Close Menu
    What's Hot

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    October 1, 2026

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026
    Facebook X (Twitter) Instagram
    Facebook X (Twitter) Instagram
    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Subscribe
    • Homepage
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Nirantara News | Kannada News | Karnataka Latest UpdatesNirantara News | Kannada News | Karnataka Latest Updates
    Home»ಅಪರಾಧ»ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ
    ಅಪರಾಧ

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    adminBy adminOctober 1, 2026No Comments1 Min Read

    ಮಂಗಳೂರು : ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್  ಸಂಸ್ಥೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಾಳುಗಳಿಗೆ ಸಮರ್ಪಕ ಚಿಕಿತ್ಸೆ ಮತ್ತು ಸುರಕ್ಷತೆ ಒದಗಿಸಬೇಕು ಎಂದು ಒತ್ತಾಯಿಸಿ ಎಂಆರ್‌ಪಿಎಲ್ ಕಾರ್ಗೊ ಗೇಟ್ ಬಳಿ ಗುರುವಾರ ಬೃಹತ್ ಪ್ರತಿಭಟನೆ ಮತ್ತು ಧರಣಿ ಆರಂಭವಾಗಿದೆ.

    ಎಂಆರ್‌ಪಿಎಲ್ ಕಾರ್ಮಿಕರ ಸಂಘ, ಕರ್ಮಚಾರಿ ಸಂಘ ಹಾಗೂ ಬಿಎಂಎಸ್  ಕಾರ್ಮಿಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಈ ಧರಣಿ ನಡೆಯುತ್ತಿದ್ದು, ನೂರಾರು ಕಾರ್ಮಿಕರು ಭಾಗವಹಿಸಿದ್ದಾರೆ.
    ದುರಂತದಲ್ಲಿ ಮೃತಪಟ್ಟ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ತಕ್ಷಣವೇ ಪರಿಹಾರ ಒದಗಿಸಬೇಕು. ಗಾಯಗೊಂಡ ಹಾಗೂ ಇಎಸ್‍ಐ ಸೌಲಭ್ಯವಿಲ್ಲದ ಕಾರ್ಮಿಕರಿಗೆ ಗರಿಷ್ಠ ₹10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಸೌಲಭ್ಯವನ್ನು ಕಲ್ಪಿಸಬೇಕು.ಘಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕಾರ್ಮಿಕರ ಜೀವ ರಕ್ಷಣೆಗೆ ಕಟ್ಟುನಿಟ್ಟಿನ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಸವಲತ್ತುಗಳನ್ನು ಹೆಚ್ಚಿಸಬೇಕು.

    ಇಎಸ್‌ಐ ಸೌಲಭ್ಯವಿಲ್ಲದ ಕಾರ್ಮಿಕರಿಗೆ ₹5 ಲಕ್ಷದವರೆಗೆ ವೈದ್ಯಕೀಯ ವೆಚ್ಚ ಮತ್ತು ಸವಲತ್ತು ನೀಡುವ ಕುರಿತು ಮುಂದಿನ 15 ದಿನಗಳ ಒಳಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಂಆರ್‌ಪಿಎಲ್ ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿದರು. ಆದರೆ ಈ ಭರವಸೆಯನ್ನು ಕಡಾಖಂಡಿತವಾಗಿ ತಳ್ಳಿಹಾಕಿದ ಪ್ರತಿಭಟನಾಕಾರರು, ಅಧಿಕಾರಿಗಳ ಮಾತಿಗೆ ಒಪ್ಪಲು ನಿರಾಕರಿಸಿದರು.
    ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರೇ  ಸ್ವತಃ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಎಲ್ಲಾ ಬೇಡಿಕೆಗಳ ಕುರಿತು ಲಿಖಿತ ಭರವಸೆ ನೀಡಬೇಕು. ಇಲ್ಲದಿದ್ದರೆ ಸ್ಫೋಟದಲ್ಲಿ ಮೃತಪಟ್ಟ ಮನೀಶ್ ಕರ್ಕೇರ ಅವರ ಮೃತದೇಹವನ್ನು ನೇರವಾಗಿ ಕಂಪನಿಯ ಕಾರ್ಗೊ ಗೇಟ್‌ ಬಳಿಗೇ ತಂದು ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸುತ್ತೇವೆ” ಎಂದು ಕಾರ್ಮಿಕ ನಾಯಕರು ತೀವ್ರ ಎಚ್ಚರಿಕೆ ನೀಡಿದ್ದಾರೆ.

