Close Menu
    What's Hot

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ
    ಕರಾವಳಿ ಸುದ್ದಿ

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    adminBy adminSeptember 3, 2026No Comments1 Min Read

    ಹಳೆಯಂಗಡಿ : ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಬಸ್‌ ನಿಲ್ದಾಣದ ಬಳಿ ಎಕ್ಸ್‌ಪ್ರೆಸ್‌ ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಅಪಾಯಕಾರಿ ರೀತಿಯಲ್ಲಿ ಬಸ್‌ಗಳನ್ನು ಚಲಾಯಿಸಿದ ಘಟನೆ ಮಂಗಳವಾರ ಸಂಭವಿಸಿದೆ.

    ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಎರಡು ಖಾಸಗಿ ತಡೆರಹಿತ ಬಸ್‌ಗಳ ಸಿಬ್ಬಂದಿ ನಡುವೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಹೆದ್ದಾರಿಯಲ್ಲೇ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಎರಡೂ ಬಸ್‌ಗಳನ್ನು ಚಾಲಕರು ಅತ್ಯಂತ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

    ಹಳೆಯಂಗಡಿ ಬಸ್‌ ನಿಲ್ದಾಣದ ಬಳಿ ತಡೆರಹಿತ ಬಸ್‌ಗಳ ಚಾಲಕ ಹಾಗೂ ನಿರ್ವಾಹಕರ ನಡುವೆ ‘ಟೈಮಿಂಗ್ಸ್‌’ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿರುತ್ತವೆ. ಇಂತಹ ಪೈಪೋಟಿಯಿಂದಾಗಿ ಈ ಹಿಂದೆ ಸಣ್ಣಪುಟ್ಟ ಹಲ್ಲೆ ಪ್ರಕರಣಗಳೂ ವರದಿಯಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಪ್ರಯಾಣಿಕರ ಸುರಕ್ಷತೆಯನ್ನು ಗಾಳಿಗೆ ತೂರಿ ಹೆದ್ದಾರಿಯಲ್ಲೇ ಬಸ್‌ಗಳ ನಡುವೆ ಈ ರೀತಿ ಜೀವಮಾನದ ಪೈಪೋಟಿ ನಡೆಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನವೇ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು. ನಿಯಮ ಮೀರಿ ಅಪಾಯಕಾರಿಯಾಗಿ ಚಾಲನೆ ಮಾಡುವ ಬಸ್‌ ಚಾಲಕರು ಹಾಗೂ ನಿರ್ವಾಹಕರಿಗೆ ಸಂಚಾರ ನಿಯಮ ಮತ್ತು ಪ್ರಯಾಣಿಕರ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಸ್ಥಳೀಯರು ತೀವ್ರವಾಗಿ ಆಗ್ರಹಿಸಿದ್ದಾರೆ.




    #dakshinakannada
    Previous Articleನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ
    Next Article ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    Related Posts

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಉಪ್ಪಿನಂಗಡಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆ; ಸಾವಿನ ಕಾರಣ ನಿಗೂಢ

    September 3, 2026

    ಮಂಗಳೂರಿನಲ್ಲಿ ಅನಧಿಕೃತ ಬೀದಿಬದಿ ವ್ಯಾಪಾರಕ್ಕೆ ಬ್ರೇಕ್: ತೆರವುಗೊಳಿಸಲು ಮನಪಾ ಆಯುಕ್ತರ ಸೂಚನೆ

    September 3, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಹಳೆಯಂಗಡಿ: ಪ್ರಯಾಣಿಕರಿಗಾಗಿ ಬಸ್‌ಗಳ ನಡುವೆ ತೀವ್ರ ಪೈಪೋಟಿ; ಅನಾಹುತದ ಆತಂಕ

    September 3, 2026

    ನಾಲ್ಕು ದಶಕಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಆರೋಪಿ; ಕಾರ್ಕಳ ಪೊಲೀಸರ ಯಶಸ್ವಿ ಕಾರ್ಯಾಚರಣೆ

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ದುನಿಯಾ ವಿಜಯ್–ನಾಗರತ್ನ ಪ್ರಕರಣಕ್ಕೆ ಅಂತ್ಯ; ಹೈಕೋರ್ಟ್‌ನಿಂದ ಮಹತ್ವದ ತೀರ್ಪು

    September 3, 2026

    ಕನಸಿನಲ್ಲಿ ಬಂದ ಸ್ವಾಮೀಜಿ, ಮರು ಅಂತ್ಯಕ್ರಿಯೆಗೆ ಸೂಚನೆ; 8 ತಿಂಗಳ ಬಳಿಕ ದೇಹ ನೋಡಿ ಭಕ್ತರಿಗೆ ಅಚ್ಚರಿ

    September 3, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.