Close Menu
    What's Hot

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026

    ಮೂವರು ಮಕ್ಕಳೊಂದಿಗೆ 100 ಅಡಿ ಕಂದಕಕ್ಕೆ ಜಿಗಿದ ಮಹಿಳಾ ಕುಸ್ತಿಪಟು: ತಾಯಿ ಸೇರಿ ಇಬ್ಬರು ಮಕ್ಕಳ ಸಾವು

    September 5, 2026

    ರಸ್ತೆ ಕಾಮಗಾರಿ ನಡುವೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು

    September 5, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬೆಂಗಳೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಿಯಕರನ ವಿರುದ್ಧ ‘ಮಾಫಿ ಸಾಕ್ಷಿ’ಯಾಗಲು ಶ್ವೇತಾ ಅರ್ಜಿ
    ಅಪರಾಧ

    ಬೆಂಗಳೂರು ತ್ರಿವಳಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರಿಯಕರನ ವಿರುದ್ಧ ‘ಮಾಫಿ ಸಾಕ್ಷಿ’ಯಾಗಲು ಶ್ವೇತಾ ಅರ್ಜಿ

    adminBy adminAugust 20, 2026No Comments2 Mins Read

    ಬೆಂಗಳೂರು: ಕೆ.ಆರ್. ಪುರ ಠಾಣಾ ವ್ಯಾಪ್ತಿಯ ಸೀಗೇಹಳ್ಳಿಯ ಡಾಮಿನಿಕ್ ಲೇಔಟ್‌ನ ಸಾಯಿಗ್ರೀನ್ ಹೋಮ್ಸ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಜೂನ್‌ 22ರಂದು ನಡೆದಿದ್ದ ತ್ರಿವಳಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಶ್ವೇತಾ, ತನ್ನ ಪ್ರಿಯಕರ ಕೆನತ್‌ ವಿರುದ್ಧ ‘ಮಾಫಿ ಸಾಕ್ಷಿ’ ಹೇಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.‌

    29ನೇ ಎಸಿಜೆಎಂ ನ್ಯಾಯಾಲಯಕ್ಕೆ ಶ್ವೇತಾ ಅರ್ಜಿ ಸಲ್ಲಿಸಿ, ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಶ್ವೇತಾ ಹಾಗೂ ಕೆನತ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

    ತಮಿಳುನಾಡಿನ ಸೋಮಸುಂದರ್‌ (52), ಅವರ ಪತ್ನಿ ಮುತ್ತುಲಕ್ಷ್ಮಿ(48) ಹಾಗೂ ಕಿರಿಯ ಮಗಳು ಸುಪ್ರಿಯಾ(19) ಅವರ ಕೊಲೆ ನಡೆದಿತ್ತು. ಸೋಮಸುಂದರ್‌- ಮುತ್ತುಲಕ್ಷ್ಮಿ ಅವರ ಹಿರಿಯ ಪುತ್ರಿ ಶ್ವೇತಾ ಹಾಗೂ ಅವರ ಪ್ರಿಯಕರ ಕೆನೆತ್ ಸೇರಿಕೊಂಡು ಮೂವರನ್ನೂ ಜೂನ್‌ 22ರ ರಾತ್ರಿ ಕೊಲೆ ಮಾಡಿ, ಪುದುಚೆರಿಗೆ ತೆರಳಿ ತಲೆಮರೆಸಿಕೊಂಡಿದ್ದರು. ಪುದುಚೆರಿಯಲ್ಲಿ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

    ‘ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದೆ. ಆದರೆ, ಕೊಲೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದು, ನೇರವಾಗಿ ಕೊಲೆ ಮಾಡಿದ್ದು ಕೆನತ್‌. ಚಾಕುವಿನಿಂದ ಯಾರಿಗೂ ನಾನು ಚುಚ್ಚಿಲ್ಲ. ಕೊಲೆ ಮಾಡುವುದು ಕೆನತ್‌ನ ತೀರ್ಮಾನವಾಗಿತ್ತು. ಹೀಗಾಗಿ, ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಕೆನತ್‌ ವಿರುದ್ಧ ಸಾಕ್ಷಿ ಹೇಳಲು ಸಿದ್ಧ ಇದ್ದೇನೆ’ ಎಂದು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಶ್ವೇತಾ ಉಲ್ಲೇಖಿಸಿದ್ದಾರೆ ಎಂಬುದು ಗೊತ್ತಾಗಿದೆ.

    ತನಿಖಾಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ಮೇಲೆ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯವು ಆರೋಪಿಗೆ ಸೂಚಿಸಿದೆ.‌

    ವರದಿ ನಿರೀಕ್ಷೆಯಲ್ಲಿ ಪೊಲೀಸರು:

    ‘ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ತನಿಖೆ ವೇಳೆ ಜಪ್ತಿ ಮಾಡಿಕೊಂಡ ಮೊಬೈಲ್‌ ಸೇರಿದಂತೆ ಇತರೆ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ರವಾನಿಸಲಾಗಿತ್ತು. ಅದರ ವರದಿ ಇನ್ನೂ ಕೈಸೇರಿಲ್ಲ. ವರದಿ ಬಂದ ಬಳಿಕವಷ್ಟೇ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಪೊಲೀಸರು ಹೇಳಿದರು.

    ಕೆನತ್‌-ಶ್ವೇತಾ ಸಹಜೀವನ ನಡೆಸುತ್ತಿದ್ದರು. ಒಂದೇ ಫ್ಲ್ಯಾಟ್‌ನಲ್ಲಿ ನೆಲಸಿದ್ದರು. ಕೆನತ್‌ ಜೊತೆಗೆ ವಾಸ ಮಾಡುತ್ತಿರುವುದು ಶ್ವೇತಾ ಪೋಷಕರಿಗೆ ಇಷ್ಟ ಇರಲಿಲ್ಲ. ಪ್ರಶ್ನಿಸಲು ಫ್ಲ್ಯಾಟ್‌ಗೆ ತೆರಳಿದ್ದರು. ಆಗ ಕೊಲೆ ನಡೆದಿತ್ತು.




    #crime #karnataka
    Previous Articleಮುಲ್ಕಿ ದೇವಸ್ಥಾನ ಕಳ್ಳತನ; CCTV ತಿರುಗಿಸಿದ ಖದೀಮ ಅಲರ್ಟ್ ಮೆಸೇಜ್‌ನಿಂದ ಅರೆಸ್ಟ್
    Next Article ಹಾವೇರಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಮೂವರ ದಾರುಣ ಸಾವು

    Related Posts

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026

    ಸುಮಂತ್ ನಿಗೂಢ ಸಾವು ಪ್ರಕರಣ: ಸಹೋದರ, ಇಬ್ಬರು ಚಿಕ್ಕಪ್ಪನ ಬ್ರೈನ್ ಮ್ಯಾಪಿಂಗ್

    September 4, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ: ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026

    ಮೂವರು ಮಕ್ಕಳೊಂದಿಗೆ 100 ಅಡಿ ಕಂದಕಕ್ಕೆ ಜಿಗಿದ ಮಹಿಳಾ ಕುಸ್ತಿಪಟು: ತಾಯಿ ಸೇರಿ ಇಬ್ಬರು ಮಕ್ಕಳ ಸಾವು

    September 5, 2026

    ರಸ್ತೆ ಕಾಮಗಾರಿ ನಡುವೆ ನಿಂತಿದ್ದ ಲಾರಿಗೆ ಕಾರು ಡಿಕ್ಕಿ: 8 ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತ್ಯು

    September 5, 2026

    ಪುತ್ತೂರು: ದೇವಸ್ಥಾನದ ಕಾಣಿಕೆ ಡಬ್ಬಿ ಕಳವು; ಕೇರಳದ ಆರೋಪಿಯ ಬಂಧನ

    September 4, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಾಸನ ಜೈಲಲ್ಲಿ ವಿಚಾರಣಾಧೀನ ಕೈದಿಗಳ ಭೀಕರ ಮಾರಾಮಾರಿ: ಜಗಳ ಬಿಡಿಸಲು ಹೋದ ಸಿಬ್ಬಂದಿಗೂ ಹಲ್ಲೆ

    September 4, 2026

    ಬಡ್ಡಿ ಹಣ ಕೊಡದ ಮಹಿಳೆಯ ಕಿಡ್ನಾಪ್: ನಗ್ನಗೊಳಿಸಿ ಹಲ್ಲೆ, ವಿಡಿಯೋ ವೈರಲ್ ಮಾಡುವ ಬೆದರಿಕೆ-ಆರೋಪಿಗಳ ಬಂಧನ

    September 4, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.