    #crime #dakshinakannada
    Previous Articleಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    Related Posts

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026

    ಎಂಆರ್‌ಪಿಎಲ್‌ ಸ್ಫೋಟ ಪ್ರಕರಣ; ಸಂಸ್ಥೆ ಹಾಗೂ ಘಟಕದ ಮುಖ್ಯಸ್ಥರ ನಿರ್ಲಕ್ಷ್ಯ ಆರೋಪಿಸಿ ಎಫ್ಐಆರ್

    October 1, 2026
    Add A Comment
    Leave A Reply Cancel Reply

    ಪ್ರಮುಖ ಸುದ್ದಿ

    ಎಂಆರ್‌ಪಿಎಲ್ ಸ್ಫೋಟ: ಮೃತ ಕಾರ್ಮಿಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ; ಕಾರ್ಗೊ ಗೇಟ್ ಬಳಿ ಬೃಹತ್ ಧರಣಿ

    October 1, 2026

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    AI ಬಳಸಿ ನಕಲಿ ಪೊಲೀಸ್ ನೇಮಕಾತಿ ಹಾಲ್‌ಟಿಕೆಟ್‌ ಸೃಷ್ಟಿ; ಕಡಬದ ಯುವಕ ಅರೆಸ್ಟ್

    October 1, 2026

    ಕಾಕ್‌ಪಿಟ್‌ನಲ್ಲಿ ಪೈಲಟ್‌ಗೆ ಇರಿತ; ದುಬೈ–ಇಸ್ರೇಲ್ ವಿಮಾನ ದುರಂತ ತಪ್ಪಿಸಿ 180 ಜನರ ಜೀವ ಉಳಿಸಿದ ‘ಹೀರೋ’ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಪ್ರಯಾಣಿಕರಲ್ಲಿದ್ದ ದಂತವೈದ್ಯನಿಂದ ತಕ್ಷಣದ ಚಿಕಿತ್ಸೆ

    October 1, 2026
    Advertisement

    Nirantara News is powered by a team of experienced media professionals with decades of expertise in television journalism. Our mission is to be the voice of the people by delivering truthful, unbiased, and responsible news. We cover local, state, national, and international news, along with the latest updates on health, entertainment, real estate, business, technology, and more.

    Backed by experienced reporters and a strong legal team, we are committed to providing accurate news and honest reviews.

    Subscribe to Nirantara News and support trusted journalism.

    Top Insights

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್, 3 ಸಿಮ್‌ಕಾರ್ಡ್‌ ಪತ್ತೆ; ನಿಷೇಧಿತ ವಸ್ತುಗಳ ಪ್ರವೇಶದ ಬಗ್ಗೆ ತನಿಖೆ ಆರಂಭ

    October 1, 2026

    ಸೌಜನ್ಯಾ ಪ್ರಕರಣ ಮರುತನಿಖೆ: SITಯಿಂದ ಹಿಂದೆ ಸರಿಯಲು ಎಎಸ್‌ಪಿ ವೆಂಕಟೇಶ್ ಪ್ರಸನ್ನ ಮನವಿ

    October 1, 2026
    Social Follow
    • Facebook
    • Instagram
    © 2026 Nirantara News. Designed by Blueline Computers.
    • Home
    • ಕರಾವಳಿ ಸುದ್ದಿ
    • ಅಪರಾಧ
    • ಕರ್ನಾಟಕ
    • ರಾಷ್ಟ್ರೀಯ
    • ಅಂತರಾಷ್ಟ್ರೀಯ
    • ಸ್ಥಿರಾಸ್ತಿ ಮತ್ತು ಮೂಲಸೌಕರ್ಯ
    • ಆರೋಗ್ಯ

    Type above and press Enter to search. Press Esc to cancel.