Close Menu
    What's Hot

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು
    ಅಪರಾಧ

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    adminBy adminSeptember 7, 2026No Comments2 Mins Read

    ಬೆಂಗಳೂರು/ಬೆಳ್ತಂಗಡಿ : ವಕೀಲರಾಗಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬರು ಮದುವೆಯಾಗುವ ಭರವಸೆ ನೀಡಿ ಬಳಿಕ ದೈಹಿಕವಾಗಿ ಕಿರುಕುಳ ನೀಡಿದ್ದು, ಕೊನೆಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ 36 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೆಳ್ತಂಗಡಿ ಮೂಲದ ಯುವ ವಕೀಲ ಜಿತಿನ್ ಜಿಜೊ (26) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲೊಡ್ಡಿ ನಿವಾಸಿ ಜಿಜೊ ಪೌಲ್ ಅವರ ಪುತ್ರನಾದ ಜಿತಿನ್, ಬೆಳ್ತಂಗಡಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

    ಕಾನೂನು ಪ್ರಕರಣದ ಮೂಲಕ ಆರಂಭವಾದ ಪರಿಚಯ

    2021ರಲ್ಲಿ ವಿವಾಹವಾಗಿದ್ದ ಬೆಂಗಳೂರಿನ ಮಹಿಳೆ, ಪತಿಯೊಂದಿಗಿನ ವೈವಾಹಿಕ ಕಲಹದ ಹಿನ್ನೆಲೆಯಲ್ಲಿ ಗೃಹಹಿಂಸೆ ಪ್ರಕರಣ ದಾಖಲಿಸಿದ್ದರು. ಇದೇ ಪ್ರಕರಣದ ವಿಚಾರವಾಗಿ 2025ರ ಫೆಬ್ರವರಿಯಲ್ಲಿ ಯಲಹಂಕೆಯಲ್ಲಿ ವಾಸಿಸುತ್ತಿದ್ದ ಜಿತಿನ್ ಅವರ ಪರಿಚಯವಾಗಿತ್ತು. ಬಳಿಕ ಮಹಿಳೆ ತಮ್ಮ ಪ್ರಕರಣವನ್ನು ಅವರ ಮೂಲಕವೇ ನಡೆಸಲು ಮುಂದಾಗಿದ್ದರು.

    ಪರಿಚಯ ಮುಂದುವರಿದಂತೆ ಜಿತಿನ್ ಪ್ರೀತಿಯ ವಿಚಾರ ತಿಳಿಸಿ, ಪತಿಯಿಂದ ವಿಚ್ಛೇದನ ದೊರಕಿದ ಬಳಿಕ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಮಹಿಳೆ ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಲ್ಲಿ ಆರೋಪಿ ಬಾಡಿಗೆ ಮನೆ ಮಾಡಿಕೊಂಡಿದ್ದ ಎನ್ನಲಾಗಿದೆ.

    ತನ್ನ ಇಚ್ಛೆಗೆ ವಿರುದ್ಧವಾಗಿಯೂ ಆರೋಪಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ವಿಚ್ಛೇದನದ ನಂತರ ಸಂಬಂಧದಲ್ಲಿ ಬಿರುಕು

    2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ದೊರೆತ ಬಳಿಕ ಜಿತಿನ್ ಅವರ ವರ್ತನೆಯಲ್ಲಿ ಬದಲಾವಣೆಯಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿಂದಿಸುತ್ತಿದ್ದನೆಂದು ಆರೋಪಿಸಲಾಗಿದೆ.

    ಸೆಪ್ಟೆಂಬರ್ 2ರಂದು ಮತ್ತೆ ಮಹಿಳೆಯ ಮನೆಗೆ ತೆರಳಿದ್ದ ಜಿತಿನ್,ಸೆಪ್ಟೆಂಬರ್ 2 ರಂದು ಮಹಿಳೆಯ ಮನೆಗೆ ಬಂದ ಆರೋಪಿ ಆಕೆಯ ಮೊಬೈಲ್ ಪರಿಶೀಲಿಸಿ Signal Appನಲ್ಲಿದ್ದ ಸಂಭಾಷಣೆಗಳನ್ನು ಅಳಿಸಿದ್ದಾನೆ ಎನ್ನಲಾಗಿದೆ. ಮದುವೆಯಾಗುವುದಾಗಿ ನೀಡಿದ್ದ ಭರವಸೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನೂ ನಾಶಪಡಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    ಪ್ರಶ್ನಿಸಿದ್ದಕ್ಕೆ ಹಲ್ಲೆ

