Close Menu
    What's Hot

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026

    ಉಡುಪಿಯಲ್ಲಿ ನಾಪತ್ತೆಯಾದ ಖಾಸಗಿ ಬಸ್ ಕೆಲವೇ ಗಂಟೆಗಳಲ್ಲಿ ಪತ್ತೆ; ಕಳ್ಳರಿಗಾಗಿ ಪೊಲೀಸರ ಶೋಧ

    September 30, 2026

    ಕರಂಗಲ್ಪಾಡಿ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಸಾವು

    September 30, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ರಾಷ್ಟ್ರೀಯ»ಮದುವೆ ವಿಚಾರಕ್ಕೆ ಕೋಪಗೊಂಡ ಮಾಜಿ ಪ್ರಿಯಕರ; ಮನೆಗೆ ಕರೆಸಿ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಲೆ
    ರಾಷ್ಟ್ರೀಯ

    ಮದುವೆ ವಿಚಾರಕ್ಕೆ ಕೋಪಗೊಂಡ ಮಾಜಿ ಪ್ರಿಯಕರ; ಮನೆಗೆ ಕರೆಸಿ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಕೊಲೆ

    adminBy adminAugust 14, 2026No Comments1 Min Read

    ಕೊಚ್ಚಿ: ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿ ಮದುವೆಯಾಗಲು ಒಪ್ಪಿಕೊಂಡಿದ್ದಕ್ಕೆ ಆಕ್ರೋಶಗೊಂಡ ಮಾಜಿ ಪ್ರಿಯಕರನೊಬ್ಬ, ಮಾತುಕತೆ ನೆಪದಲ್ಲಿ ಪ್ರೇಯಸಿಯನ್ನು ತನ್ನ ಮನೆಗೆ ಕರೆಸಿಕೊಂಡು ಅಡುಗೆಮನೆಯ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆಗೈದಿರುವ ದಾರುಣ ಘಟನೆ ಕೇರಳದ ಉತ್ತರ ಪರವೂರಿನಲ್ಲಿ ಗುರುವಾರ ನಡೆದಿದೆ. ಚೂಂಡಿ ಮೂಲದ ಸುರಮ್ಯಾ (24) ಹತ್ಯೆಗೊಳಗಾದ ಯುವತಿ. ಘಟನೆಗೆ ಸಂಬಂಧಿಸಿದಂತೆ ತುರುತಿಪ್ಪುರಂ ಮೂಲದ ಶಿಬಿನ್ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸುರಮ್ಯಾ ಹಾಗೂ ಶಿಬಿನ್ 2018ರಿಂದ ಅಂದರೆ ಕಾಲೇಜು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚಿನ ಭಿನ್ನಾಭಿಪ್ರಾಯಗಳಿಂದ ಕಳೆದ ನಾಲ್ಕು ತಿಂಗಳುಗಳಿಂದ ಕೇವಲ ಇನ್‌ಸ್ಟಾಗ್ರಾಮ್ ಮೂಲಕ ಮಾತ್ರ ಸಂಪರ್ಕದಲ್ಲಿದ್ದರು. ಈ ನಡುವೆ ಸುರಮ್ಯಾ ಬೇರೊಬ್ಬ ಯುವಕನಿಗೆ ಹತ್ತಿರವಾಗಿದ್ದು, ಆತನನ್ನೇ ಮದುವೆಯಾಗುವುದಾಗಿ ಹಾಗೂ ಶಿಬಿನ್ ಜೊತೆಗಿನ ಸಂಬಂಧ ಮುಂದುವರಿಸಲು ಆಸಕ್ತಿ ಇಲ್ಲವೆಂದು ಸ್ಪಷ್ಟಪಡಿಸಿದ್ದಳು. ಇದರಿಂದ ಶಿಬಿನ್ ತೀವ್ರ ಆಕ್ರೋಶಗೊಂಡಿದ್ದನು.

    ಗುರುವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಸುರಮ್ಯಾಳನ್ನು ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು ನಂಬಿಸಿದ ಶಿಬಿನ್, ಪರವೂರು ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ತನ್ನ ಬೈಕ್‌ನಲ್ಲಿ ವಡಕ್ಕೇಕರದ ಮುರವೆಂತುರುತ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದನು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಇಬ್ಬರೂ ಶಿಬಿನ್ ಮನೆಯ ಕೊಠಡಿಯಲ್ಲಿ ಮಾತುಕತೆ ನಡೆಸುತ್ತಿದ್ದಾಗ ಜಗಳ ತಾರಕಕ್ಕೇರಿದೆ. ಕೋಪಗೊಂಡ ಶಿಬಿನ್ ಅಡುಗೆಮನೆಯಿಂದ ಚಾಕು ತಂದು ಸುರಮ್ಯಾ ಮೇಲೆ ಭೀಕರವಾಗಿ ದಾಳಿ ನಡೆಸಿದ್ದಾನೆ. ಕೋಣೆಯಿಂದ ಕಿರುಚಾಟ ಕೇಳಿಬಂದಾಗ ಶಿಬಿನ್ ತಾಯಿ ಹಾಗೂ ತಂದೆ ಬಾಗಿಲು ತಟ್ಟಿದರೂ ತೆರೆಯದೆ, 10 ನಿಮಿಷಗಳ ನಂತರ ಬಾಗಿಲು ತೆರೆದಿದ್ದಾನೆ.

