Close Menu
    What's Hot

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026

    ಜಮೀನು ಅಭಿವೃದ್ಧಿ ಕಾಮಗಾರಿ ವೇಳೆ ಕಾರ್ಮಿಕರಿಗೆ ಗಂಗರ ಕಾಲದ ಚಿನ್ನದ ನಾಣ್ಯಗಳ ನಿಧಿ ಪತ್ತೆ

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಶಸ್ತ್ರಾಸ್ತ್ರ ಹುಡುಕಲು ಹೋದ ಪೊಲೀಸರಿಗೆ ಶಾಕ್; ಆಟೋ ಚಾಲಕನ ಮನೆಯಲ್ಲಿ ₹3 ಕೋಟಿ ನಗದು ಪತ್ತೆ
    ಅಪರಾಧ

    ಶಸ್ತ್ರಾಸ್ತ್ರ ಹುಡುಕಲು ಹೋದ ಪೊಲೀಸರಿಗೆ ಶಾಕ್; ಆಟೋ ಚಾಲಕನ ಮನೆಯಲ್ಲಿ ₹3 ಕೋಟಿ ನಗದು ಪತ್ತೆ

    adminBy adminAugust 17, 2026No Comments2 Mins Read

    ಭೋಪಾಲ್‌: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗೋಪಾಲಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಆಟೋ ಚಾಲಕನ ಮನೆಯಲ್ಲಿ ಶಸ್ತ್ರಾಸ್ತ್ರ ಹುಡುಕಲು ಹೋಗಿದ ಪೊಲೀಸರು ಭಾರೀ ಹಣ ಕಂಡು ಬೆಚ್ಚಿಬಿದ್ದಿದ್ದಾರೆ.

    ಆಟೋ ಚಾಲಕನ ಮನೆಯೊಂದರಲ್ಲಿ ಸುಮಾರು 3 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು (Cash Found), ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದೆ.ಮನೆಯೊಂದರಲ್ಲಿ ಶಸ್ತ್ರಾಸ್ತ್ರ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಆದರೆ ಶೋಧದ ವೇಳೆ ಯಾವುದೇ ಶಸ್ತ್ರಾಸ್ತ್ರ ಪತ್ತೆಯಾಗಿಲ್ಲ. ಬದಲಾಗಿ, ಮನೆಯಲ್ಲಿದ್ದ ಚೀಲಗಳಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ. ಹಣದ ಪ್ರಮಾಣ ಹೆಚ್ಚಿದ್ದರಿಂದ ಸ್ಥಳದಲ್ಲೇ ನೋಟು ಎಣಿಸುವ ಯಂತ್ರವನ್ನು ತರಿಸಿ ಎಣಿಕೆ ಮಾಡಬೇಕಾಯಿತು.

    ವರದಿಗಳ ಪ್ರಕಾರ, ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಬಂದೂಕು ಹಿಡಿದಿರುವ ಫೋಟೋವನ್ನ ಹಂಚಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಮಾಹಿತಿ ಆಧರಿಸಿ ಗೋಪಾಲಗಂಜ್ ಪೊಲೀಸರು ರಾಜೇಶ್ ಅಹಿರ್ವಾರ್ ಅವರ ಪುತ್ರ ಸೌರಭ್ ಅವರ ಮನೆಗೆ ತೆರಳಿ ಶೋಧ ನಡೆಸಿದರು. ಶೋಧದ ವೇಳೆ ಯಾವುದೇ ಬಂದೂಕು ಅಥವಾ ಇತರೆ ಶಸ್ತ್ರಾಸ್ತ್ರ ಸಿಗಲಿಲ್ಲ. ಆದರೆ ಮನೆಯಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಬಳಿಕ ಪ್ರಕರಣದ ತನಿಖೆಯ ದಿಕ್ಕೇ ಬದಲಾಗಿದೆ.

