Close Menu
    What's Hot

    ಹಳೆ ದ್ವೇಷಕ್ಕೆ ರೌಡಿಶೀಟರ್ ಕೊಲೆ: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ

    September 8, 2026

    ಮೋದಿ ಕಾರ್ಯಕ್ರಮದ ಸ್ಥಳದ ಭದ್ರತಾ ಲೋಪದ ಆತಂಕ: ಬಂದೂಕು, ನಕಲಿ ಐಡಿ ಹೊಂದಿದ್ದ ಇಬ್ಬರು ವಶಕ್ಕೆ

    September 8, 2026

    ದರ್ಶನ್ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಅಭಿಮಾನಿ ವಿರುದ್ಧ ಎಫ್‌ಐಆರ್

    September 8, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪಗೆ ಮತ್ತೊಂದು ಸಂಕಷ್ಟ: ಕುಟುಂಬದಿಂದ ವಂಚನೆ ಆರೋಪ
    ಅಪರಾಧ

    KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪಗೆ ಮತ್ತೊಂದು ಸಂಕಷ್ಟ: ಕುಟುಂಬದಿಂದ ವಂಚನೆ ಆರೋಪ

    adminBy adminSeptember 8, 2026Updated:September 8, 2026No Comments1 Min Read

    ಕಲಬುರಗಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ನಡೆಸಿರುವ ಒಂದೊಂದೇ ಅಕ್ರಮಗಳು ಬಯಲಾಗುತ್ತಿದ್ದು, ಅಳಿಯನ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ಕಂಡವರ ಜಮೀನಿಗೆ ಕನ್ನ ಹಾಕಿದ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ಅಳಿಯ ಶಂಕರಗೌಡ ಮೂಲಕ ಸರ್ವೆ ನಂಬರ್ 242, 245ರಲ್ಲಿರುವ 27 ಎಕರೆ ಭೂಕಬಳಿಕೆ ಬಗ್ಗೆ ದೂರಲಾಗಿದೆ. ಭೂಮಾಲಕಿ ಬಸಮ್ಮ ಪುತ್ರ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ನಡೆಸಲಾಗಿದೆ. ಮೊದಲಿಗೆ ಅಳಿಯನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿ ನಂತರ ತನ್ನ ಹೆಸರಿಗೆ ಶಿವಶಂಕರಪ್ಪ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಭೂಮಾಲಕಿ ಬಸಮ್ಮ ಕುಟುಂಬ ಶಹಾಪುರ ಠಾಣೆಗೆ ದೂರು ನೀಡಿದೆ. ಭೂಮಿ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಟಿವಿ9 ಶಿವಶಂಕರಪ್ಪ ಅವರನ್ನು ಸಂಪರ್ಕಿಸಲು ಯತ್ನಿಸಿತ್ತಾದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅವರಿಂದ ಪ್ರಕರಣದ ಬಗ್ಗೆ ಈ ವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.

    ಮತ್ತೊಂದೆಡೆ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​ಗೆ ಬಂಧನದ ಭೀತಿ ಎದುರಾಗಿದೆ. ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ಸಿಐಡಿ ಮೂರನೇ ನೋಟಿಸ್​​ ಸಂಬಂಧ ಶಿವಶಂಕರಪ್ಪ ವಿಚಾರಣೆಗೆ ಗೈರಾಗಿದ್ದು, ನಿನ್ನೆ ಹೈಕೋರ್ಟ್​​ ಶಿವಶಂಕರಪ್ಪಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಸಾಹುಕಾರ್ ಮನೆ ಮೇಲೆ ದಾಳಿ ಮಾಡಿದ್ದರು. ಆದರೆ ಸಿಐಡಿ ವಿಚಾರಣೆಗೆ ಹಾಜರಾಗದ ಶಿವಶಂಕರಪ್ಪ ಮನೆಯಲ್ಲೂ ಇಲ್ಲದಿರೋದು ಆ ವೇಳೆ ಗೊತ್ತಾಗಿತ್ತು

    ನೀಟ್ ಪರೀಕ್ಷೆ ಅಕ್ರಮದಿಂದ ಕೆಲ ವಿದ್ಯಾರ್ಥಿಗಳೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆದಿದೆ. ಹೀಗಾದರೆ ರಾತ್ರಿ ಹಗಲು ಓದಿದವರ ಕಥೆ ಏನಾಗಬೇಕು? ಕೆಪಿಎಸ್‌ಸಿ ಮೇಲಿನ ಜನರ ವಿಶ್ವಾಸವೇ ನಾಶವಾಗಿದೆ. ನಿಮ್ಮ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ವ್ಯವಸ್ಥಿತ ಫ್ರಾಡ್ ಎಂದು ಶಿವಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು, ಜಾಮೀನು ಅರ್ಜಿಯನ್ನು ವಜಾ ಮಾಡಿದ್ದರು.




    #crime #karnataka
    Previous Articleಮಂಗಳೂರಿನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಬೆಂಗಳೂರಿನಲ್ಲಿ ಪತ್ತೆ
    Next Article ಮಲ್ಪೆ: ರಸ್ತೆ ಬದಿ ಓಣಿಯಲ್ಲಿ ಪತ್ತೆಯಾದ ನವಜಾತ ಗಂಡು ಶಿಶು ಸಾವು

    Related Posts

    ಹಳೆ ದ್ವೇಷಕ್ಕೆ ರೌಡಿಶೀಟರ್ ಕೊಲೆ: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ

    September 8, 2026

    ಮೋದಿ ಕಾರ್ಯಕ್ರಮದ ಸ್ಥಳದ ಭದ್ರತಾ ಲೋಪದ ಆತಂಕ: ಬಂದೂಕು, ನಕಲಿ ಐಡಿ ಹೊಂದಿದ್ದ ಇಬ್ಬರು ವಶಕ್ಕೆ

    September 8, 2026

    ದರ್ಶನ್ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಅಭಿಮಾನಿ ವಿರುದ್ಧ ಎಫ್‌ಐಆರ್

    September 8, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಹಳೆ ದ್ವೇಷಕ್ಕೆ ರೌಡಿಶೀಟರ್ ಕೊಲೆ: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ

    September 8, 2026

    ಮೋದಿ ಕಾರ್ಯಕ್ರಮದ ಸ್ಥಳದ ಭದ್ರತಾ ಲೋಪದ ಆತಂಕ: ಬಂದೂಕು, ನಕಲಿ ಐಡಿ ಹೊಂದಿದ್ದ ಇಬ್ಬರು ವಶಕ್ಕೆ

    September 8, 2026

    ದರ್ಶನ್ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಅಭಿಮಾನಿ ವಿರುದ್ಧ ಎಫ್‌ಐಆರ್

    September 8, 2026

    ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು: ಪ್ರಿಯಕರನ ಮೇಲೆ ಕೊಲೆಯ ಶಂಕೆ

    September 8, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಹಳೆ ದ್ವೇಷಕ್ಕೆ ರೌಡಿಶೀಟರ್ ಕೊಲೆ: ಹಾಡಹಗಲೇ ದುಷ್ಕರ್ಮಿಗಳ ಅಟ್ಟಹಾಸ

    September 8, 2026

    ದರ್ಶನ್ ಬಗ್ಗೆ ಸುಳ್ಳು ಸುದ್ದಿ ಹರಡಿದ ಆರೋಪ: ಅಭಿಮಾನಿ ವಿರುದ್ಧ ಎಫ್‌ಐಆರ್

    September 8, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.