    ಮೊಬೈಲ್‌ನಲ್ಲಿನ ಸಂಭಾಷಣೆಗಳನ್ನು ಏಕೆ ಅಳಿಸಲಾಗಿದೆ ಎಂದು ಮಹಿಳೆ ಪ್ರಶ್ನಿಸಿದಾಗ ಜಿತಿನ್ ಕೋಪಗೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆಗೆ ಬೆದರಿಕೆ ಹಾಕಿ, ಬಟ್ಟೆ ಹರಿದು ಮುಖ, ಎದೆ ಮತ್ತು ಬೆನ್ನಿಗೆ ಪದೇಪದೇ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

    ಅಷ್ಟೇ ಅಲ್ಲದೆ ದೇಹಕ್ಕೆ ಕಚ್ಚಿ ಹಲ್ಲೆ ನಡೆಸಿದ್ದು, ಕೋಣೆಯಲ್ಲಿದ್ದ ಸ್ಟ್ಯಾಂಡ್ ಫ್ಯಾನ್‌ನಿಂದಲೂ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ನಂತರ ವೇಲ್ ಬಳಸಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸುವ ಮೂಲಕ ಕೊಲೆ ಮಾಡಲು ಪ್ರಯತ್ನಿಸಿದ್ದಾನೆ ಎಂಬ ಗಂಭೀರ ಆರೋಪವೂ ಮಾಡಲಾಗಿದೆ.

    ತಪ್ಪಿಸಿಕೊಂಡು ಆಸ್ಪತ್ರೆಗೆ ತೆರಳಿದ ಮಹಿಳೆ

    ಆರೋಪಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಮಹಿಳೆ ಮನೆಯಿಂದ ಹೊರಬಂದು ಸಮೀಪದಲ್ಲಿರುವ ಎನ್.ಆರ್.ಆರ್. ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಹಲ್ಲೆಯಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಘಟನೆ ಕುರಿತು ಸೆಪ್ಟೆಂಬರ್ 3ರಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಬಾಗಲಗುಂಟೆ ಠಾಣೆಯಲ್ಲಿ BNS-2023ರ ಸೆಕ್ಷನ್ 69, 126(2), 115(2), 118(1), 74, 351(2), 352 ಮತ್ತು 238 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಜಿತಿನ್ ಜಿಜೊ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರ ಪತ್ತೆಗಾಗಿ ಬಾಗಲಗುಂಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.




    #crime #dakshinakannada
    Previous Article‘ಬೈ ಬೈ ಪಪ್ಪಾ’ ಎಂದು ತಂದೆಗೆ ಹೇಳಿ ಚೆನಾಬ್ ನದಿಗೆ ಜಿಗಿದ ಯುವತಿ; ಶವಕ್ಕಾಗಿ ಶೋಧ
    Next Article ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    Related Posts

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ‘ಬೈ ಬೈ ಪಪ್ಪಾ’ ಎಂದು ತಂದೆಗೆ ಹೇಳಿ ಚೆನಾಬ್ ನದಿಗೆ ಜಿಗಿದ ಯುವತಿ; ಶವಕ್ಕಾಗಿ ಶೋಧ

    September 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಪುತ್ತೂರು:ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ವಿರುದ್ಧ ಗಂಭೀರ ಆರೋಪ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯ

    September 7, 2026

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026

    ‘ಬೈ ಬೈ ಪಪ್ಪಾ’ ಎಂದು ತಂದೆಗೆ ಹೇಳಿ ಚೆನಾಬ್ ನದಿಗೆ ಜಿಗಿದ ಯುವತಿ; ಶವಕ್ಕಾಗಿ ಶೋಧ

    September 7, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ತಿರುಪತಿ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಕಾರು ಡಿವೈಡರ್‌ಗೆ ಡಿಕ್ಕಿ, ಕುಟುಂಬದ ನಾಲ್ವರು ಸಾವು

    September 7, 2026

    ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

    September 7, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.