Close Menu
    What's Hot

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಕರಾವಳಿ ಸುದ್ದಿ»ಕುಂದಾಪುರದಲ್ಲಿ ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ; ಮನೆಯಲ್ಲಿ ಡೆತ್‌ನೋಟ್ ಪತ್ತೆ
    ಕರಾವಳಿ ಸುದ್ದಿ

    ಕುಂದಾಪುರದಲ್ಲಿ ಸಹಕಾರಿ ಸಂಘದ ಸಿಇಒ ಆತ್ಮಹತ್ಯೆ; ಮನೆಯಲ್ಲಿ ಡೆತ್‌ನೋಟ್ ಪತ್ತೆ

    adminBy adminSeptember 25, 2026No Comments1 Min Read

    ಕುಂದಾಪುರ : ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ (CEO) ಕರ್ತವ್ಯ ನಿರ್ವಹಿಸುತ್ತಿದ್ದ ಕಟ್‌ಬೆಲ್ತೂರು ನಿವಾಸಿ ರಾಘವೇಂದ್ರ ಜೋಗಿ (48) ಅವರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮೃತರ ಸಹೋದರ ರಾಜೇಶ್‌ ಜೋಗಿ (42) ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಟ್‌ಬೆಲ್ತೂರು ಗ್ರಾಮದ ನಿವಾಸಿಯಾಗಿದ್ದ ರಾಘವೇಂದ್ರ ಜೋಗಿ ಅವರು ಕಳೆದ 18 ವರ್ಷಗಳಿಂದ ಕೋಟೇಶ್ವರದ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೆಪ್ಟೆಂಬರ್ 24 ರಂದು ಮಧ್ಯಾಹ್ನ ಸುಮಾರು 12:30 ರ ವೇಳೆಗೆ ರಾಘವೇಂದ್ರ ಜೋಗಿ ಅವರು ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡಿರುವುದನ್ನು ಕುಟುಂಬಸ್ಥರು ಗಮನಿಸಿದ್ದಾರೆ.

    ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 1:19 ರ ವೇಳೆಗೆ ರಾಘವೇಂದ್ರ ಜೋಗಿ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
    ಘಟನೆ ನಡೆದ ಬಳಿಕ ಮೃತರ ಮನೆಯನ್ನು ಪರಿಶೀಲಿಸಿದಾಗ ಡೆತ್ ನೋಟ್ (Death Note) ಒಂದೇ ಸಿಕ್ಕಿದ್ದು, ಅದರಲ್ಲಿ ‘ತನ್ನ ಸಾವಿಗೆ ತಾನೇ ಕಾರಣ’ ಎಂದು ಬರೆದಿಡಲಾಗಿದೆ. ಯಾವುದೋ ವೈಯಕ್ತಿಕ ಸಮಸ್ಯೆಯಿಂದ ಅಥವಾ ಇತರ ವಿಚಾರಗಳಿಂದ ತೀವ್ರ ಮನನೊಂದು ಸೆಪ್ಟೆಂಬರ್ 24 ರ ಬೆಳಿಗ್ಗೆ 09:45 ರಿಂದ ಮಧ್ಯಾಹ್ನ 12:30 ರ ನಡುವಿನ ಅವಧಿಯಲ್ಲಿ ಅವರು ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಕ್ರಮಾಂಕ 31/2026 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    #karnataka
    Previous Articleಉಡುಪಿ: ಪೆಟ್ರೋಲ್ ಪಂಪ್ ಬಳಿ ಬಸ್ ಸುಟ್ಟು ಕರಕಲು; ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅವಘಡ
    Next Article ಅಟ್ಟಿಕಾ ಗೋಲ್ಡ್ ವಿರುದ್ಧ ತನಿಖೆ ತೀವ್ರ; ಇಡಿ ಬಳಿಕ 19 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ

    Related Posts

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026

    ಮಾಣಿ ಬಳಿ ಬೆಳಂಬೆಳಗ್ಗೆ ಭೀಕರ ಅಪಘಾತ; ಓರ್ವ ಮಹಿಳೆ ಮೃತ್ಯು, ಮೂವರು ಗಂಭೀರ

    September 28, 2026

    ಉಡುಪಿ: ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ; APK ಫೈಲ್ ಕಳುಹಿಸಿ ₹17.50 ಲಕ್ಷ ಎಗರಿಸಿದ ಖದೀಮರು

    September 28, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ 15ರ ಬಾಲಕಿಯ ಸಾಧನೆ ವಿಶ್ವ ದಾಖಲೆ ; ಪರೀಕ್ಷಾ ಒತ್ತಡದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ ವಿಷ್ಣುಪ್ರಿಯಾ

    September 28, 2026

    “ಪೊಲೀಸ್ ಪವರ್ ತೋರಿಸಬೇಡಿ ಸಮವಸ್ತ್ರ ಬಿಚ್ಚಿ ನಿಲ್ಲಿಸ್ತೀನಿ ” ಉಲ್ಲಾಳ ಇನ್‌ಸ್ಪೆಕ್ಟರ್‌ ಕ್ರಮಕ್ಕೆ ಹೈಕೋರ್ಟ್‌ ತರಾಟೆ

    September 28, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.