Close Menu
    What's Hot

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಬೆಂಗಳೂರು ಉದ್ಯಮಿ ರವಿಪ್ರಕಾಶ್ ವಶಕ್ಕೆ ಪಡೆದ ಪ್ರಕರಣಕ್ಕೆ ಟ್ವಿಸ್ಟ್; ಶಾಸಕ ಸೇರಿ ಮೂವರ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲು
    ಅಪರಾಧ

    ಬೆಂಗಳೂರು ಉದ್ಯಮಿ ರವಿಪ್ರಕಾಶ್ ವಶಕ್ಕೆ ಪಡೆದ ಪ್ರಕರಣಕ್ಕೆ ಟ್ವಿಸ್ಟ್; ಶಾಸಕ ಸೇರಿ ಮೂವರ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲು

    adminBy adminAugust 31, 2026Updated:August 31, 2026No Comments1 Min Read

    ಬೆಂಗಳೂರು: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕೂರು ಠಾಣೆ ಪೊಲೀಸರು ಬೆಂಗಳೂರಿನ ರಾಜರಾಜೇಶ್ವರಿನಗರದಲ್ಲಿರುವ (ಆರ್.ಆರ್.ನಗರ) ಉದ್ಯಮಿ ಹಾಗೂ ಪ್ರಭಾವಿ ಬಿಜೆಪಿ ಮುಖಂಡ ರವಿಪ್ರಕಾಶ್ ಅವರನ್ನು ನಿನ್ನೆ (ಆ.30) ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎನ್ನಲಾಗಿದೆ.  ಆದರೆ ಬಂಧಿಸಲೆಂದು ಬಂದವರು ಪೊಲೀಸರೇ ಅಲ್ಲ, ಮೈದುಕೂರು ಶಾಸಕನ ಕಡೆಯವರೆಂದು ಉದ್ಯಮಿಯ ಕುಟುಂಬ ಆರೋಪಿಸಿದೆ. ಈ ಹಿನ್ನೆಲೆ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕರು ಸೇರಿಂದಂತೆ ಮೂವರ ವಿರುದ್ಧ ದೂರು ದಾಖಲಾಗಿದೆ.

    ಬಂಧನವಲ್ಲ, ಕಿಡ್ನ್ಯಾಪ್!

    ರವಿಪ್ರಕಾಶ್ 300ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಖ್ಯಾತ ಉದ್ಯಮಿಯಾಗಿದ್ದಾರೆ. ಮೈದುಕೂರು ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದು, ಅದರನ್ವಯ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆನ್ನಲಾಗಿದೆ.  ಈ ವೇಳೆ  ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ಉದ್ಯಮಿಯನ್ನು ಕರೆದೊಯ್ಯಲಾಗಿದ್ದು, ಇದರ ಹಿಂದೆ ಆಂಧ್ರಪ್ರದೇಶದ ಮೈದುಕೂರು ಶಾಸಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಪುಟ್ಟ ಸುಧಾಕರ್ ಅವರ ರಾಜಕೀಯ ಪ್ರಭಾವವಿದೆ ಎಂದು ರವಿಪ್ರಕಾಶ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಕಿಡ್ನ್ಯಾಪ್ ಪ್ರಕರಣ ದಾಖಲು

    ಆರ್.ಆರ್.ನಗರದಲ್ಲಿ ರವಿಪ್ರಕಾಶ್ ಅವರಿಗೆ ಸೇರಿದ 14 ಎಕರೆ ಬೆಲೆಬಾಳುವ ಜಮೀನಿದ್ದು, ಈ ಜಮೀನಿನ ವಿಚಾರವಾಗಿ ರವಿಪ್ರಕಾಶ್ ಮತ್ತು ಶಾಸಕ ಪುಟ್ಟ ಸುಧಾಕರ್ ನಡುವೆ ಕೋರ್ಟ್‌ನಲ್ಲಿ ದೀರ್ಘಕಾಲದ ವ್ಯಾಜ್ಯ ನಡೆಯುತ್ತಿದೆ. ಕಳೆದ ತಿಂಗಳು ಸುಧಾಕರ್ ಅವರು ಜಮೀನಿನ ಬಳಿ ಬಂದು ಬಲವಂತವಾಗಿ ಒಳನುಗ್ಗಲು ಯತ್ನಿಸಿ ಗಲಾಟೆ ಮಾಡಿದ್ದರೆಂದು ರವಿಪ್ರಕಾಶ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ದ್ವೇಷದಿಂದ ಈ ರೀತಿ ಹೆದರಿಸುವ ತಂತ್ರ ಹೆಣೆಯಲಾಗಿದೆ ಎಂದು ರವಿ ಪ್ರಕಾಶ್ ಪುತ್ರಿ ದೂರಿದ್ದಾರೆ. ವಾಹನದಲ್ಲಿ ಉದ್ಯಮಿಯನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.

    ಅಷ್ಟೇ ಅಲ್ಲದೆ  ಕುಟುಂಬಸ್ಥರ ದೂರಿನನ್ವಯ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ಪುಟ್ಟ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ.




    #crime #karnataka
    Previous Article14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ; ಬೆಳ್ತಂಗಡಿ ಪೊಲೀಸರ ಕಾರ್ಯಾಚರಣೆ
    Next Article ಮಂಗಳೂರು : ಕುಡಿದ ಮತ್ತಿನಲ್ಲಿ ಅಣ್ಣ-ತಮ್ಮನ ನಡುವೆ ಜಗಳ; ಚಾಕುವಿನಿಂದ ಇರಿದು ಅಣ್ಣನ ಕೊಲೆ

    Related Posts

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026

    ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    September 2, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದಿಶಾ ಸಾಲಿಯಾನ್‌ ಸಾವು ಪ್ರಕರಣಕ್ಕೆ ಟ್ವಿಸ್ಟ್: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

    September 2, 2026

    ಕರಂಬಾರು ಬಳಿ ಸೇತುವೆ ಕುಸಿತ: ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ

    September 2, 2026

    ರಾಮಮಂದಿರ ಟ್ರಸ್ಟ್‌ನ ಸಿಇಒ ಆಗಿ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ನೇಮಕ

    September 2, 2026

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಸಾಲ ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ

    September 2, 2026

    ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

    September 2, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.