Close Menu
    What's Hot

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»‘ಜನನಾಂಗಕ್ಕೆ ₹1.20 ಕೋಟಿ’ ಎಂಬ ನಕಲಿ ರೀಲ್; ಬಾಲಕನ ಹತ್ಯೆ ಮಾಡಿ ಅಂಗಾಂಗ ತೆಗೆದ ಗ್ಯಾಂಗ್
    ಅಪರಾಧ

    ‘ಜನನಾಂಗಕ್ಕೆ ₹1.20 ಕೋಟಿ’ ಎಂಬ ನಕಲಿ ರೀಲ್; ಬಾಲಕನ ಹತ್ಯೆ ಮಾಡಿ ಅಂಗಾಂಗ ತೆಗೆದ ಗ್ಯಾಂಗ್

    adminBy adminAugust 18, 2026No Comments1 Min Read

    ಭೋಪಾಲ್: ಮಾನವ ಜನನಾಂಗಕ್ಕೆ ವಿದೇಶಗಳಲ್ಲಿ ₹1.20 ಕೋಟಿ ಬೆಲೆಯಿದೆ ಎಂಬ ಸಾಮಾಜಿಕ ಮಾಧ್ಯಮದ ನಕಲಿ ರೀಲ್ ನಂಬಿದ ಐವರ ಗ್ಯಾಂಗ್, 17 ವರ್ಷದ ಬಾಲಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿ ಆತನ ಜನನಾಂಗಗಳನ್ನು ತೆಗೆದು ಎಸೆದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಸೂತ್ರಧಾರಿ, ಬಿಬಿಎ ದ್ವಿತೀಯ ವರ್ಷದ ವಿದ್ಯಾರ್ಥಿ ಸೋಹಾಬ್ ಖಾನ್ (20), ಆಮಿರ್ ಖುರೇಷಿ (18) ಹಾಗೂ ಮೂವರು ಅಪ್ರಾಪ್ತ ವಯಸ್ಕರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬೀದಿಗಳಲ್ಲಿ ಪೆನ್ನು ಹಾಗೂ ಕೀಚೈನ್‌ಗಳನ್ನು ಮಾರಾಟ ಮಾಡುತ್ತಿದ್ದ 17 ವರ್ಷದ ಯುವಕ ಕೊಲೆಯಾದ ದುರ್ದೈವಿ.

    ಆರೋಪಿ ಸೋಹಾಬ್ ಖಾನ್ ತಾನು ನಕಲಿ ವೈದ್ಯನಂತೆ ನಟಿಸಿ ಈ ಕೊಲೆಗೆ ಸಂಚು ರೂಪಿಸಿದ್ದ. 15 ವರ್ಷ ಮೇಲ್ಪಟ್ಟ ಬಾಲಕನನ್ನು ಆಯ್ಕೆ ಮಾಡುವಂತೆ ತನ್ನ ಸಹಚರರಿಗೆ ಸೂಚಿಸಿದ್ದ. ಆಗಸ್ಟ್ 6 ರಂದು ಬಾಲಕನಿಗೆ ₹100 ನೀಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಸೋಹಾಬ್ ವೀಡಿಯೊ ಕಾಲ್‌ನಲ್ಲಿ ನೀಡುತಿದ್ದ ಸೂಚನೆಯಂತೆ ಬ್ಲೇಡ್‌ನಿಂದ ಬಾಲಕನ ವೃಷಣಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಕವರ್‌ನಲ್ಲಿ ಒಯ್ದಿದ್ದರು.

    ಆಗಸ್ಟ್ 10 ರಂದು ಛೋಟಾ ತಲಾಬ್‌ನ ಧೋಬಿ ಘಾಟ್‌ನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಗುರುತು ಸಿಗದ ಕಾರಣ ಪೊಲೀಸರು ದಹನ ಮಾಡಿದ್ದರು. ಆದರೆ ಆಗಸ್ಟ್ 15 ರಂದು ಬಾಲಕನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ಕೈ ಮೇಲಿದ್ದ ಹಚ್ಚೆ (Tattoo) ಸಹಾಯದಿಂದ ಮೃತನ ಗುರುತು ಪತ್ತೆಯಾಗಿ ತನಿಖೆ ತೀವ್ರಗೊಂಡಿತ್ತು.

    ಸಂಗ್ರಹಿಸಿದ ಜನನಾಂಗಗಳನ್ನು ಯಾರೂ ಖರೀದಿಸುವುದಿಲ್ಲ ಎಂದು ತಿಳಿದ ಬಳಿಕ ಆರೋಪಿಗಳು ಮೂರು ದಿನಗಳ ನಂತರ ಅದನ್ನು ಸರೋವರಕ್ಕೆ ಎಸೆದಿದ್ದರು. “ಇದರ ಹಿಂದೆ ಯಾವುದೇ ಅಂಗಾಂಗ ಕಳ್ಳಸಾಗಣೆ ಜಾಲವಿಲ್ಲ, ಕೇವಲ ಇನ್‌ಸ್ಟಾಗ್ರಾಮ್ ರೀಲ್ ನಂಬಿ ಈ ಅಪರಾಧ ಎಸಗಿದ್ದಾರೆ. ಆ ಹುಚ್ಚು ವೀಡಿಯೊದ ಮೂಲವನ್ನು ಸೈಬರ್ ಸೆಲ್ ತನಿಖೆ ಮಾಡುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.




    #crime #nation #national
    Previous Articleಗುರುಪುರ-ಕೈಕಂಬ ಬಳಿ ಗಾಂಜಾ ಮಾರಾಟಕ್ಕೆ ಯತ್ನ: ಇಬ್ಬರು ಅರೆಸ್ಟ್
    Next Article ಸೂರಜ್ ರೇವಣ್ಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: A2 ಶಿವಕುಮಾರ್ ‘ಮಾಫಿ ಸಾಕ್ಷಿ’ ಅರ್ಜಿ ತಿರಸ್ಕಾರ

    Related Posts

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026

    ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    September 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.