Close Menu
    What's Hot

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರ್ನಾಟಕ»ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ
    ಕರ್ನಾಟಕ

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    adminBy adminSeptember 3, 2026No Comments1 Min Read

    ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿದೆ. ಎಂಟು ತಿಂಗಳ ಹಿಂದೆ ಅಂತ್ಯಕ್ರಿಯೆ ನೆರವೇರಿಸಿ ಸಮಾಧಿ ಮಾಡಿದ್ದ ಸ್ವಾಮೀಜಿಯವರ ದೇಹ ಕೊಳೆಯದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಭಕ್ತರು ಹೇಳಿಕೊಂಡಿದ್ದಾರೆ. ಈ ಘಟನೆ ಇದೀಗ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

    ಮನಗೂಳಿ ಪಟ್ಟಣದ ಚೌಕಿಮಠದ ಬಳಿ ಈ ಘಟನೆ ನಡೆದಿದೆ. ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪೂಜಾರಿಯಾಗಿದ್ದ ಮಲ್ಲಯ್ಯ ಸರೂರ ಸ್ವಾಮೀಜಿ ಅವರು 2025ರ ಡಿಸೆಂಬರ್ 31ರಂದು ನಿಧನರಾಗಿದ್ದರು. ಬಳಿಕ 2026ರ ಜನವರಿ 1ರಂದು ಚೌಕಿಮಠದ ಬಳಿ ಅವರ ಅಂತ್ಯಕ್ರಿಯೆ ನೆರವೇರಿಸಿ, ದೇಹವನ್ನು ಸಮಾಧಿ ಮಾಡಲಾಗಿತ್ತು.

    ಕನಸಲ್ಲಿ ಬಂದು ಮರು ಅಂತ್ಯಕ್ರಿಯೆಗೆ ಸೂಚಿಸಿದ್ದ ಸ್ವಾಮೀಜಿ!

    ಮಲ್ಲಯ್ಯ ಸರೂರ ಸ್ವಾಮೀಜಿ ಹಲವು ವರ್ಷಗಳಿಂದ ಶ್ರೀ ರೇವಣಸಿದ್ದೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸುತ್ತಿದ್ದರು. ಸ್ವಾಮೀಜಿ ತಮ್ಮ ಭಕ್ತರ ಕನಸಿನಲ್ಲಿ ಬಂದು, ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಬಳಿ ಅಂತ್ಯಕ್ರಿಯೆ ನೆರವೇರಿಸುವಂತೆ ಸೂಚನೆ ನೀಡಿದ್ದರು ಎಂದು ಭಕ್ತರು ಹೇಳಿಕೊಂಡಿದ್ದಾರೆ.

    8 ತಿಂಗಳ ನಂತರ ಮೃತದೇಹ ಹೊರತೆಗೆ ಭಕ್ತರಿಗೆ ಅಚ್ಚರಿ

    ಈ ಹಿನ್ನೆಲೆಯಲ್ಲಿ ಸುಮಾರು ಎಂಟು ತಿಂಗಳ ಬಳಿಕ ಭಕ್ತರು ಸಮಾಧಿಯನ್ನು ತೆರೆದು ಸ್ವಾಮೀಜಿಯವರ ದೇಹವನ್ನು ಹೊರತೆಗೆದಿದ್ದಾರೆ. ಈ ವೇಳೆ ದೇಹ ಕೊಳೆಯದ ಸ್ಥಿತಿಯಲ್ಲಿ ಕಂಡುಬಂದಿದ್ದು, ಯಾವುದೇ ಕೊಳೆತ ವಾಸನೆ ಇರಲಿಲ್ಲ ಎಂದು ಭಕ್ತರು ತಿಳಿಸಿದ್ದಾರೆ. ಬಳಿಕ ಬಾಜಾ-ಭಜಂತ್ರಿಯೊಂದಿಗೆ ಸ್ವಾಮೀಜಿಯವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಗಿದೆ. ಶ್ರೀ ರೇವಣಸಿದ್ದೇಶ್ವರ ಗದ್ದುಗೆ ಪಕ್ಕದಲ್ಲೇ ಸ್ವಾಮೀಜಿಯವರ ಮರು ಅಂತ್ಯಕ್ರಿಯೆ ನೆರವೇರಿಸಲಾಗಿದೆ.

    ಸ್ವಾಮೀಜಿಯವರ ಆಸೆಯಂತೆ ಗದ್ದುಗೆ ಬಳಿ ಅಂತ್ಯಕ್ರಿಯೆ ನೆರವೇರಿಸಿದ್ದೇವೆ ಎಂದು ಭಕ್ತರು ಹೇಳಿದ್ದಾರೆ. ಎಂಟು ತಿಂಗಳ ಬಳಿಕ ಸಮಾಧಿ ತೆರೆದಾಗ ದೇಹ ಕೊಳೆಯದಿರುವುದು ಕಂಡುಬಂದಿರುವ ಘಟನೆ ಮನಗೂಳಿ ಪಟ್ಟಣದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

    ದೇಹದ ಸ್ಥಿತಿಗೆ ಸಂಬಂಧಿಸಿದಂತೆ ಯಾವುದೇ ವೈಜ್ಞಾನಿಕ ಅಥವಾ ವೈದ್ಯಕೀಯ ಕಾರಣವನ್ನು ಈ ಹಂತದಲ್ಲಿ ದೃಢಪಡಿಸಲಾಗಿಲ್ಲ. ಭಕ್ತರು ಮಾತ್ರ ಇದನ್ನು ವಿಸ್ಮಯಕಾರಿ ಘಟನೆ ಎಂದು ಹೇಳುತ್ತಿದ್ದಾರೆ.




    #karnataka
    Previous Articleಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಡಿಲೀಟ್; ‘ರಾಜಕೀಯ ಸೇಡು’ ಆರೋಪ
    Next Article ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    Related Posts

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ‌ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆ; ಪೋಷಕರಿಂದ ಕೊಲೆ ಆರೋಪ

    September 3, 2026

    ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಯಲ್ಲಿ ಅಡಗಿ ಕುಳಿತಿದ್ದ ರೌಡಿಶೀಟರ್‌: ನೀರಿಗೆ ಧುಮುಕಿ ಬಂಧಿಸಿದ ಪೊಲೀಸರು

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.