Close Menu
    What's Hot

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ
    ಅಪರಾಧ

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    adminBy adminSeptember 7, 2026No Comments1 Min Read

    ದಾವಣಗೆರೆ: ನಗರದಲ್ಲಿ  ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಯುವಕರು ತಲ್ವಾರ್‌ ಝಳಪಿಸಿದ್ದಾರೆ.

    ಹಳೇ ವೈಷಮ್ಯದಿಂದ ನಡುರಸ್ತೆಯಲ್ಲೇ ತಲ್ವಾರ್ ಹಾಗೂ ದೊಣ್ಣೆಗಳಿಂದ ಯುವಕರು ಪರಸ್ಪರ ಅಟ್ಟಾಡಿಸಿ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಐವರಿಗೆ ಗಂಭೀರವಾಗಿ ಗಾಯಗಳಾಗಿವೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಗರದ ಬಿ.ಡಿ. ಲೇಔಟ್ ನಿವಾಸಿಗಳಾದ ಮೈನು, ಜುನೇದ್ ಹಾಗೂ ಇರ್ಫಾನ್ ಸೇರಿದಂತೆ ನಾಲ್ಕು ಜನ ಯುವಕರು ರಸ್ತೆಯಲ್ಲಿ ನಿಂತಿದ್ದಾಗ ಮಹಮ್ಮದ್ ಸೇರಿದಂತೆ 20 ಕ್ಕೂ ಹೆಚ್ಚು ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಮೈನು, ಜುನೇದ್ ಮತ್ತು ಇರ್ಫಾನ್ ಸೇರಿದಂತೆ ಹಲವರು ರಕ್ತದ ಮಡುವಿನಲ್ಲಿ ರಸ್ತೆಯಲ್ಲೇ ಬಿದ್ದಿದ್ದಾರೆ. ತಲೆ ಹಾಗೂ ದೇಹದ ಪ್ರಮುಖ ಭಾಗಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಯಿಂದ ಸಾರ್ವಜನಿಕರು ಗಾಬರಿಗೊಂಡಿದ್ದಾರೆ.‌ಈ ಸಂಬಂಧ ಅಜಾದ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದಾರೆ

    #crime #karnataka
    Previous Articleಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    Related Posts

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026

    ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ: ಬೀಗ ಒಡೆದು ನೋಡಿದ ಪೊಲೀಸರಿಗೆ ಛಿದ್ರಗೊಂಡ ಮಹಿಳೆಯ ಶವ, ಫ್ರಿಜ್‌ನಲ್ಲಿ ತಲೆ ಪತ್ತೆ

    September 7, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026

    ಸಹೋದರನ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಅತ್ತಿಗೆ ಕೊಲೆ: ಶವವನ್ನು ನೀರಿನ ಟ್ಯಾಂಕ್‌ಗೆ ಎಸೆದ ನಾದಿನಿ

    September 7, 2026

    ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ: ಬೀಗ ಒಡೆದು ನೋಡಿದ ಪೊಲೀಸರಿಗೆ ಛಿದ್ರಗೊಂಡ ಮಹಿಳೆಯ ಶವ, ಫ್ರಿಜ್‌ನಲ್ಲಿ ತಲೆ ಪತ್ತೆ

    September 7, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೇ ವೈಷಮ್ಯಕ್ಕೆ ನಡುರಸ್ತೆಯಲ್ಲೇ ತಲ್ವಾರ್ ಝಳಪಿಸಿದ ಯುವಕರು: ನಾಲ್ವರು ಗಂಭೀರ ಗಾಯ

    September 7, 2026

    ಅತ್ಯಾಚಾರಕ್ಕೆ ಯತ್ನಿಸಿ ಮಹಿಳೆ ಮೇಲೆ ಮಚ್ಚಿನಿಂದ ಹಲ್ಲೆ ಆರೋಪ: ಚಿಕಿತ್ಸೆ ಫಲಿಸದೆ ಸಾವು, ಐವರ ವಿರುದ್ಧ ಕೇಸ್

    September 7, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.