Close Menu
    What's Hot

    ಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ

    September 13, 2026

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಂತರಾಷ್ಟ್ರೀಯ»ಕೆಲಸಕ್ಕಾಗಿ ಸೌದಿಗೆ ತೆರಳಿದ್ದ ಕುತ್ತಾರು ಮೂಲದ ಯುವಕ ಹೃದಯಾಘಾತದಿಂದ ಸಾವು
    ಅಂತರಾಷ್ಟ್ರೀಯ

    ಕೆಲಸಕ್ಕಾಗಿ ಸೌದಿಗೆ ತೆರಳಿದ್ದ ಕುತ್ತಾರು ಮೂಲದ ಯುವಕ ಹೃದಯಾಘಾತದಿಂದ ಸಾವು

    adminBy adminSeptember 9, 2026No Comments1 Min Read

    ಮಂಗಳೂರು: ಕೆಲಸಕ್ಕಾಗಿ ಐದು ತಿಂಗಳ ಹಿಂದಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಮೂಲದ ಯುವಕನೋರ್ವ ತಾನು ವಾಸವಿದ್ದ ಕೊಠಡಿಯಲ್ಲೇ ದಿಢೀರ್ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.

    ಕುತ್ತಾರಿನ ಕೊರಗಜ್ಜನ ಆದಿ ಕ್ಷೇತ್ರದ ಸಮೀಪದ ನಿವಾಸಿ ಶರತ್ ಕುಮಾರ್ (35) ಮೃತಪಟ್ಟ ಯುವಕ. ಅವಿವಾಹಿತರಾಗಿದ್ದ ಶರತ್ ಅವರು ಐದು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಖಾಸಗಿ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

    ಶರತ್ ಅವರು ತಮಿಳುನಾಡು ಮೂಲದ ಸಹೋದ್ಯೋಗಿಯೊಂದಿಗೆ ಕಂಪನಿಯ ವಸತಿ ಕೊಠಡಿಯಲ್ಲಿ ವಾಸವಾಗಿದ್ದರು. ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆ ಸಹೋದ್ಯೋಗಿ ಕೊಠಡಿಗೆ ಬಂದಾಗ ಶರತ್ ಮಲಗಿದ್ದರು ಎಂದು ತಿಳಿದುಬಂದಿದೆ.

    ಮಂಗಳವಾರ ಬೆಳಿಗ್ಗೆ ಕೆಲಸಕ್ಕೆ ತೆರಳಲು ಅಲಾರಂ ಇಟ್ಟಿದ್ದರೂ, ಅಲಾರಂ ಸದ್ದು ಕೇಳಿ ಎದ್ದೇಳದ ಹಿನ್ನೆಲೆಯಲ್ಲಿ ಸಹೋದ್ಯೋಗಿ ಪರಿಶೀಲಿಸಿದಾಗ ಶರತ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಹೃದಯಾಘಾತದಿಂದ ಮೃತಪಟ್ಟಿರುವ ಸಾಧ್ಯತೆ ವ್ಯಕ್ತವಾಗಿದೆ

    ಶರತ್ ಅವರು ಸೋಮವಾರ ರಾತ್ರಿ ತಡವರೆಗೂ ತಮ್ಮ ಅಣ್ಣನೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು ಎನ್ನಲಾಗಿದೆ. ಅವರ ಅಕಾಲಿಕ ಸಾವಿನ ಸುದ್ದಿ ತಿಳಿದು ಕುಟುಂಬಸ್ಥರು, ಬಂಧುಗಳು ಹಾಗೂ ಸ್ನೇಹಿತರು ತೀವ್ರ ಶೋಕದಲ್ಲಿ ಮುಳುಗಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶರತ್ ಅವರು ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ.




    #dakshinakannada International
    Previous Articleಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಆರೋಪ: ರಿಫಾತ್ ಗ್ಯಾಂಗ್ ಸದಸ್ಯರು ಸೇರಿ 9 ಆರೋಪಿಗಳ ಬಳಿ ಫೋನ್ ಪತ್ತೆ
    Next Article 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರಂಟ್‌ ಆರೋಪಿ ಅರೆಸ್ಟ್

    Related Posts

    ಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ

    September 13, 2026

    ಕೊಕ್ಕಡ ಬಳಿ ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ

    September 12, 2026

    ಭಾರತೀಯ ಮೂಲದ ಮಹಿಳೆಗೆ ನಿರಂತರ ಕಿರುಕುಳ: ಕೆಲಸದ ಸ್ಥಳದ ಹೊರಗೆ ಬೆನ್ನಟ್ಟಿ ಗುಂಡಿಕ್ಕಿ ಕೊಲೆ, ಆರೋಪಿ ಆತ್ಮಹತ್ಯೆ

    September 12, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ

    September 13, 2026

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಹೋಟೆಲ್ ಕೊಠಡಿಯಲ್ಲಿ ಬ್ಯೂಟಿಷಿಯನ್ ಶವ ಪತ್ತೆ: ಜೊತೆಗಿದ್ದ ಉದ್ಯಮಿ ನಾಪತ್ತೆ, ಸಾವಿನ ಸುತ್ತ ಅನುಮಾನ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಖಾಸಗಿ ಶಾಲಾ ಶಿಕ್ಷಕರಿಗೂ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ: ಸರ್ಕಾರದ ಮಟ್ಟದಲ್ಲಿ ಚಿಂತನೆ

    September 12, 2026

    ಶಾಲೆಗೆ ಹೋಗಬೇಕಿದ್ದ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ಆರೋಪ: 71 ಬಾಲಕಾರ್ಮಿಕರ ರಕ್ಷಣೆ, 5 ಪ್ರಕರಣ ದಾಖಲು

    September 12, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.