರ ಅ.05, 07, 09, 12, 14, 21, 23, 26, 28, 30, ನ.02 ರಂದು ರದ್ದುಪಡಿಸಲಾಗಿದೆ. ಕಾರವಾರ – ಯಶವಂತಪುರ ಎಕ್ಸ್‌ಪ್ರೆಸ್ (ಸಂಖ್ಯೆ 16516) ರೈಲು ಅ. 06, 08, 10, 13, 15, 22, 24, 27, 29, 31 ಮತ್ತು ನ 03ರಂದು ಸಂಚರಿಸುವುದಿಲ್ಲ.
ಯಶವಂತಪುರ – ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಸಂಖ್ಯೆ 16539 ) ರೈಲು ಸಂಚಾರ ಅ.10, 24, ಮತ್ತು 31 ರಂದು ರದ್ದುಗೊಳ್ಳಲಿದೆ. ಮಂಗಳೂರು ಜಂಕ್ಷನ್ – ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ (ಸಂಖ್ಯೆ 16540 ) ರೈಲು ಸಂಚಾರ ಅ. 11, 25, ಮತ್ತು ನ 01ರಂದು ರದ್ದುಗೊಳ್ಳಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








