Close Menu
    What's Hot

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ


    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಕಾರ್ಕಳ: ಶಾಸಕ ಸುನಿಲ್ ಕುಮಾರ್ ವಿರುದ್ಧ ಪ್ರಚೋದನಕಾರಿ ವಿಡಿಯೋ; ಆರೋಪಿ ಪ್ರಸಾದ್ ಶೆಟ್ಟಿ ಅರೆಸ್ಟ್
    ಅಪರಾಧ

    ಕಾರ್ಕಳ: ಶಾಸಕ ಸುನಿಲ್ ಕುಮಾರ್ ವಿರುದ್ಧ ಪ್ರಚೋದನಕಾರಿ ವಿಡಿಯೋ; ಆರೋಪಿ ಪ್ರಸಾದ್ ಶೆಟ್ಟಿ ಅರೆಸ್ಟ್

    adminBy adminSeptember 14, 2026No Comments1 Min Read

    ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಅವರ ತಲೆಯನ್ನು ಕತ್ತರಿಸಿದ ರೀತಿಯಲ್ಲಿ ಚಿತ್ರವನ್ನು ಎಡಿಟ್ ಮಾಡಿ, ಪ್ರಚೋದನಕಾರಿ ಹಿನ್ನೆಲೆ ಧ್ವನಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದಡಿ ಪ್ರಸಾದ್ ಶೆಟ್ಟಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಕಾರ್ಕಳ ಮೂಲದ ವಿಘೇಶ್ ಪ್ರಸಾದ್ ರಾವ್ ಎಂಬುವರು ಸೆಪ್ಟೆಂಬರ್ 12ರಂದು ರಾತ್ರಿ ಫೇಸ್‌ಬುಕ್ ಬಳಸುತ್ತಿದ್ದಾಗ ‘Prasad Shetty’ ಎಂಬ ಖಾತೆಯಲ್ಲಿ ಶಾಸಕರ ಚಿತ್ರವನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಿರುವುದು ಗಮನಕ್ಕೆ ಬಂದಿದೆ. ಸದರಿ ವಿಡಿಯೋದಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವುದಲ್ಲದೆ, ಜನಪ್ರತಿನಿಧಿಯೊಬ್ಬರನ್ನು ಕೊಲೆ ಮಾಡಬೇಕು ಹಾಗೂ ಹಲ್ಲೆ ನಡೆಸಬೇಕು ಎಂಬ ರೀತಿಯಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವಂತಹ ಆಡಿಯೋ ತುಣುಕನ್ನು ಎಡಿಟ್ ಮಾಡಿ ಪ್ರಕಟಿಸಲಾಗಿತ್ತು.

    ಜನರಿಂದ ಆಯ್ಕೆಯಾದ ಶಾಸಕರ ವಿರುದ್ಧ ಇಂತಹ ದ್ವೇಷಪೂರಿತ ವಿಡಿಯೋ ಹರಿಬಿಡುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆಯಿದೆ ಎಂದು ವಿಘೇಶ್ ಪ್ರಸಾದ್ ರಾವ್ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು, ಆರೋಪಿ ಪ್ರಸಾದ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮುಂದಿನ ಕಾನೂನು ನಡಾವಳಿಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.




    #crime #dakshinakannada
    Previous Articleಮಂಗಳೂರಿನಲ್ಲಿ ರೌಡಿಗಳಿಂದ ಗ್ಯಾಂಗ್‌ವಾರ್‌ಗೆ ಯತ್ನ: ತಲವಾರು ಹಿಡಿದು ಸಾರ್ವಜನಿಕರ ಮುಂದೆ ಕಿತ್ತಾಟ, ಆರೋಪಿಗಳ ಬಂಧನಕ್ಕೆ ಬಲೆ
    Next Article ಮಂಗಳೂರಿಗೆ ಉಚಿತ ಆಸ್ಪತ್ರೆ, ಮಡಿಯಾಲಕ್ಕೆ AI ಶಿಕ್ಷಣ ಕೇಂದ್ರ: ಸದ್ಗುರು ಮಧುಸೂದನ ಸಾಯಿ ಮಹತ್ವದ ಘೋಷಣೆ

    Related Posts

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಬಂಟ್ವಾಳದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದು ಚಿನ್ನಾಭರಣ ಕಳವು ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಶರಣು

    November 13, 2026

    ಉದ್ಘಾಟನೆಯ ಸಂಭ್ರಮದ ಬೆನ್ನಲ್ಲೇ ತನಿಷ್ಕ್ ಮಳಿಗೆಯಲ್ಲಿ ಕಳ್ಳತನ; ಟ್ರಾಲಿ ಬ್ಯಾಗ್‌ನಲ್ಲಿ ಆಭರಣ ಸಾಗಿಸಿದ ಕಳ್ಳ

    November 13, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026

    ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಹತ್ಯೆ ಪ್ರಕರಣ; 6 ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026

    ಬಂಟ್ವಾಳದಲ್ಲಿ ಮನೆಯ ಹಿಂಬದಿ ಬಾಗಿಲು ಮುರಿದು ಚಿನ್ನಾಭರಣ ಕಳವು ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಶರಣು

    November 13, 2026
    Advertisement






    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಬೆಂಗಳೂರು–ಮಂಗಳೂರು–ಗೋವಾ ವಂದೇ ಭಾರತ್‌ಗೆ ಪ್ರಧಾನಿ ಮೋದಿ ಚಾಲನೆ; ಪ್ರಯಾಣದ ಅವಧಿ 7 ಗಂಟೆಗೆ ಇಳಿಕೆ

    November 13, 2026

    ಪ್ರಶಾಂತಿ ಕುಟೀರದ ವೇದಿಕೆಯಲ್ಲಿ ವರನಟನ ಸ್ಮರಣೆ; ಡಾ. ರಾಜ್‌ಕುಮಾರ್ ಯೋಗಾಭ್ಯಾಸವನ್ನು ಶ್ಲಾಘಿಸಿದ ಮೋದಿ

    November 13, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.