    ತೀವ್ರವಾಗಿ ಗಾಯಗೊಂಡಿದ್ದ ಸುರಮ್ಯಾಳನ್ನು ತಕ್ಷಣ ಪರವೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಶಿಬಿನ್ ವಡಕ್ಕೇಕರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.




    #nation #national
    Previous Articleಕಾಲೇಜು ವಿದ್ಯಾರ್ಥಿನಿಗೆ ಪ್ರೀತಿ ಹೆಸರಲ್ಲಿ ಕಿರುಕುಳ; ನಿರಂತರ ಹಿಂಬಾಲಿಸಿ ಕೊಲೆ ಬೆದರಿಕೆ ಆರೋಪ, ಯುವಕನ ವಿರುದ್ಧ ಪ್ರಕರಣ ದಾಖಲು
    Next Article ದೇವಸ್ಥಾನದಲ್ಲಿ VIP ಪ್ರವೇಶ ವಿಚಾರಕ್ಕೆ ಗಲಾಟೆ; ಮಹಿಳಾ PSIಗೆ ಕಪಾಳಮೋಕ್ಷ, ಶಾಸಕ ಪುತ್ರಿ ವಿರುದ್ಧ FIR

    Related Posts

    ‘ಏಕಪಕ್ಷೀಯ ನಿರ್ಧಾರ’ ಆರೋಪ; ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಸಮ್ಮತಿ

    September 29, 2026

    ಸಿನಿಮಾ ಯೋಜನೆಗಳ ಹೆಸರಿನಲ್ಲಿ ಹಣ ವರ್ಗಾವಣೆ ಆರೋಪ; ರಕುಲ್ ಪ್ರೀತ್ ಸಿಂಗ್‌ಗೆ ಸೇರಿದ ಸ್ಥಳಗಳಲ್ಲಿ ಐಟಿ ಪರಿಶೋಧನೆ

    September 29, 2026

    ಸ್ನೇಹಿತನ ಮಾತು ನಂಬಿ ಸೌದಿ ಅರೇಬಿಯಾದಲ್ಲಿ ‘ಡೆತ್ ಟ್ರ್ಯಾಪ್’ಗೆ ಸಿಲುಕಿದ ಕೇರಳ ಮೂಲದ ವ್ಯಕ್ತಿ

    September 29, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026

    ಉಡುಪಿಯಲ್ಲಿ ನಾಪತ್ತೆಯಾದ ಖಾಸಗಿ ಬಸ್ ಕೆಲವೇ ಗಂಟೆಗಳಲ್ಲಿ ಪತ್ತೆ; ಕಳ್ಳರಿಗಾಗಿ ಪೊಲೀಸರ ಶೋಧ

    September 30, 2026

    ಕರಂಗಲ್ಪಾಡಿ ಅಪಘಾತ ಪ್ರಕರಣ; ಗಂಭೀರ ಗಾಯಗೊಂಡಿದ್ದ ಗೂಡ್ಸ್ ಆಟೋ ಚಾಲಕ ಸಾವು

    September 30, 2026

    ಪ್ರತಿಭಟನಾ ಸಭೆಯಲ್ಲಿ ನ್ಯಾಯಾಲಯದ ಪ್ರಕ್ರಿಯೆ ಬಗ್ಗೆ ತಪ್ಪು ಮಾಹಿತಿ ಆರೋಪ; ವಕೀಲರ ವಿರುದ್ಧ ಪ್ರಕರಣ ದಾಖಲು

    September 30, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಕೊಲೆಯತ್ನ ಕೇಸ್‌ನಲ್ಲಿ A1, A2 ಆರೋಪಿಗಳಾಗಿದ್ದ ಪತಿ–ಮಹಿಳೆ ಇಬ್ಬರ ಮೃತದೇಹ ಸೌಪರ್ಣಿಕಾ ನದಿ ಬಳಿ ಪತ್ತೆ

    September 30, 2026

    ಕುಂದಾಪುರ: “ಸ್ವಲ್ಪ ನಿಧಾನವಾಗಿ ಮಾತನಾಡಿ” ಎಂದಿದ್ದಕ್ಕೆ ಸೋಡಾ ಬಾಟಲಿಯಿಂದ ಹಲ್ಲೆ; ನಾಲ್ವರ ವಿರುದ್ಧ ಕೇಸ್

    September 29, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.