ಮಂಗಳೂರು:ಕರಂಬಾರು ಪೆಟ್ರೋಲ್ ಪಂಪ್ ಹತ್ತಿರ ಸೇತುವೆ ಕುಸಿದ ಹಿನ್ನಲೆ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಬಳಸುವಂತೆ ಬಜಪೆ ಪೊಲೀಸ್ ರಾಣೆಯಿಂದ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಮಂಗಳೂರು, ವಿಮಾನ ನಿಲ್ದಾಣ ಕಡೆಗೆ ಸಂಚರಿಸುವರು ಕಟೀಲು,ಬಜಪೆ, ಕೈಕಂಬ ಕಡೆಗೆ ಸಂಚರಿಸುವರು ಜರಿನಗರ ಅಥವಾ ಪೊರ್ಕೋಡಿ ರಸ್ತೆಯಾಗಿ ಸಂಚರಿಸುವುದು ಸೂಕ್ತ ಎಂದು ಮನವಿ ಮಾಡಲಾಗಿದೆ.
ಪ್ರಯಾಣಿಕರು ಎಚ್ಚರಿಕೆಯಿಂದಿರಬೇಕು ಮತ್ತು ಅದಕ್ಕೆ ಅನುಗುಣವಾಗಿ ತಮ್ಮ ಮಾರ್ಗಗಳನ್ನು ಬಳಸಬೇಕು ಎಂದು ಕೋರಲಾಗಿದೆ.