    5 ಗಂಟೆ ಎಣಿಸಿ ಸುಸ್ತಾದ ಅಧಿಕಾರಿಗಳು
    ಮನೆಯಲ್ಲಿ ಪತ್ತೆಯಾದ ನಗದು ಪ್ರಮಾಣ ಎಷ್ಟಿತ್ತೆಂದರೆ ಸುಮಾರು 5 ಗಂಟೆಗಳ ಕಾಲ ಅಧಿಕಾರಿಗಳು ಎಣಿಸಿ ಎಣಿಸಿಯೇ ಸುಸ್ತಾಗಿದ್ದರು. ಇದಕ್ಕಾಗಿ ನೋಟು ಎಣಿಸುವ ಯಂತ್ರವನ್ನೇ ಸ್ಥಳಕ್ಕೆ ತರಿಸಲಾಗಿತ್ತು. ಇದೇ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳನ್ನೂ ಸ್ಥಳಕ್ಕೆ ಕರೆಸಲಾಯಿತು. ಸದ್ಯ ಪೊಲೀಸರು ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅದರ ಮೂಲ ಮತ್ತು ಮಾಲೀಕತ್ವದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಸಂಬಂಧಿಕರೊಬ್ಬರಿಗೆ ಸೇರಿದ್ದು ಹಣ

    ಇನ್ನೂ ನಗದು ಪತ್ತೆಯಾದ ಬಳಿಕ ಮನೆಯಲ್ಲಿ ಇದ್ದ ಕುಟುಂಬ ಸದಸ್ಯರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಕುಟುಂಬಸ್ಥರು, ಪತ್ತೆಯಾದ ಹಣವು ಭೋಪಾಲ್‌ನಲ್ಲಿ ಸರ್ಕಾರಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಕರೊಬ್ಬರಿಗೆ ಸೇರಿದ್ದು ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಆದರೆ ಹಣದ ನಿಜವಾದ ಮಾಲೀಕತ್ವ ಅಥವಾ ಅದರ ಮೂಲವನ್ನು ಪೊಲೀಸರು ಇನ್ನೂ ದೃಢಪಡಿಸಿಲ್ಲ. ಇಷ್ಟು ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಏಕೆ ಇರಿಸಲಾಗಿತ್ತು? ಹಣಕ್ಕೆ ಸೂಕ್ತ ದಾಖಲೆಗಳಿವೆಯೇ? ಎಂಬುದರ ಕುರಿತು ತನಿಖೆ ಮುಂದುವರಿದಿದೆ.

    ಈ ಸಂಬಂಧ ಸೌರಭ್ ಅಹಿರ್ವಾರ್ ಮತ್ತು ಅಂಕಿತ್ ಅಹಿರ್ವಾರ್ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಅಕ್ರಮ ಹಣ ವರ್ಗಾವಣೆ ನಡೆದಿದೆಯೇ ಎನ್ನುವ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ.




    #crime #national
    Previous Articleನಾಯಿ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ; ಯುವಕನಿಗೆ ಚಾಕುವಿನಿಂದ ಇರಿತ
    Next Article ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್; ತಮಿಳುನಾಡಿಗೆ ನಿತ್ಯ ನೀರು ಹರಿಸಲು ಸುಪ್ರೀಂ ಸೂಚನೆ

    Related Posts

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026

    ಜಮೀನು ಅಭಿವೃದ್ಧಿ ಕಾಮಗಾರಿ ವೇಳೆ ಕಾರ್ಮಿಕರಿಗೆ ಗಂಗರ ಕಾಲದ ಚಿನ್ನದ ನಾಣ್ಯಗಳ ನಿಧಿ ಪತ್ತೆ

    September 5, 2026

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ನಗರಕ್ಕೆ ಗಡಿಪಾರು ಮಾಡಿದ್ದರೂ ವಾಪಸ್ ಎಂಟ್ರಿ: ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಗ್ಯಾಂಗ್ ನ ಬಂಧನ

    September 5, 2026

    ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ, ಮನೆಯಲ್ಲಿ ಅಕ್ರಮ ಕ್ಲಿನಿಕ್: ಸ್ಟಾಫ್ ನರ್ಸ್ ಅಮಾನತು

    September 5, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.